ಮಾನ್ಯ ಪ್ರಧಾನಮಂತ್ರಿಗಳಾದ ನೆತನ್ಯಾಹು ಅವರೆ,
ಮಹಿಳೆಯರೇ ಮತ್ತು ಮಹನೀಯರೇ,
ಶಲೋ ಮ್ಲೆಕುಲಾಮ್ ಆನಿಸೆ ಮ್ಯಾಮಾ ಯೊದ್ಲೆಹಿಯಾಟ್ಪೊ (ಇಸ್ರೇಲ್’ಗೆ ಬಂದಿರುವುದಕ್ಕೆ ನನಗೆ ಖುಷಿಯಾಗಿದೆ). ಇಸ್ರೇಲ್’ಗೆ ಈ ಮಹತ್ವದ ಭೇಟಿ ನೀಡುತ್ತಿರುವ ಮೊಟ್ಟ ಮೊದಲ ಭಾರತದ ಪ್ರಧಾನಮಂತ್ರಿ ಎಂದೆನಿಸಿಕೊಳ್ಳುವ ಗೌರವ ನನಗೆ ದೊರೆತಿದೆ. ನನ್ನ ಸ್ನೇಹಿತ, ಪ್ರಧಾನಮಂತ್ರಿ ನೇತನ್ಯಾಹು ಅವರ ಈ ಆಹ್ವಾನಕ್ಕಾಗಿ ಮತ್ತು ನನಗೆ ದೊರೆತ ಈ ಆತ್ಮೀಯ ಸ್ವಾಗತಕ್ಕಾಗಿ ಅವರಿಗೆ ನಾನು ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ. ತುಂಬು ಪ್ರೀತಿಯಿಂದ ನನ್ನನ್ನು ಬರಮಾಡಿಕೊಂಡಿರುವುದಕ್ಕೆ ಧನ್ಯವಾದ ಬಯಸುತ್ತೇನೆ . ನನ್ನಭೇಟಿಯು ನಮ್ಮಸಮಾಜಗಳ ನಡುವಿನ ಶತಮಾನಗಳಷ್ಟು ಹಳೆಯದಾದ ಸಂಬಂಧಗಳನ್ನು ಮತ್ತಷ್ಟು ಬಲಿಷ್ಟಗೊಳಿಸಲಿದೆ. ಈ ಅನುಬಂಧದ ಆಧಾರದ ಮೇಲೆ ನಮ್ಮಪಾಲುದಾರಿಕೆಯು, 25 ವರ್ಷಗಳ ಹಿಂದೆ ಸಂಪೂರ್ಣ ರಾಜತಾಂತ್ರಿಕ ಸಂಬಂಧವನ್ನು ಸ್ಥಾಪಿಸಿದಾಗಿನಿಂದ ಬಲವಾಗಿ ಮತ್ತು ನಿರಂತರವಾಗಿ ಏಳಿಗೆಯನ್ನುಕಾಯ್ದುಕೊಂಡುಬರುತ್ತಿದೆ.
ಸ್ನೇಹಿತರೇ,
ಇಸ್ರೇಲ್’ನ ಜನರು ಪ್ರಜಾಪ್ರಭುತ್ವ ತತ್ವಗಳ ಮೇಲೆ ಈ ರಾಷ್ಟ್ರವನ್ನು ನಿರ್ಮಿಸಿದ್ದಾರೆ. ಅವರು ಇದನ್ನು ಕಠಿಣ ಪರಿಶ್ರಮ ಚತುರತೆ ಮತ್ತು ಹೊಸತನ್ನು ಹುಡುಕುವ ಉತ್ಸಾಹದೊಂದಿಗೆ ಪೋಷಿಸುತ್ತಾ ಬಂದಿದ್ದಾರೆ. ನೀವು ಅಡೆತಡೆಗಳನ್ನು ಲೆಕ್ಕಿಸದೆ ಮತ್ತು ಸವಾಲುಗಳನ್ನು ಅವಕಾಶಗಳನ್ನಾಗಿ ಮಾರ್ಪಡಿಸಿಕೊಂಡು ಮುನ್ನಡೆಯುತ್ತಾ ಬಂದಿದ್ದೀರಿ. ಭಾರತವು ನಿಮ್ಮ ಸಾಧನೆಗಳನ್ನು ಶ್ಲಾಘಿಸುತ್ತದೆ.
ಇಂದು ಜುಲೈ 4, ಸರಿಯಾಗಿ 41ವರ್ಷಗಳ ಹಿಂದೆ ಆಪರೇಷನ್ ಎಂಟೆಬ್ಬೆ ತರುವಾಯ, ಅಂದು ಅನೇಕ ಇಸ್ರೇಲಿ ಒತ್ತೆಯಾಳುಗಳ ಜೀವಗಳನ್ನು ರಕ್ಷಿಸುವ ಸಂದರ್ಭದಲ್ಲಿ. ನಿಮ್ಮ ಪ್ರಧಾನಮಂತ್ರಿ ಮತ್ತು ನನ್ನ ಸ್ನೇಹಿತ ಬಿಬಿ ಅವರು ತಮ್ಮ ಹಿರಿಯ ಸೋದರ ಅವರನ್ನು ಕಳೆದುಕೊಂಡಿದ್ದರು. ನಿಮ್ಮನಾಯಕರು ಯುವಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ.
ಸ್ನೇಹಿತರೇ,
ಭಾರತವು ಬಹಳಷ್ಟು ಪ್ರಾಚೀನವಾದ ನಾಗರೀಕತೆಯನ್ನು ಹೊಂದಿದ್ದರೂ ಯುವ ರಾಷ್ಟ್ರವಾಗಿದೆ. ಭಾರತದಲ್ಲಿ 800 ಮಿಲಿಯನ್ ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.ಭಾರತದ ಪ್ರತಿಭಾವಂತ ಮತ್ತು ಕೌಶಲ್ಯವುಳ್ಳ ಯುವಜನತೆ ಅದರ ಚಾಲನಾ ಶಕ್ತಿಯೂ ಹೌದು. ಅವರು ಭಾರತವನ್ನು ಅದರ ಉದ್ಯಮ ಆರ್ಥಿಕತೆ, ವ್ಯಾಪಾರ ಮಾಡುವ ಮಾರ್ಗ, ಮತ್ತು ಪ್ರಪಂಚದೊಂದಿಗೆ ಅದರ ಸಂಪರ್ಕವನ್ನು ಪರಿವರ್ತಿಸುವ ನನ್ನ ಸಂಕಲ್ಪವನ್ನು ಮುನ್ನಡೆಸುತ್ತಿದ್ದಾರೆ..
ಸ್ನೇಹಿತರೇ,
ನಿರಂತರ ಉನ್ನತಮಟ್ಟದ ಬೆಳವಣಿಗೆ ಮತ್ತು ಸರ್ವತೋಮುಖ ಅಭಿವೃದ್ಧಿಯ ನಮ್ಮಮಾರ್ಗದಲ್ಲಿ, ಭಾರತವು ಇಸ್ರೇಲ್ ಅನ್ನು ತನ್ನ ಪ್ರಮುಖ ಪಾಲುದಾರರಲ್ಲಿ ಒಂದಾಗಿ ಪರಿಗಣಿಸುತ್ತದೆ. ಎರಡೂ ದೇಶಗಳಲ್ಲಿ ಅಭಿವೃದ್ಧಿಯ ಸವಾಲುಗಳನ್ನು ಜಯಿಸಲು ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಮತ್ತು ಉನ್ನತಮಟ್ಟದ ತಾಂತ್ರಿಕ ಶಿಕ್ಷಣವನ್ನು ಅವಲಂಬಿಸಬೇಕಾಗಿರುವುದು ನಮಗೆ ಸಾಮಾನ್ಯವಾಗಿದೆ. ಈ ಕ್ಷೇತ್ರಗಳು ಎರಡು ದೇಶಗಳ ಅತ್ಯಂತ ಪರಿಣಿತ ಯುವಜನತೆ ಮತ್ತು ಉದ್ಯಮಿಗಳ ಸೃಜನಶೀಲಶಕ್ತಿ ಮತ್ತು ಆಲೋಚನೆಗಳನ್ನು ಕೂಡಾ ಒಟ್ಟಿಗೆ ತರುತ್ತವೆ. ಅದೇವೇಳೆ
ಆರ್ಥಿಕ ಸಮೃದ್ಧಿಯ ಹಂಚಿಕೆಯಲ್ಲಿ ಪಾಲುದಾರಿಕೆಯನ್ನು ನಿರ್ಮಿಸುವುದರ ಜೊತೆಗೆ, ನಾವು ಭಯೋತ್ಪಾದನೆ ಮುಂತಾದ ಸಾಮಾನ್ಯ ಬೆದರಿಕೆಗಳ ವಿರುದ್ಧ ನಮ್ಮಸಮಾಜಗಳನ್ನು ರಕ್ಷಿಸಲು ಸಹಕರಿಸುತ್ತವೆ.
ಈಎಲ್ಲ ಕ್ಷೇತ್ರಗಳಲ್ಲಿ ಪ್ರಗತಿಶೀಲಪಾಲುದಾರಿಕೆಯು ಪ್ರಧಾನಮಂತ್ರಿ ನೆತನ್ಯಾಹು ಅವರೊಂದಿಗೆ ನಾನು ನಡೆಸಲಿರುವ ಮಾತುಕತೆಯ ಪ್ರಾಮುಖ್ಯತೆಯನ್ನು ರೂಪಿಸುತ್ತವೆ. ನಮ್ಮ ಸಮಾಜಗಳೆರಡನ್ನೂ ಸಮೃದ್ಧಗೊಳಿಸಿದ ಭಾರತೀಯ ಮೂಲದ ಹೆಚ್ಚಿನ ಸಂಖ್ಯೆಯ ಯಹೂದಿಗಳು ಸೇರಿದಂತೆ, ಇಸ್ರೇಲ್’ನಲ್ಲಿರುವ ಭಾರತೀಯ ವಲಸಿಗರೊಂದಿಗೆ ಮಾತುಕತೆ ನಡೆಸಲು ಸಹ ನಾನು ಉತ್ಸುಕನಾಗಿದ್ದೇನೆ..
ಮಾನ್ಯರೇ ಮತ್ತು ಸ್ನೇಹಿತರೇ,
ನನ್ನಭೇಟಿಯು ನಿಶ್ಚಿತ ಕಾರ್ಯಕ್ರಮಗಳ ಪ್ರಯಾಣಕ್ಕಿಂತ ಭಿನ್ನವಾಗಿರಲಿದೆ. ನಮ್ಮಜನರು ಮತ್ತು ಸಮಾಜಗಳ ಒಳ್ಳೆಯದಕ್ಕಾಗಿ ಈ ಪ್ರಯಾಣದಲ್ಲಿ ಒಟ್ಟಿಗೆ ಸಾಗಲು ನಾವು ಉತ್ಸುಕರಾಗಿದ್ದೇವೆ .ನಾವು ಒಟ್ಟಾಗಿ ನಡೆಯುತ್ತಾ, ಇಸ್ರೇಲ್’ನೊಂದಿಗೆ ಬಲವಾದ ಮತ್ತು ಚೈತನ್ಯದಾಯಕ ಪಾಲುದಾರಿಕೆಯು ನನ್ನ ಉದ್ದೇಶ ಮತ್ತು ಆದ್ಯತೆಯಾಗಿರುತ್ತದೆ. ಈ ಸ್ವಾಗತಕ್ಕಾಗಿ ನಾನು ನಿಮಗೆ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ.
ನಿಮಗೆ ತುಂಬು ಹೃದಯದ ಧನ್ಯವಾದಗಳು.
My honour to be the 1st ever Indian PM to undertake this ground breaking visit to Israel: PM @narendramodi
— PMO India (@PMOIndia) July 4, 2017
I thank my friend PM @netanyahu for receiving me. My visit is about the strength of our societies and our strong partnership: PM
— PMO India (@PMOIndia) July 4, 2017
My honour to be the 1st ever Indian PM to undertake this ground breaking visit to Israel: PM @narendramodi
— PMO India (@PMOIndia) July 4, 2017
India is an old civilisation but young nation. We have a talented and skilled youth, who are our driving force: PM @narendramodi
— PMO India (@PMOIndia) July 4, 2017
We consider Israel an important development partner: PM @narendramodi
— PMO India (@PMOIndia) July 4, 2017
We have to secure our societies against the common threat of terrorism: PM @narendramodi
— PMO India (@PMOIndia) July 4, 2017
This is an exciting journey that we will undertake together, for the good of our people and our society: PM @narendramodi to PM @netanyahu
— PMO India (@PMOIndia) July 4, 2017
Partners for peace and prosperity, partners for a better future for humanity...PM @netanyahu welcomes PM @narendramodi to Israel. pic.twitter.com/mZgl8pAqz2
— PMO India (@PMOIndia) July 4, 2017