ಘನತೆವೆತ್ತ ಅಧ್ಯಕ್ಷರಾದ ಅಲೆಕ್ಸಾಂಡರ್ ಲುಕಾಶೆಂಕು ಅವರೇ,
ಸ್ನೇಹಿತರೆ,
ಮಾಧ್ಯಮದ ಸದಸ್ಯರೇ,
ನಾನು ಅಧ್ಯಕ್ಷರಾದ ಲುಕಶೆಂಕು ಅವರನ್ನು ಭಾರತಕ್ಕೆ ಸ್ವಾಗತಿಸಲು ಹರ್ಷಿಸುತ್ತೇನೆ. ನಮ್ಮ ಎರಡೂ ದೇಶಗಳು ರಾಜತಾಂತ್ರಿಕ ಸಂಬಂಧದ 25ನೇ ವರ್ಷವನ್ನು ಈ ವರ್ಷ ಆಚರಿಸುತ್ತಿರುವ ಸಂದರ್ಭದಲ್ಲಿ ಅವರ ಭೇಟಿ ಆಗಿದೆ.
ಇದಕ್ಕೂ ಮುನ್ನ ನಮಗೆ ಅಧ್ಯಕ್ಷ ಲುಕಶೆಂಕು ಅವರನ್ನು 1997 ಮತ್ತು 2007ರಲ್ಲಿ ಭಾರತದಲ್ಲಿ ಸ್ವಾಗತಿಸುವ ಅವಕಾಶ ಲಭಿಸಿತ್ತು. ಅವರ ಈ ಭೇಟಿಯ ವೇಳೆ, ಘನತೆವೆತ್ತ ಅಧ್ಯಕ್ಷರು ಭಾರತದಲ್ಲಿ ಆಗುತ್ತಿರುವ ಪರಿವರ್ತನೆಯ ಅನುಭವದ ಅವಕಾಶ ಪಡೆಯಲಿದ್ದಾರೆ ಎಂಬ ವಿಶ್ವಾಸ ನನಗಿದೆ.
ಇಂದು ನಮ್ಮ ಚರ್ಚೆ ವಿಸ್ತೃತ ಶ್ರೇಣಿ ಮತ್ತು ಮುನ್ನೋಟದಿಂದ ಕೂಡಿದ್ದವು. ಅವು ನಮ್ಮ ಎರಡೂವರೆ ದಶಕದ ಆಪ್ತ ಬಾಂಧವ್ಯವನ್ನು ಗುರುತಿಸಲಾಗಿದೆ. ನಾವು, ದ್ವಿಪಕ್ಷೀಯ ವಿಷಯಗಳ ಮತ್ತು ಪ್ರಾದೇಶಿಕ ಹಾಗೂ ಜಾಗತಿಕ ಬೆಳವಣಿಗೆಗಳ ಕುರಿತಂತೆ ವಿಚಾರ ವಿನಿಮಯ ಮಾಡಿಕೊಂಡಿದ್ದೇವೆ. ನಾವು ನಮ್ಮ ಪಾಲುದಾರಿಕೆಯ ಸ್ವರೂಪವನ್ನು ಪರಾಮರ್ಶಿಸಿದ್ದೇವೆ. ಅದನ್ನು ಮತ್ತಷ್ಟು ವಿಸ್ತರಿಸಲು ಕಲ್ಪನೆಗಳು ಮತ್ತು ಉಪಕ್ರಮಗಳನ್ನು ಪರಿಗಣಿಸಿದ್ದೇವೆ. ನಾವು ಸಹಕಾರದ ಎಲ್ಲ ಅಂಶಗಳಲ್ಲಿ ನಮ್ಮ ಮಾತುಕತೆಯನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ.
ನಮ್ಮ ಜನರ ಲಾಭಕ್ಕಾಗಿ ನಮ್ಮ ಪಾಲುದಾರಿಕೆಯನ್ನು ಎತ್ತರಕ್ಕೆ ಕೊಂಡೊಯ್ಯುವ ಇಚ್ಛೆ ಮತ್ತು ಉತ್ಸಾಹ ತಾಳೆಯಾಗುತ್ತಿರುವುದನ್ನು ನಾನು ಅಧ್ಯಕ್ಷ ಲುಕಶಂಕು ಅವರಲ್ಲಿ ಕಂಡಿದ್ದೇನೆ.
ನಾವು ನಮ್ಮ ಆರ್ಥಿಕ ನಂಟಿನ ವೈವಿಧ್ಯತೆಯ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ. ಈ ಗಮನವು ಸ್ವಾಭಾವಿಕವಾಗಿ ಪೂರಕವಾಗಿ ನಿರ್ಮಾಣಮಾಡುವುದಾಗಿದೆ.
ನಮ್ಮ ಕಂಪನಿಗಳು ಮಾರಾಟಗಾರ-ಖರೀದಿದಾರ ಚೌಕಟ್ಟಿನಿಂದ ಆಳವಾದ ಕಾರ್ಯಕ್ರಮಗಳತ್ತ ಹೊರಹೊಮ್ಮಬೇಕಿದೆ. ಔಷಧೀಯ, ತೈಲ ಮತ್ತು ಅನಿಲ, ಭಾರೀ ಯಂತ್ರೋಪಕರಣಗಳು ಮತ್ತು ಸಲಕರಣೆಗಳಲ್ಲಿ ಹೇರಳವಾದ ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳಿವೆ. ಕಳೆದ ವರ್ಷ ಭಾರತೀಯ ಕಂಪನಿಗಳು ಔಷಧ ಕ್ಷೇತ್ರದಲ್ಲಿ ಮೂರು ಜಂಟಿ ಸಹಯೋಗದೊಂದಿಗೆ ಧನಾತ್ಮಕ ಆರಂಭ ಮಾಡಿವೆ. ಟೈರುಗಳು, ಕೃಷಿ-ಕೈಗಾರಿಕಾ ಯಂತ್ರೋಪಕರಣಗಳು ಮತ್ತು ಗಣಿಗಾರಿಕೆ ಉಪಕರಣಗಳ ತಯಾರಿಕೆಯಲ್ಲಿ ಸಹಭಾಗಿತ್ವಕ್ಕಾಗಿ ಸಾಧ್ಯತೆಗಳಿವೆ. ಅಂತೆಯೇ, ಭಾರತದಲ್ಲಿ ಹೆಚ್ಚು ಸಾಮರ್ಥ್ಯದ ನಿರ್ಮಾಣ ಯಂತ್ರಗಳ ಬೇಡಿಕೆ ಹೆಚ್ಚುತ್ತಿದೆ ಮತ್ತು ಬೆಲಾರಸ್ ಕೈಗಾರಿಕಾ ಶಕ್ತಿಯನ್ನು ಹೊಂದಿದೆ.
ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ನಾವು ರಕ್ಷಣಾ ವಲಯದಲ್ಲಿ ಜಂಟಿ ಉತ್ಪಾದನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲಿದ್ದೇವೆ. ಬೆಲಾರಸ್ ನಲ್ಲಿ ನಿರ್ದಿಷ್ಟ ಯೋಜನೆಗಳಿಗೆ 2015ರಲ್ಲಿ ಭಾರತವು ನೀಡಿದ್ದ 100 ದಶಲಕ್ಷ ಅಮೆರಿಕನ್ ಡಾಲರ್ ಲೈನ್ ಆಫ್ ಕ್ರೆಡಿಟ್ ಬಳಕೆಯ ಚರ್ಚೆಯಲ್ಲೂ ನಾವು ಪ್ರಗತಿ ಸಾಧಿಸಿದ್ದೇವೆ.
ಭಾರತವು ಬೆಲಾರಸ್ ನೊಂದಿಗೆ ಬಹುಪಕ್ಷೀಯ ಆರ್ಥಿಕ ಉಪಕ್ರಮಗಳಡಿಯಲ್ಲಿ ಅಂದರೆ ಯುರೇಷಿಯನ್ ಆರ್ಥಿಕ ಒಕ್ಕೂಟ (ಇಇಯು) ಮತ್ತು ಅಂತಾರಾಷ್ಟ್ರೀಯ ಉತ್ತರ ದಕ್ಷಿಣ ಸಾರಿಗೆ ಕಾರಿಡಾರ್ ಸಂಪರ್ಕವನ್ನು ಹೊಂದಿದೆ. ಇಇಯುನೊಂದಿಗೆ ಭಾರತವು ಮುಕ್ತ ವಾಣಿಜ್ಯ ಒಪ್ಪಂದಕ್ಕಾಗಿ ಮಾತುಕತೆ ಮುಂದುವರಿಸಿದೆ.
ಸ್ನೇಹಿತರೆ,
ವಿಜ್ಞಾನ ಮತ್ತು ತಂತ್ರಜ್ಞಾನ ನಮ್ಮ ಸಹಕಾರವನ್ನು ಬಲಪಡಿಸಲು ಗಮನಹರಿಸಬೇಕಾದ ಮತ್ತೊಂದು ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಬೆಲಾರಸ್ ದೀರ್ಘ ಕಾಲದ ಪಾಲುದಾರನಾಗಿದೆ.
ನಾವಿನ್ಯತೆ ಮತ್ತು ವಾಣಿಜ್ಯೀಕರಣಕ್ಕೆ ಲೋಹಶಾಸ್ತ್ರ ಮತ್ತು ಸರಕುಗಳು, ನ್ಯಾನೊ-ವಸ್ತುಗಳು, ಜೈವಿಕ ಮತ್ತು ವೈದ್ಯಕೀಯ ವಿಜ್ಞಾನಗಳು ಮತ್ತು ರಾಸಾಯನಿಕ ಮತ್ತು ಎಂಜಿನಿಯರಿಂಗ್ ವಿಜ್ಞಾನಗಳಂತ ಕ್ಷೇತ್ರಗಳಲ್ಲಿ ಸೂಕ್ತವಾದ ಒತ್ತು ನೀಡಲಾಗುತ್ತಿದೆ. ನಾವು ಈ ಪ್ರಕ್ರಿಯೆಯಲ್ಲಿ ನಮ್ಮ ಯುವಕರ ಪಾಲ್ಗೊಳ್ಳುವಿಕೆಗೆ ಪೋಷಣೆ ನೀಡುತ್ತೇವೆ.
ನಾವು ಬೆಲಾರಸ್ ತಂತ್ರಜ್ಞಾನವನ್ನು ಪ್ರದರ್ಶಿಸುವ ಸಲುವಾಗಿ ಭಾರತದಲ್ಲಿ ತಂತ್ರಜ್ಞಾನ ಪ್ರದರ್ಶನ ಕೇಂದ್ರವನ್ನು ಸ್ಥಾಪಿಸುವ ಸಾಧ್ಯತೆಯನ್ನು ಬಳಸಿಕೊಳ್ಳುತ್ತಿದ್ದೇವೆ.
ಬೆಲಾರಸ್ ನೊಂದಿಗೆ ಭಾರತದ ಮತ್ತೊಂದು ಪಾಲುದಾರಿಕೆಯ ಆಯಾಮವು ಅಭಿವೃದ್ಧಿ ಸಹಕಾರದಲ್ಲಿ ಇದೆ. ಭಾರತೀಯ ತಂತ್ರಜ್ಞಾನ ಮತ್ತು ಆರ್ಥಿಕ ಸಹಕಾರ ಕಾರ್ಯಕ್ರಮದಲ್ಲಿ ಬೆಲಾರಸ್ ಸಹ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ.
ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ, ನಮ್ಮ ಎರಡೂ ರಾಷ್ಟ್ರಗಳು ಪರಸ್ಪರ ಹಿತಾಸಕ್ತಿಯ ವಿಚಾರಗಳಲ್ಲಿ ಆಪ್ತ ಸಹಕಾರ ಮತ್ತು ಸಮಾನ ನಿಲುವು ಹೊಂದಿವೆ.
ಭಾರತ ಮತ್ತು ಬೆಲಾರಸ್ ಎರಡೂ ಬಹುಪಕ್ಷೀಯ ವೇದಿಕೆಗಳಲ್ಲಿ ಪರಸ್ಪರ ಬೆಂಬಲವನ್ನು ಮುಂದುವರಿಸಲಿವೆ.
ಸ್ನೇಹಿತರೆ,
ಅಧ್ಯಕ್ಷ ಲುಕಶೆಂಕು ಮತ್ತು ನಾನು ಗುಡ್ ವಿಲ್ ಗಳಿಸಿರುವ ಎರಡೂ ದೇಶಗಳ ಜನರ ನಡುವಿನ ಸಾಂಸ್ಕೃತಿಕ ಸಂವಾದದ ಶ್ರೀಮಂತ ಇತಿಹಾಸದ ಬಗ್ಗೆ ಚರ್ಚಿಸಿದ್ದೇವೆ. ಭಾರತೀಯ ಸಂಸ್ಕೃತಿ, ಖಾದ್ಯ, ಚಲನಚಿತ್ರ, ಸಂಗೀತ, ನೃತ್ಯ, ಯೋಗ ಮತ್ತು ಆಯುರ್ವೇದಗಳಲ್ಲಿ ಬೆಲಾರಸ್ ನ ಅನೇಕ ಜನರು ಸಕ್ರಿಯ ಆಸಕ್ತಿಯನ್ನು ಹೊಂದಿದ್ದಾರೆ ಎಂದು ನಾನು ತಿಳಿದಿದ್ದೇನೆ.
ನಮ್ಮ ಬಾಂಧವ್ಯಕ್ಕೆ ಇನ್ನೂ ಬಲವಾದ ಬುನಾದಿ ಹಾಕಲು ನಮ್ಮ ಪ್ರವಾಸೋದ್ಯಮ ಮತ್ತು ಜನರೊಂದಿಗಿನ ವಿನಿಮಯ ಉತ್ತಮ ಸಾಮರ್ಥ್ಯಹೊಂದಿದೆ ಎಂಬುದನ್ನು ನಾನು ಕಂಡಿದ್ದೇನೆ.
ಅಂತಿಮವಾಗಿ, ನಾನು ನಮ್ಮ ಗೌರವಾನ್ವಿತ ಅತಿಥಿಯಾಗಿರುವ ಅಧ್ಯಕ್ಷ ಲುಕಶೆಂಕು ಅವರಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಇಂದು ಮೂಡಿರುವ ಒಮ್ಮತ ಮತ್ತು ಫಲಶ್ರುತಿಗಳ ಜಾರಿಯ ವಿಚಾರದಲ್ಲಿ ಭಾರತವು ಬೆಲಾರಸ್ ನೊಂದಿಗೆ ಮುಂಬರುವ ದಿನ ಮತ್ತು ತಿಂಗಳುಗಳಲ್ಲಿ ಆಪ್ತವಾಗಿ ಶ್ರಮಿಸಲು ಬಯಸುತ್ತದೆ. ಭಾರತದಲ್ಲಿ ಲುಕಶಂಕು ಅವರಿಗೆ ಸ್ಮರಣೀಯ ವಾಸ್ತವ್ಯಕ್ಕಾಗಿ ಶುಭ ಕೋರುತ್ತೇನೆ.
ನಾನು ನಿಮಗೆ ಧನ್ಯವಾದ ಅರ್ಪಿಸುತ್ತೇನೆ