ಯೂರೋಪಿಯನ್ ಕಮೀಷನ್ ಅಧ್ಯಕ್ಷರಾದ ಉರ್ಸುಲಾ ವಾನ್ ಡೇರ್ ಲೇಯನ್ ಅವರಿಂದ ಪುನರಾಯ್ಕೆಯಾದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಯವರು ಇಂದು ಅಭಿನಂದನಾ ಕರೆ ಸ್ವೀಕರಿಸಿದರು.
ಸಾಮಾನ್ಯ ಸಾರ್ವತ್ರಿಕ ಚುನಾವಣೆಯಲ್ಲಿ ಯಶಸ್ವಿಯಾದ ಮತ್ತು ಐತಿಹಾಸಿಕ ಮೂರನೇ ಅವಧಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದರು. ಭಾರತದ ಪ್ರಜಾತಂತ್ರ ವ್ಯವಸ್ಥೆ ಮತ್ತು ಜಗತ್ತಿನ ಅತಿ ದೊಡ್ಡ ಚುನಾವಣೆಗಳನ್ನು ನಡೆಸಿದ ಹಿನ್ನೆಲೆಯಲ್ಲಿ ಅವರು ತೀವ್ರ ಅಭಿನಂದನೆ ಸಲ್ಲಿಸಿದರು.
ಅಧ್ಯಕ್ಷರಾದ ಉರ್ಸುಲಾ ವಾನ್ ಡೇರ್ ಲೇಯನ್ ಅವರಿಗೆ ಪ್ರಧಾನಮಂತ್ರಿಯವರು ಕೃತಜ್ಞತೆ ಸಲ್ಲಿಸಿದರು ಮತ್ತು ಭಾರತ – ಐರೋಪ್ಯ ಒಕ್ಕೂಟದ ಬಾಂಧವ್ಯ ಬಲವರ್ಧನೆ ಮತ್ತು ಹಂಚಿಕೆಯ ಮೌಲ್ಯಗಳು ಹಾಗೂ ತತ್ವಗಳನ್ನು ಪರಿಪಾಲಿಸುವುದಾಗಿ ಒತ್ತಿ ಹೇಳಿದರು.
ಈ ವರ್ಷ ಭಾರತ – ಯೂರೋಪ್ ಒಕ್ಕೂಟದ ಕಾರ್ಯತಂತ್ರ ಸಹಭಾಗಿತ್ವದ 20 ನೇ ವಾರ್ಷಿಕೋತ್ಸದ ವಿಶೇಷತೆಯನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಜಾಗತಿಕ ಒಳಿತಿಗಾಗಿ ಸಹಭಾಗಿತ್ವವನ್ನು ಮತ್ತಷ್ಟು ಬಲಗೊಳಿಸುವುದಾಗಿ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
ಯೂರೋಪಿನ ಸಂಸದೀಯ ಚುನಾವಣಾ ಪ್ರಕ್ರಿಯೆ ಇಂದಿನಿಂದ ಆರಂಭವಾಗುತ್ತಿದ್ದು, ಇದಕ್ಕೆ ಪ್ರಧಾನಮಂತ್ರಿಯವರು ಶುಭ ಹಾರೈಸಿದರು.
Thank President @vonderleyen for her call. As we mark the 20th anniversary of the 🇮🇳🇪🇺 Strategic Partnership, we are committed to working together to further strengthen the ties for global good. My best wishes for the European Parliamentary elections.
— Narendra Modi (@narendramodi) June 6, 2024