ವಿಶ್ವ ಸಂಸ್ಥೆ ಸಾಮಾನ್ಯ ಸಭೆಯ ನಿಯೋಜಿತ ಅಧ್ಯಕ್ಷರಾದ ಶ್ರೀಮತಿ ಮರಿಯಾ ಫೆರ್ನಾಂಡಾ ಎಸ್ಪಿನೋಸಾ ಗಾರ್ಸೆಸ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
73 ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷತೆಗೆ ಅಯ್ಕೆಯಾದುದಕ್ಕಾಗಿ ಶ್ರೀಮತಿ ಎಸ್ಪಿನೋಸಾ ಅವರನ್ನು ಪ್ರಧಾನ ಮಂತ್ರಿಯವರು ಅಭಿನಂದಿಸಿದರು. ವಿಶ್ವ ಸಂಸ್ಥೆಯ ಬರಲಿರುವ ಅಧಿವೇಶನದಲ್ಲಿ ತಮ್ಮ ಆದ್ಯತೆಗಳನ್ನು ಶ್ರೀಮತಿ ಎಸ್ಪಿನೋಸಾ ಅವರು ಹಂಚಿಕೊಂಡರು. ಪ್ರಧಾನ ಮಂತ್ರಿಯವರು ಅವರಿಗೆ ಭಾರತದ ಪೂರ್ಣ ಬೆಂಬಲದ ಭರವಸೆ ನೀಡಿದರಲ್ಲದೆ ಅವರ ಹೊಸ ಕರ್ತವ್ಯ ನಿಭಾವಣೆಯಲ್ಲಿ ರಚನಾತ್ಮಕ ಸಹಕಾರ ನೀಡುವುದಾಗಿಯೂ ಹೇಳಿದರು.
ಭಯೋತ್ಪಾದನೆ, ಸುಧಾರಣೆ ಮತ್ತು ವಾತಾವರಣ ಬದಲಾವಣೆ ಸಹಿತ ಪ್ರಮುಖ ಜಾಗತಿಕ ಸವಾಲುಗಳ ಬಗ್ಗೆ ವಿಶ್ವಸಂಸ್ಥೆ ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವನ್ನು ಅವರು ಚರ್ಚಿಸಿದರು.