Ayurveda isn’t just a medical practice. It has a wider scope and covers various aspects of public and environmental health too: PM
Government making efforts to integrate ayurveda, yoga and other traditional medical systems into Public Healthcare System: PM
Availability of affordable healthcare to the poor is a priority area for the Government: PM Modi
The simplest means to achieve Preventive Healthcare is Swachhata: PM Modi

ಇಲ್ಲಿ ಸೇರಿರುವ ಎಲ್ಲ ಆಯುರ್ವೇದದ ಪ್ರಿಯರೇ ಮತ್ತು ಶ್ರೇಷ್ಠ ಮಹನೀಯರೇ,

ನಿಮಗೆಲ್ಲರಿಗೂ ಹಾಗೂ ದೇಶದ ನಾಗರಿಕರಿಗೂ ಧನ್ವಂತರಿ ದಿನದ ಮತ್ತು ಆಯುರ್ವೇದ ದಿನದ ಶುಭಾಶಯಗಳು. ದೀಪಾವಳಿ ಹಬ್ಬದ ಆಚರಣೆಯ ಸಂಭ್ರಮ ಈಗಾಗಲೇ ಆರಂಭಗೊಂಡಿದೆ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಮತ್ತು ವಿಶ್ವದ ಎಲ್ಲೆಡೆ ನೆಲೆಗೊಂಡಿರುವ ಭಾರತೀಯ ಸಮುದಾಯಕ್ಕೂ ಸಂತೋಷಕರ ಮತ್ತು ಸಮೃದ್ಧಿಯ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ.

ತಂತ್ರಜ್ಞಾನದ ಸಹಕಾರದೊಂದಿಗೆ ಹಲವು ಆಯುರ್ವೇದ ಕಾಲೇಜುಗಳು ಈ ಕಾರ್ಯಕ್ರಮದೊಂದಿಗೆ ಸಂಪರ್ಕಗೊಂಡಿವೆ ಅವರೆಲ್ಲರಿಗೂ ನಾನು ಸ್ವಾಗತಕೋರುತ್ತೇನೆ. ದೇಶದ ಪ್ರಪ್ರಥಮ ಅಖಿಲ ಭಾರತೀಯ ಆಯುರ್ವೇದ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದಕ್ಕಾಗಿ ತಮ್ಮೆಲ್ಲರನ್ನೂ ನಾನು ಅಭಿನಂದಿಸಲೇಬೇಕು.

ಈ ಸಂಸ್ಥೆಯನ್ನು ಆರಂಭ ಮಾಡುವಲ್ಲಿ ಶ್ರಮಿಸಿದ ಹಾಗೂ ಧನ್ವಂತರಿ ಜಯಂತಿಯನ್ನು ಆಯುರ್ವೇದ ದಿನವನ್ನಾಗಿ ಆಚರಿಸುತ್ತಿರುವ ಆಯುಶ್ ಇಲಾಖೆ ಮತ್ತು ಅದರೊಂದಿಗೆ ಕೈಜೋಡಿಸಿದ ಎಲ್ಲ ಶ್ರೇಷ್ಠ ವ್ಯಕ್ತಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ.

ಸ್ನೇಹಿತರೇ, ದೇಶವು ತನ್ನ ಇತಿಹಾಸ, ಪರಂಪರೆ, ಸಂಸ್ಕøತಿ, ಮಹಿಮಾನ್ವಿತ ಸಂಪ್ರದಾಯಯವನ್ನು ಅರಿತುಕೊಳ್ಳದೇ ಮತ್ತು ಅದರ ಹೆಮ್ಮೆಯನ್ನು ತನ್ನದೆಂದು ಸ್ವೀಕರಿಸದೇ ಹೋದರೆ ಎಷ್ಟೇ ಪರಿಶ್ರಮ ಪಟ್ಟರೂ ಅಭಿವೃದ್ಧಿ ಹೊಂದಲು ಸಾಧ್ಯವೇ ಇಲ್ಲ. ಯಾವ ದೇಶಗಳು ತಮ್ಮ ಪರಂಪರೆಯನ್ನು ಮರೆತು ಮುಂದಕ್ಕೆ ಸಾಗಿವೆಯೋ ಅವು ಬಹುಬೇಗ ತಮ್ಮ ಗುರತನ್ನೇ ಕಳೆದುಕೊಂಡಿವೆ.

ಸ್ನೇಹಿತರೇ, ನಾವು ನಮ್ಮ ದೇಶದ ಇತಿಹಾಸವನ್ನೊಮ್ಮೆ ನೋಡಿದರೆ ಭಾರತವು ಈ ಹಿಂದೆ ಸಮೃದ್ಧ ಮತ್ತು ಅತ್ಯಂತ ಬಲಶಾಲಿ ರಾಷ್ಟ್ರ ಎನ್ನುವುದು ಗೋಚರಿಸುತ್ತದೆ. ಇತರೆ ದೇಶಗಳು ಭಾರತದ ಜ್ಞಾನ ಮತ್ತು ಬೌತಿಕತೆಯ ಜತೆ ಪೈಪೋಟಿ ನಡೆಸಲು ಸಾಧ್ಯವಿಲ್ಲ ಎನ್ನುವುದನ್ನು ಇತರೆ ದೇಶಗಳೂ ಅರಿತುಕೊಂಡಿವೆ.

ಆದ್ದರಿಂದಲೇ ಅವು ಪ್ರತ್ಯೇಕ ದಾರಿಯನ್ನು ಹುಡುಕಿಕೊಂಡಿವೆ. ನಾವು ಯಾವೆಲ್ಲಾ ಒಳ್ಳೆಯ ಸಂಗತಿಗಳನ್ನು ಹೊಂದಿದ್ದೇವೋ ಅವೆಲ್ಲವೂ ನಾಶವಾಗಬೇಕು ಎಂದು ಅವು ಬಯಸುತ್ತವೆ. ತಮ್ಮದನ್ನು ಸೃಷ್ಟಿ ಮಾಡಿಕೊಳ್ಳದ ಆ ದೇಶಗಳು ನಾವು ಮಾಡಿದ ಸಾಧನೆಯನ್ನು ಬಾಗಿಸಲು ಮತ್ತು ಅಳಿಸಿಹಾಕಲು ಪ್ರಯತ್ನಿಸಿವೆ.

ವಸಾಹತುಶಾಹಿ ಸಂದರ್ಭದಲ್ಲಿ ನಮ್ಮ ಸಂಪ್ರದಾಯ, ಋಷಿಗಳು, ರೈತರು, ವಿಜ್ಞಾನಿಗಳು, ಜ್ಞಾನ, ಯೋಗ, ಆಯುರ್ವೇದ ಮತ್ತಿತರೆಗಳು ಅಪಹಾಸ್ಯಕ್ಕೆ ಒಳಾಗಿದ್ದವು. ಅವರು ನಮ್ಮ ದೇಶದ ಈ ಸಾಮಥ್ರ್ಯವನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಮಾಡಿದರು. ಎಷ್ಟೆಂದರೆ ನಮ್ಮದೇ ಜನರು ಅವುಗಳ ಮೇಲೆ ನಂಬಿಕೆ ಕಳೆದುಕೊಳ್ಳುವ ಮಟ್ಟಿಗೆ ಈ ಪ್ರಯತ್ನ ನಡೆಯಿತು.

ನಾವು ದಾಸ್ಯ ವಿಮುಕ್ತಿಗೊಂಡ ನಂತರ ಏನೆಲ್ಲಾ ಉಳಿದುಕೊಂಡಿದೆಯೋ ಅದೆಲ್ಲವನ್ನೂ ಕಾಪಾಡಿಕೊಳ್ಳಬೇಕು ಮತ್ತು ಕಾಲಾನು ಕ್ರಮದಲ್ಲಿ ಆಧುನೀಕರಣಗೊಳಿಸಿಕೊಳ್ಳಬೇಕಿತ್ತು. ಆದರೆ ದುರಾದೃಷ್ಟವಶಾತ್ ಅದಕ್ಕೆ ಆದ್ಯತೆ ಸಿಗಲೇ ಇಲ್ಲ. ಅದೆಲ್ಲವನ್ನೂ ಅದರಷ್ಟಕ್ಕೆ ಬಿಡಲಾಯ್ತು.

ವಸಾಹತು ಸಂದರ್ಭದಲ್ಲಿ ನಮ್ಮ ಬಲವನ್ನು ಅಳಿಸಿಹಾಕುವ ಪ್ರಯತ್ನಗಳು ನಡೆದವು. ಸ್ವಾತಂತ್ರ್ಯದ ನಂತರವೂ ಇದೇ ಮುಂದುವರೆಯಿತು. ನಾವು ನಮ್ಮ ಪರಂಪರೆಯಿಂದ ಹಿಂದೆ ಸರಿದೆವು. ನಮ್ಮ ಪೂರ್ವಜನರಿಂದ ನಾವು ಬಳಸಲ್ಪಡುತ್ತಿದ್ದ ಜ್ಞಾನ ಮತ್ತು ಮಾಹಿತಿಯು ಇತರೆ ದೇಶಗಳಿಂದ ಪೇಟೆಂಟ್ ಪಡೆದುಕೊಂಡಿದ್ದವು. ಆ ದೇಶಗಳ ಕೈಗಳಿಂದ ಜಾರಿಹೋದವು.

ಇವತ್ತು ಅದೇ ಪರಂಪರೆ ಕೆಲವರ ಬೌದ್ಧಿಕ ಸಂಪತ್ತು ಎನಿಸಿಕೊಂಡಿದೆ. ಕಳೆದ ಮೂರು ವರ್ಷಗಳಲ್ಲಿ ಈ ಸನ್ನಿವೇಶವನ್ನು ಬದಲಾವಣೆ ಮಾಡುವ ಸಾಕಷ್ಟು ಪ್ರಯತ್ನಗಳು ನಡೆದಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ.

ಜನÀರ ಮನಸ್ಸಿನಲ್ಲಿ ನಮ್ಮ ಮಹೋನ್ನತ ಪರಂಪರೆ ಗೌರವವು ಸ್ಥಾಪನೆಗೊಳ್ಳುತ್ತಿದೆ .

ಆಯುರ್ವೇದ ದಿನ ಅಥವಾ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗಾ ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಜನರು ತಮ್ಮ ಸಾಂಸ್ಕøತಿಕ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ. ವಿವಿಧ ದೇಶಗಳ ಲಕ್ಷಾಂತರ ಜನರು ಯೋಗ ಮಾಡುತ್ತಿರುವ ಚಿತ್ರಣವನ್ನು ನೋಡುತ್ತಿದ್ದರೆ ಈ ಯೋಗದ ಮೂಲಕ ಲಕ್ಷಾಂತರ ಜನರು ಭಾರತದ ಪರಂಪರೆಯ ಜತೆಗೆ ಕೂಡಿಕೊಳ್ಳುತ್ತಿದ್ದಾರೆ ಎಂಬ ಭಾವನೆ ಮೂಡುತ್ತದೆ. ಎಲ್ಲ ಕಾಲದಲ್ಲೂ ಮಾನವನ ಉತ್ತರಾಧಿಕಾರವು ಕೊಡುಗೆಗಳ ಮೂಲಕ ಪರಿವರ್ತನೆಗೊಳ್ಳುತ್ತದೆ. ಕೆಲವು ಸಂದರ್ಭ ಮತ್ತು ದೇಶದ ವಿವಿಧ ಭಾಗಗಳಲ್ಲೂ ಇದು ನಿರಂತರವಾಗಿ ಸಾಗುತ್ತಿರುತ್ತದೆ. ಯೋಗ ಭಾರತದ ಮೂಲ ಪರಂಪರೆ. ಇವತ್ತು ಅದರ ಪರಂಪರೆಯು ಇಡೀ ಮಾನವ ಜನಾಂಗಕ್ಕೆ ಹರಡಿಕೊಳ್ಳುತ್ತಿದೆ.

ಈ ಪರಿವರ್ತನೆಯು ಕಳೆದ ಮೂರು ವರ್ಷಗಳಲ್ಲಿ ಹಾಕಿದ ಪರಿಶ್ರಮದ ಫಲ ಮತ್ತು ಇದರಲ್ಲಿ ಆಯುಷ್ ಇಲಾಖೆಯು ಮಹತ್ತರವಾದ ಪಾತ್ರವನ್ನು ವಹಿಸಿದೆ.

ಸೇಹಿತರೇ, ಆಯುರ್ವೇದ ಎನ್ನುವುದು ಕೇವಲ ಒಂದು ವೈದ್ಯಕೀಯ ಆಚರಣೆ ಅಥವಾ ಅಭ್ಯಾಸವಲ್ಲ. ಇದಕ್ಕೆ ತನ್ನದೇ ಆದ ವಿಸ್ತಾರವಾದ ವ್ಯಾಪ್ತಿಯಿದೆ. ಸಾಮಾಜಿಕ ಆರೋಗ್ಯ, ಸಾರ್ವಜನಿಕ ಆರೋಗ್ಯ, ಪರಿಸರ ಆರೋಗ್ಯ ಹೀಗೆ ನಾನಾ ವಿಷಯಗಳನ್ನು ಇದು ಒಳಗೊಂಡಿದೆ. ಈ ಅಗತ್ಯವನ್ನು ಮನಗಂಡೇ ಆಯುಷ್ನೆ ಆಯುರ್ವೇದ, ಯೋಗ ಮತ್ತಿತರೆ ಸಾರ್ವಜನಿಕ ಆರೋಗ್ಯ ರಕ್ಷಣೆಯ ವ್ಯವಸ್ಥೆಯನ್ನು ಒಳಗೊಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಆಯುಷ್ ಅನ್ನು ಅದರ ನಾಲ್ಕು ಆದ್ಯತೆಯ ಕ್ಷೇತ್ರಗಳ ಮೇಲೆ ಸರ್ಕಾರ ನೋಡುತ್ತಿದೆ. ಪ್ರತ್ಯೇಕ ಇಲಾಖೆಯನ್ನು ರೂಪಿಸುವ ಜತೆಜತೆಗೆ ನಮ್ಮ ರಾಷ್ಟ್ರೀಯ ಆರೋಗ್ಯ ನೀತಿಗಳನ್ನು ರೂಪಿಸುವ ಸಂದರ್ಭದಲ್ಲಿ ನಮ್ಮ ಆಯುಷ್ ವ್ಯವಸ್ಥೆಗಳನ್ನು ಅದರಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ.

ಆತ್ಮೀಯರೇ, ಆರೋಗ್ಯ ರಕ್ಷಣೆ ವ್ಯವಸ್ಥೆಯಲ್ಲಿ ಆಯುಷ್ ಒಳಗೊಳಿಸಿಕೊಳ್ಳುವಿಕೆಯು ಈ ಹಿಂದಿನಂತೆ ಕಡತಗಳಲ್ಲಿ ಮಾತ್ರ ಉಳಿಸುಕೊಳ್ಳುವುದಿಲ್ಲ ಅದನ್ನು ಅನುಷ್ಠಾನಕ್ಕೆ ತರುತ್ತಿದ್ದೇವೆ. ಆಯುಷ್ ಇಲಾಖೆಯು ಈ ದಿಕ್ಕಿನಲ್ಲಿ ಸಾಕಷ್ಟು ಹೆಜ್ಜೆಗಳನ್ನು ಮುಂದಿಟ್ಟಿದೆ. ರಾಷ್ಟ್ರೀಯ ಆರೋಗ್ಯ ರಕ್ಷಣೆ ಯೋಜನೆ, ರಾಷ್ಟ್ರೀಯ ಆಯುಷ್ ಮಿಷನ್, ಮಿಷನ್ ಮಧುಮೇಹ, ಆಯುಷ್ ಗ್ರಾಮ ಹೀಗೆ ಹಲವು ವಿಚಾರಗಳು ಶ್ರೀ ಶ್ರೀಪಾದ್ ನಾಯಕ್ ಅವರೊಂದಿಗೆ ಚರ್ಚಿಸಲ್ಪಟ್ಟಿವೆ.

 

ಸ್ನೇಹಿತರೇ, ಈ ದೇಶದಲ್ಲಿ ಆಯುರ್ವೇದದ ಕುಶಾಗ್ರಮತಿಯನ್ನು ಹೆಚ್ಚಿಸೇಕಿದ್ದರೆ ಎಲ್ಲ ಜಿಲ್ಲೆಗಳಲ್ಲೂ ಸಕಲ ಸೌಲಭ್ಯಗಳುಳ್ಳ ಸುಸಜ್ಜಿತ ಆಯುರ್ವೇದ ಆಸ್ಪತ್ರೆಗಳ ಸ್ಥಾಪನೆ ಅಗತ್ಯವಿದೆ. ಆಯುಷ್ ಇಲಾಖೆ ಈ ದಿಕ್ಕಿನಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ 65 ಆಯುಷ್ ಆಸ್ಪತ್ರೆಗಳನ್ನು ತೆರೆದಿದೆ. ಏಮ್ಸ್ ಮಾದರಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆಯನ್ನು ನಾನು ಇಂದು ಉದ್ಘಾಟನೆ ಮಾಡುತ್ತಿದ್ದೇನೆ.

ಇದು ಅಂತಹ ಮಹತ್ತರವಾದ ಪ್ರಯತ್ನಗಳಲ್ಲಿ ಒಂದು. ಈ ಆರಂಭಿಕ ಹಂತದಲ್ಲಿ ಇಲ್ಲಿಗೆ ನಿತ್ಯವೂ 750 ರೋಗಿಗಳು ಆಗಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ದ್ವಿಗುಣಗೊಳ್ಳಬೇಕು. ಸಾಮಾನ್ಯವಾಗಿ ಎಲ್ಲ ಕಾರ್ಯಕ್ರಮಗಳಲ್ಲೂ ಇಂತಹ ಮಾತುಗಳನ್ನು ಆಡಲಾಗುತ್ತದೆ. ನಿಮ್ಮ ಕೆಲಸ ಇನ್ನಷ್ಟು ಹೆಚ್ಚಾಗಬೇಕು ಎಂದು ಹೇಳುತ್ತಾರೆ. ಆದರೆ ನಾನು ರೋಗಿಗಳ ಸಂಖ್ಯೆ ಹೆಚ್ಚಲಿ ಎಂದು ಬಯಸುವುದಿಲ್ಲ.

ಆರೋಗ್ಯಕರವಾದ ಸಮಾಜ ನಿರ್ಮಾಣ ಆಗಬೇಕು. ಈ ಆಸ್ಪತ್ರೆಗೆ ಬರುವವರ ಸಂಖ್ಯೆ ಕಡಿಮೆಯಾಗಬೇಕು. ಈ ಸಂಸ್ಥೆಯನ್ನು ಅತ್ಯಾಧುನಿಕ ತಂತ್ರಜ್ಞಾದ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಹಲವು ಗಂಭೀರ ಕಾಯಿಲೆಗಳಿಗೆ ಆಯುರ್ವೇದ ಚಿಕಿತ್ಸೆಯು ನೆರವಾಗಲಿ. ಇವತ್ತು ಆಯುರ್ವೇದ ಸಂಸ್ಥೆ ಆರಭಗೊಂಡಿರುವುದು ನನಗೆ ಸಂತೋಷವಾಗುತ್ತಿದೆ. ಆಯುರ್ವೇದದ ಜ್ಞಾನವು ಮತ್ತೊಮ್ಮೆ ಪುನರ್ ಶಕ್ತಿ ಪಡೆದುಕೊಂಡಿದೆ. ಹೊಸ ಶಕ್ತಿಯಾಗಿ ಹೊರಹೊಮ್ಮುತ್ತಿದೆ.

ಆಯುರ್ವೇದ ಸಂಸ್ಥೆಯು ಏಮ್ಸ್, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳ ಜತೆಜತೆಯಲ್ಲೇ ಕೆಲಸ ಮಾಡುತ್ತದೆ ಎನ್ನುವುದು ಅತ್ಯಂತ ಭರವಸೆಯ ವಿಚಾರ. ಅಖಿಲ ಭಾರತ ಆಯುರ್ವೇದ ಸಂಸ್ಥೆಯು ಅಂತರ ಶಾಸ್ತ್ರೀಯ ಶಿಕ್ಷಣ ಮತ್ತು ಸಮಗ್ರ ಆರೋಗ್ಯ ಅಭ್ಯಾಸಗಳ ಪಥದಲ್ಲಿ ಸಾಗಲಿ ಎಂದು ನಾನು ಬಯಸುತ್ತೇನೆ.

ಸ್ನೇಹಿತರೇ, ಆಯುರ್ವೇದದ ವಿಸ್ತಾರವಾದ ಗುಣಗಳ ಪಟ್ಟಿಯಿಂದಲೇ ಅದು ಅತ್ಯಂತ ಪ್ರಯೋಜನಕಾರಿ ಎನ್ನುವುದು ಗೊತ್ತಾಗುತ್ತದೆ. ಇವತ್ತು ವಿಶ್ವವು ಕೇವಲ ಆರೋಗ್ಯಕರವಾಗಿರುವದನ್ನಷ್ಟೇ ಬಯಸುವುದಿಲ್ಲ. ಸದಾ ಕ್ಷೇಮವಾಗಿರಬೇಕೆಂದು ಬಯಸುತ್ತದೆ. ಅದು ಕೇವಲ ಯೋಗ ಮತ್ತು ಆಯುರ್ವೇದದಿಂದ ಮಾತ್ರ ಲಭಿಸುತ್ತದೆ. ವಿಶ್ವದ ಎಲ್ಲ ದೇಶಗಳಲ್ಲೂ ಇವತ್ತು ಮೂಲತತ್ವಗಳಿಗೆ ವಾಪಸ್ ಬರುವುದು(ಬ್ಯಾಕ್ ಟು ದ ಬೇಸಿಕ್ಸ್) ಮತ್ತು ಪರಿಸರದತ್ತ ಮರಳುವುದು(ಬ್ಯಾಕ್ ಟು ದಿ ನೇಚರ್) ಅತ್ಯಂತ ಬಲಗೊಳ್ಳುತ್ತಿದೆ. ಹೆಚ್ಚು ಹೆಚ್ಚು ಜನರು ಈ ಆಲೋಚನೆಯತ್ತಲೇ ವಾಲುತ್ತಿದ್ದಾರೆ. ಪ್ರಕೃತಿಯೊಂದಿಗೆ ನೇರವಾಗಿ ಹೊಂದಿಕೊಂಡಿರುವ ವ್ಯವಸ್ಥೆಗಳತ್ತ ಜನರು ಆಕರ್ಷಿತಗೊಳ್ಳುತ್ತಿದ್ದಾರೆ. ಈ ಸನ್ನಿವೇಶದಲ್ಲಿ ಆಯುರ್ವೇದಕ್ಕೆ ಸೂಕ್ತವಾದ ವಾತಾವರಣವನ್ನು ಮಾಡಿಕೊಡಲೇಬೇಕಿದೆ.

ಎಷ್ಟು ಮಂದಿ ಆಯುರ್ವೇದವನ್ನು ಕಲಿತಿದ್ದಾರೋ ಅವರೆಲ್ಲರೂ ಈ ವಿಜ್ಞಾನಕ್ಕೆ ನೂರಕ್ಕೆ ನೂರರಷ್ಟು ಅರ್ಪಿಸಿಕೊಂಡಿದ್ದಾರೆ. ಆತ ಒಂದು ಆಸ್ಪತ್ರೆಯನ್ನು ತೆರೆದರೆ, ಒಪಿಡಿಯನ್ನು ಆರಂಭಿಸಿದರೆ ರೋಗಿಯು ತ್ವರಿತ ಪರಿಹಾರವನ್ನು ಬಯಸುತ್ತಾನೆ. ಆತ ತನ್ನ ಕೆಲಸಕ್ಕೆ ಬಹುಬೇಗ ಹೋಗಬೇಕೆಂದು ಬಯಸುತ್ತಾನೆ. ಆಯುರ್ವೇದ ವೈದ್ಯ ಈತನಿಗೆ ಅಲೋಪತಿ ಔಷಧಿ ಜತೆಗೆ ಒದು ಇಂಜೆಕ್ಷನ್ ಕೊಟ್ಟರೆ ಸಾಕು ಎಂದು ಭಾವಿಸುತ್ತಾನೆ. ಆದರೆ, ಹೊರಗೆ ಅದು ಆಯುರ್ವೇದಿಕ್ ಹೆಲ್ತ್ ಸೆಂಟರ್ ಎಂದು ನಾಮಫಲಕವಿರುತ್ತದೆ. ಇದು ಆಯುರ್ವೇದದ ಕಡೆಗೆ ಭಕ್ತಿಯು ನೂರಕ್ಕೆ ನೂರರಷ್ಟಿಲ್ಲ ಎಂಬುದನ್ನು ತೋರಿಸುತ್ತದೆ. ಆಯುರ್ವೇದದ ಪರಿಣಾಮಗಳ ಬಗ್ಗೆ ಜನರಲ್ಲಿ ವಿಶ್ವಾಸವನ್ನು ಮೂಡಿಸಲು ಆಯುರ್ವೇದದ ಕಡೆಗೆ ನೂರಕ್ಕೆ ನೂರರಷ್ಟು ಆಸಕ್ತಿಯನ್ನು ಬೆಳೆಸಿಕೊಳ್ಳಲೇಬೇಕು. ವ್ಯವಸ್ಥೆಯ ಆತ್ಮವಿಶ್ವಾಸವನ್ನು ಮೊದಲು ಹೆಚ್ಚಿಸಬೇಕು. ನಮ್ಮ ಬಾಲ್ಯದಿಂದಲೂ ಒಂದು ಹಾಸ್ಯವನ್ನು ಕೇಳುತ್ತಲೇ ಬಂದಿದ್ದೇವೆ. ಒಮ್ಮೆ ಒಬ್ಬ ಮನುಷ್ಯ ಉಪಹಾರ ಗೃಹಕ್ಕೆ ಹೋಗುತ್ತಾನೆ ಅಲ್ಲಿ ಅದರ ಮಾಲೀಕ ಇರುವುದಿಲ್ಲ. ಅದರ ನೌಕರನ ಬಳಿ ಉಪಹಾರಗೃಹದ ಮಾಲಿಕನ ಬಗ್ಗೆ ಈ ವ್ಯಕ್ತಿ ವಿಚಾರಿಸುತ್ತಾನೆ. ಆಗ ನೌಕರ ಹೇಳುತ್ತಾನೆ ನಮ್ಮ ಮಾಲಿಕರು ಪಕ್ಕದ ಉಪಹಾರ ಗೃಹದಲ್ಲಿ ಆಹಾರ ಸೇವಿಸಲು ಹೋಗಿದ್ದಾರೆ ಎಂದು.

ಇಂಥ ಪರಿಸ್ಥಿತಿಯಲ್ಲಿ ಯಾರು ಅಂತಹ ಉಪಹಾರ ಗೃಹಕ್ಕೆ ಬಂದು ಊಟ ಮಾಡುತ್ತಾರೆ? ಆದ್ದರಿಂದ ಸ್ನೇಹಿತರೇ, ಆಯುರ್ವೇದದ ಜತೆ ಜೋಡಿಸಿಕೊಂಡಿರುವ ವಿಜ್ಞಾನಿಗಳು ಅದನ್ನು ವಿಸ್ತರಿಸುವ ಪ್ರಯತ್ನಗಳನ್ನು ಮಾಡಬೇಕು. ಆಯುರ್ವೇದ ಎಲ್ಲಿ ಪರಿಣಾಮಕಾರಿಯಾಗಬಲ್ಲದು ಎಂಬ ಕ್ಷೇತ್ರಗಳ ಕಡೆಗೆ ಆಲೋಚನೆ ಮಾಡಬೇಕು. ಅಂತಹ ಒಂದು ಕ್ಷೇತ್ರವೆಂದರೆ ಕ್ರೀಡೆ. ಇತ್ತೀಚೆಗೆ ಭೌತಚಿಕಿತ್ಸಕರು(ಫಿಸಿಯೋಥೆರಪಿಸ್ಟ್)ಗಳಿಗೆ ಹೆಚ್ಚು ಬೇಡಿಕೆ ಬರುತ್ತಿದೆ. ಪ್ರತಿಯೊಬ್ಬ ಆಟಗಾರನೂ ತನಗೊಬ್ಬ ವೈಯಕ್ತಿಯ ಫಿಸಿಯೋಥೆರಪಿಸ್ಟ್ ಇಟ್ಟುಕೊಳ್ಳಲು ಬಯಸುತ್ತಾನೆ. ಕೆಲವೊಮ್ಮೆ ಈ ಆಟಗಾರರು ಅರಿವಿಲ್ಲದೇ ನೋವು ನಿವಾರಕಗಳ ಮೊರೆ ಹೋಗುತ್ತಾರೆ. ಆಯುರ್ವೇದ ಮತ್ತು ಯೋಗ ಈ ಕ್ಷೇತ್ರದಲ್ಲಿ ಪ್ರಯೋಜನಕಾರಿ ಎನ್ನುವುದು ನಮಗೆಲ್ಲರಿಗೂ ಗೊತ್ತಿದೆ. ಆಯುರ್ವೇದ ಮತ್ತು ಯೋಗ ಆಧಾರಿತ ಭೌತ ಚಿಕಿತ್ಸೆಯು ನಿಷೇಧಿತ ಔಷಧಿಗಳನ್ನು ಸೇವಿಸುವಂತೆಹ ಯಾವುದೇ ಸಂದರ್ಭಗಳನ್ನು ಉಂಟುಮಾಡುವುದಿಲ್ಲ.

 

ಕ್ರೀಡೆಯಲ್ಲಿ ಹೇಗೆ ಯೋಗ ಮತ್ತು ಆಯುರ್ವೇದ ಮಹತ್ವ ಪಡೆದುಕೊಂಡಿವೆಯೋ ಹಾಗೆಯೇ ನಮ್ಮ ಸೇನಾ ಬಲಕ್ಕೂ ಇವು ಅತ್ಯಂತ ಮಹತ್ವದ್ದಾಗಿವೆ. ನಮ್ಮ ಯೋಧರು ಅಂತ್ಯಂತ ಕ್ಲಿಷ್ಟಕರ ಸಂದರ್ಭಗಳಲ್ಲಿ ನಮ್ಮ ದೇಶವನ್ನು ರಕ್ಷಣೆ ಮಾಡುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ಅವರನ್ನು ಪರ್ವತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಕ್ಕೆ ನಿಯೋಜನೆ ಮಾಡಲಾಗುತ್ತದೆ. ಮರಳುಗಾಡುಗಳಲ್ಲಿ, ಅತ್ಯಂತ ಆಳ ಸಮುದ್ರಗಳಲ್ಲಿ, ಕೆಲವೊಮ್ಮೆ ದಟ್ಟ ಅರಣ್ಯಗಳಲ್ಲಿ;ಹೀಗೆ ಭಿನ್ನಭಿನ್ನವಾದ ವಾತಾವರಣ ಮತ್ತು ಸನ್ನಿವೇಶಗಳಲ್ಲಿ ಅವರು ಕಾರ್ಯನಿರ್ವಹಣೆ ಮಾಡೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಆಯುರ್ವೇದ ಮತ್ತು ಯೋಗ ಅವರನ್ನು ಸಾಕಷ್ಟು ಕಾಯಿಲೆಗಳಿಂದ ರಕ್ಷಣೆ ಮಾಡುತ್ತದೆ. ಮಾನಸಿಕ ಒತ್ತಡವನ್ನು ಇದರಿಂದ ಸುಲಭವಾಗಿ ಪರಿಹಾರ ಮಾಡಿಕೊಳ್ಳಬಹುದು. ಯೋಗ ಮತ್ತು ಆಯುರ್ವೇದ ಎರಡೂ ಮನುಷ್ಯನಲ್ಲಿ ಪ್ರತಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಏಕಾಗ್ರತೆಯನ್ನು ಹೆಚ್ಚಿಸಲು ಇವು ಸಹಾಯಮಾಡುತ್ತವೆ.

ಗುಣಮಟ್ಟದ ಆಯುರ್ವೇದ ಶಿಕ್ಷಣದ ಅಗತ್ಯ ಇಂದು ಎದ್ದು ಕಾಣುತ್ತಿದೆ. ಇದರಿಂದ ಆಯುರ್ವೇದದ ಮಹತ್ವವೂ ಹೆಚ್ಚುತ್ತದೆ. ಪಂಚಕರ್ಮ ಚಿಕಿತ್ಸಕರು, ಆಯುರ್ವೇದ ಆಹಾರ ಪದ್ಧತಿ ತಿಳಿಸುವವರು, ಪಾಶ್ರ್ವವಾಯು ವಿಶ್ಲೇಷಕರು, ಆಯುರ್ವೇದ ಔಷಧಿ ಮಾರಾಟಗಾರರು ಹೀಗೆ ಆಯುರ್ವೇದಕ್ಕೆ ಸಹಕಾರಿಯಾದಈ ಎಲ್ಲ ಸರಪಳಿಯಲ್ಲಿರುವವರೂ ಸುಧಾರಿಸಿದರೆ ಮಾತ್ರ ಆಯುರ್ವೇದ ಬೆಳೆಯಲು ಸಾಧ್ಯವಿದೆ.

ಇದೆಲ್ಲದರ ಜತೆಗೆ ಆಯುರ್ವೇದ ಶಿಕ್ಷಣದ ವಿವಿಧ ಹಂತಗಳಲ್ಲಿ ಬೋಧನೆ ಮಾಡುತ್ತಿರುವ ವಿವಿಧ ಕೋರ್ಸ್ ಗಳನ್ನು ಮರು ಪುನರಾವರ್ತಿಸಬೇಕು ಎನ್ನುವುದು ನನ್ನ ಸಲಹೆ. ಆಯುರ್ವೇದಿಕ್ ಔಷಧಿ ಮತ್ತು ಸರ್ಜರಿ(ಬಿಎಎಂಎಸ್) ಕಲಿತ ವಿದ್ಯಾರ್ಥಿಯು ಆಯುರ್ವೇದ ಆಹಾರ ಪದ್ಧತಿ, ಆಯುರ್ವೇದ ಔಷಧಿಗಳು, ಮತ್ತು ಪರಿಸರದ ಬಗ್ಗೆ ಅಧ್ಯಯನ ಮಾಡುತ್ತಾನೆ. ಐದು ವರ್ಷಗಳ ಕೋರ್ಸ್ ಮುಗಿದ ನಂತರ ಪದವಿ ಪಡೆದು ತಾನೇ ಸ್ವತಃ ಪ್ರಾಕ್ಟೀಸ್ ಮಾಡುತ್ತಾನೆ ಅಥವಾ ಕೆಲಸಕ್ಕೆ ಹೋಗುತ್ತಾನೆ. ಇಲ್ಲವೇ ಉನ್ನತ ಅಧ್ಯಯನಕ್ಕೆ ಮುಂದಾಗುತ್ತಾನೆ.

ಸ್ನೇಹಿತರೇ ಈ ದಾರಿಯಲ್ಲಿ ಬಿಎಎಂಎಸ್ ಕೋರ್ಸ್ ವಿನ್ಯಾಸಗೊಳಿಸುವುದು ಸಾಧ್ಯವೇ? ಪರೀಕ್ಷೆಗಳ ಎಲ್ಲ ಹಂತದಲ್ಲೂ ಆತನ ಉತ್ತೀರ್ಣತೆಯ ಪ್ರಮಾಣ ಪತ್ರ ಪಡೆದರೆ ಸಾಕೇ? ಇದು ಎರಡು ಅನುಕೂಲಗಳನ್ನು ಹೊಂದಿದೆ. ಈ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಜತೆಗೆ ಪ್ರಾಕ್ಟೀಸ್ ಕೂಡಾ ಮಾಡಬಹುದು. ಇದರಿಂದ ಅವರೂ ಆರಾಮದಾಯಕವಾಗಿರುತ್ತಾರೆ. ಕೆಲವು ಕಾರಣಕ್ಕೆ ಮುಂದಿನ ಶಿಕ್ಷಣದಿಂದ ವಂಚಿತರಾದವರು ಕೋರ್ಸ್ನು ಇನ್ನಷ್ಟು ಹಂತಗಳ ಪ್ರಮಾಣ ಪತ್ರ ಪಡೆದುಕೊಳ್ಳಲೂ ಸಾಧ್ಯವಾಗುತ್ತದೆ. ಇದು ಅವರ ಜೀವನಕ್ಕೂ ಸಹಕಾರಿ ಆಗಲಿದೆ. ಐದು ವರ್ಷದ ಕೋರ್ಸ್ ಪೂರೈಸಿದ ವಿದ್ಯಾರ್ಥಿಗಳು ಉತ್ತಮ ಉದ್ಯೋಗ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ. ಈಗಷ್ಟೇ ಶ್ರೀ ಶ್ರೀಪಾದ್ ನಾಯಕ್ ಅವರು ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಮತ್ತು ಸ್ಪಾಲ್ಡಿಂಗ್ ರಿಹಾಬ್ ಆಸ್ಪತ್ರೆ ಜತೆಗೆ ಸಹಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ತಿಳಿಸಿದರು. ಇದನ್ನು ಕೇಳಿ ನನಗೆ ಸಂತಸವಾಯಿತು. ಎರಡೂ ಕಡೆಯವರಿಗೂ ಆನು ದನ್ಯವಾದ ಸಲ್ಲಿಸುತ್ತೇನೆ. ಈ ಸಹಯೋಗಿ ಒಪ್ಪಂದವು ಕ್ರೀಡಾ ಔಷಧಿಗಳು, ಪುನರ್ಸ್ಥಾ ಪನಾ ಔಷಧಿಗಳು ಮತ್ತು ನೋವು ನಿವಾರಣೆಗೆ ಆಯುರ್ವೇದ ಚಿಕಿತ್ಸೆಯ ಸಂಶೋಧನೆಗೆ ಇದು ಅವಕಾಶ ಮಾಡಿಕೊಡುತ್ತದೆ.

ಸೋದರ-ಸೋದರಿಯರೇ, ನಾನು ಕೆಲ ಹೊತ್ತಿನ ಹಿಂದೆ ನಾನು ಆಯುರ್ವೇದ ಚಿಕಿತ್ಸೆ ಮೂಲಕ ಗುಣಮಟ್ಟದ ಮಾರ್ಗಸೂಚಿ ಮತ್ತು ಗುಣಮಟ್ಟದ ಪರಿಭಾಷಾ ಪೋರ್ಟಲ್ ಅನ್ನು ಆರಂಭಿಸಿದ್ದೇನೆ. ಈ ಎರಡೂ ಕ್ರಮಗಳು ಅಪಾರ ಪ್ರಮಾಣದ ದತ್ತಾಂಶವನ್ನು ರೂಪಿಸುತ್ತವೆ. ಆಯುರ್ವೇದದ ಆಧುನಿಕ ಪದ್ಧತಿಗಳ ಅನ್ವಯ ವೈಜ್ಞಾನಿಕ ಅಂಗೀಕಾರ ಪಡೆದುಕೊಳ್ಳಲು ಇದು ದಾರಿ ಮಾಡಿಕೊಡುತ್ತದೆ. ಆಯುಷ್ ವಿಜ್ಞಾನದಲ್ಲಿ ಈ ನಡೆಯು ಐತಿಹಾಸಿಕ ಎಂದು ರುಜುವಾತಾಗಲಿದೆ. ಈ ಮೂಲಕ ಆಯುರ್ವೇದ ಜಾಗತಿಕ ಸ್ವೀಕಾರಕ್ಕೂ ಇನ್ನಷ್ಟು ಸಹಕಾರ ದೊರೆಯಲಿದೆ.

ಗುಣಮಟ್ಟದ ಮಾರ್ಗದರ್ಶಕಗಳು ಮತ್ತು ಗುಣಮಟ್ಟದ ಪರಿಭಾಷೆಯು ಆಯರ್ವೇದದಲ್ಲಿ ಅತ್ಯಂತ ಅಗತ್ಯ ಎನಿಸಿಕೊಂಡಿದೆ. ಈ ಎರಡೂ ಅಂಶಗಳಿಂದ ಆಯುರ್ವೇದ ಹೊರತಾದರೆ ಅಲೋಪಥಿಕ್ ಜಗತ್ತಿನಲ್ಲಿ ಆಯುರ್ವೇದಕ್ವಿನಾಶಗೊಳ್ಳುವಂತೆÉ ಮಾಡುತ್ತದೆ. ನಮ್ಮ ದೇಶದಲ್ಲಿ ಒಂದೇ ಕಾಯಿಲೆಯು ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರಿನಿಂದ ಕರೆಸಿಕೊಳ್ಳುತ್ತದೆ. ಚಿಕಿತ್ಸೆಯು ಸರ್ವೇಸಾಮಾನ್ಯವಾಗಿ ಒಂದೇ ಆದರೂ ವಿವರಣೆಗಳು ಮಾತ್ರ ಬೇರೆಬೇರೆಯಾಗಿರುತ್ತವೆ. ಆದ್ದರಿಂದ ನಾವು ವಿಶ್ವಕ್ಕೆ ಸರಿಯಾದ ಮಾರ್ಗದಲ್ಲಿ ತಲುಪಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ನಾವು ಆರಂಭಿಸಿರುವ ಪೋರ್ಟಲ್ ನೆರವಾಗಬಲ್ಲದು. ಆನರ ಮನೆಯಿಂದ ಆಯುರ್ವೇದ ತುಂಬಾ ದೂರ ಉಳಿದಿದೆ ಎಂದು ಭಾರತ ಸರ್ಕಾರದ ಆಯೋಗವೊಂದು ವರದಿ ಕೊಟ್ಟಿತ್ತು. ಇವತ್ತಿನ ಸಂದರ್ಭಕ್ಕೆ ಹಾಲಿ ಚಾಲ್ತಿಯಲ್ಲಿರುವ ಪದ್ಧತಿಯು ಸೂಕ್ತವಲ್ಲ ಎನ್ನುವುದು ಇದಕ್ಕೆ ಪ್ರಮುಖ ಕಾರಣವಾಗಿತ್ತು. ಒಂದು ಪಕ್ಕದಲ್ಲಿ ಅಲೋಪಥಿಕ್ ಔಷಧಿಗಳು ಅತ್ಯಂತ ತ್ವರಿತ ಮತ್ತು ಸರಳವಾಗಿ ಬಳಕೆ ಆಗುತ್ತಿದ್ದವು. ಮತ್ತೊಂದೆಡೆ ಆಯುರ್ವೇದ ವ್ಯವಸ್ಥೆ ಇತ್ತು. ಏಕೆಂದರೆ ಇಲ್ಲಿ ಔಷಧಿಯನ್ನು ಅನ್ವೇಷಣೆ ಮಾಡುವಲ್ಲಿ ತಗೆದುಕೊಂಡ ಅತ್ಯಂತ ದೀರ್ಘ ಅವಧಿ ಮತ್ತು ಪ್ರಕ್ರಿಯೆಗಳು ಕಾರಣವಾಗಿದ್ದವು. ಇದು ಪಾಸ್ಟ್ ಫುಡ್ ಜಮಾನ. ಹಳೆಯ ಕಾಲದ ಮಾದರಿಯಲ್ಲಿ ಆಯುರ್ವೇದಿಕ್ ಔಷಧಿಗಳನ್ನು ಪ್ಯಾಕ್ ಮಾಡಿದರೆ ಪ್ರಯೋಜನ ಆಗುವುದಿಲ್ಲ. ಆಯುರ್ವೇದ ಔಷಧಿಗಳು ಈ ಮಾದರಿಯಲ್ಲಿ ಕೆಲಸಕ್ಕೆ ಬರುವುದಿಲ್ಲ. ಆಯುರ್ವೇದ ಔಷಧಿಗಳ ಪ್ಯಾಕಿಂಗ್ ಕಾರ್ಯ ಆಧುನೀಕರಣ ಗೊಳ್ಳುತ್ತಿದ್ದಂತೆ ಗುಣಮಟ್ಟದ ಚಿಕಿತ್ಸೆಯ ಪ್ರಕ್ರಿಯೆಯೂ ಆಧೂನೀಕರಣಗೊಳ್ಳುತ್ತದೆ. ಪರಿಭಾಷೆಯು ಏಕರೂಪಗೊಳ್ಳುತ್ತದೆ. ಇದರಿದ ಆಯುರ್ವೇದದಲ್ಲಿ ತ್ವರಿತವಾದ ಪ್ರಗತಿಯನ್ನು ಕಾಣಬಹುದಾಗಿದೆ.

ಇವತ್ತಿನ ಸಂದರ್ಭದಲ್ಲಿ ಜನರು ತತ್ಕ್ಷ ಣವೇ ಫಲಿತಾಂಶವನ್ನು ಬಯಸುತ್ತಾರೆ. ತತ್ಕ್ಷ್ಣದ ಫಲಿತಾಂಶ ಬಯಸುವ ಸಂದರ್ಭದಲ್ಲಿ ಜನರು ಅದರ ಅಡ್ಡಪರಿಣಾಮಗಳ ಬಗ್ಗೆ ಆಲೋಚನೆ ಮಾಡುವುದೇ ಇಲ್ಲ. ಇಂತಹ ಆಲೋಚನೆಗಳು ಅತ್ಯಂತ ಅಪಾಯಕಾರಿಯಾದುದು. ಇಂತಹ ಸಂದರ್ಭದಲ್ಲಿ ನಮ್ಮ ಆಲೋಚನೆಯು ತ್ವರಿತ ಫಲಿತಾಂ±ಂ ನೀಡಬಲ್ಲ ಆಯುರ್ವೇದ ಔಷಧಿಗಳ ಅನ್ವೇಷಣೆ ಜತೆಗೆ ಅವು ಅಡ್ಡಪರಿಣಾಮ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಆಲೋಚನೆ ಮಾಡಿ ಅವುಗಳನ್ನು ಅಭಿವೃದ್ಧಿಪಡಿಸಬೇಕಿದೆ.

ಸೋದರ-ಸೋದರಿಯರೇ, ಆಯುಷ್ ಇಲಾಖೆ ಅಡಿಯಲ್ಲಿ 600 ಆಯುರ್ವೇದ ಔಷಧಿಗಳನ್ನು ಔಷಧೀಯ ಗುಣಮಟ್ಟದ ಅಡಿಯಲ್ಲಿ ಘೋಷಣೆ ಮಾಡಿದ್ದೇವೆ. ಹೆಚ್ಚು ಪ್ರಚಾರದಿಂದ ಆಯುರ್ವೇದ ಔಷಧಿಗಳ ತೀಕ್ಷ್ಣ ಪ್ರಗತಿಯೂ ಸಾಧ್ಯವಿದೆ. ಇವತ್ತು ಹರ್ಬಲ್ ಔಷಧಿಗಳಿಗೆ ಬೃಹತ್ ಮಾರುಕಟ್ಟೆ ಇದೆ. ಹರ್ಬಲ್ ಮತ್ತು ಔಷಧೀಯ ಸಸ್ಯಗಳು ಇವತ್ತು ಆದಾಯದ ಬಹುಮುಖ್ಯ ಮೂಲಗಳಾಗುತ್ತಿವೆ.

ಆಯುರ್ವೇದದಲ್ಲಿ ಕೆಂಪುಅಂಶ ಹೆಚ್ಚಿರುವ ಸಸ್ಯಗಳಿಂದ ಬಹುತೇಕ ಔಷಧಿಗಳನ್ನು ಮಾಡಲಾಗುತ್ತಿದೆ. ಇವು ನೀರಿನ ಅಂಶ ಕಡಿಮೆ ಇರುವ ಅಥವಾ ಫಲವತ್ತಾದ ಭೂಮಿಗಳಲ್ಲಿ ಬೆಳೆಯುತ್ತವೆ. ಇನ್ನ ಹಲವು ಔಷಧೀಯ ಸಸ್ಯಗಳು ಇದ್ಯಾವುದೂ ಅಗತ್ಯವಿಲ್ಲದೇ ಬೆಳೆಯುತ್ತವೆ. ನಮಗೆ ಇಂಥಾ ಸಸ್ಯಗಳ ಬಗ್ಗೆ ತಿಳಿದೇ ಇರುವುದಿಲ್ಲ. ಅವುಗಳನ್ನು ಪೊದೆಗಳು ಅಥವಾ ಕಳೆಗಳು ಎಂಬ ಭಾವನೆ ಸಾಕಷ್ಟು ದಿನಗಳಿಂದ ಬೇರೂರಿದೆ. ಸಾಕಷ್ಟು ಜಾಗೃತಿಯ ಕೊರತೆಯಿಂದ ನಾವು ಇಂತೆಲ್ಲಾ ನಷ್ಟವನ್ನು ಅನುಭವಿಸುತ್ತಿದ್ದೇವೆ.

ಔಷಧೀಯ ಸಸ್ಯಗಳನ್ನು ಬೆಳೆಯುವ ಮೂಲಕ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಕೌಶಲ್ಯ ಅಭಿವೃದ್ಧಿ ಇಲಾಖೆಯ ಜತೆಗೂಡಿ ರೈತರು ಮತ್ತು ಯುವ ವಿದ್ಯಾರ್ಥಿ ಸಮುದಾಯಕ್ಕೆ ಈ ನಿಟ್ಟಿನಲ್ಲಿ ಅಲ್ಪಾವಧಿ ಕೋರ್ಸ್ಗ್ಳನ್ನು ಆರಂಭಿಸುವಂತೆ ನಾನು ಆಯುಷ್ ಇಲಾಖೆಯನ್ನು ಒತ್ತಾಯ ಮಾಡುತ್ತೇನೆ. ಆಯುರ್ವೇದಕ್ಕೆ ಸಮುದ್ರ ಕಳೆಗಳಿಂದ ಏನಾದರೂ ಪ್ರಯೋಜನ ಇದೆಯೇ ಎನ್ನುವ ಬಗ್ಗೆ ಏಕೆ ಅನ್ವೇಷಣೆ ನಡೆಯಬಾರದು? ಭಾರತದ ಕರಾವಳಿಯು ಆಗೆ ನೋಡಿದರೆ ನಮಗೆ ಬೃಹತ್ ಸಂಪತ್ತು. ಇದರಿಂದ ಆಯುರ್ವೇದಕ್ಕೆ ಏನಾದರೂ ಪ್ರಯೋಜನ ಆದರೂ ಆಗಬಹುದು. ನನಗೆ ಗೊತ್ತು ನಾನು ಈ ಕ್ಷೇತ್ರದಲ್ಲಿ ಪರಿಣಿತನಲ್ಲ. ಆದರೂ ನಾವು ಈ ನಿಟ್ಟಿನಲ್ಲಿ ಏನಾದರೂ ಹೊಸತನ್ನು ಕಂಡುಕೊಂಡರೆ ಅಲ್ಲಿನ ಮೀನುಆರರಿಗೂ ಸಾಕಷ್ಟು ನೆರವಾಗಲಿದೆ. ಸಸ್ಯಾಹಾರಿ ಆಧಾರಿತ ಔಷಧಿಗಳನ್ನು ಇನ್ನಷ್ಟು ಉತ್ಪಾದಿಸಿ ವಿತರಣೆ ಮಾಡಲು ನಮಗೆ ಸಾಧ್ಯವಿದೆ. ರೈತರು ತಮ್ಮ ಬೇಸಾಯದ ಭೂಮಿಯನ್ನು ಔಷಧೀಯ ಸಸ್ಯಗಳನ್ನು ಬೆಳೆಯಲು ಬಳಸಿಕೊಂಡರೆ ಅವನ ಆದಾಯವೂ ಹೆಚ್ಚುತ್ತದೆ. ನಮ್ಮ ದೇಶ ಸ್ವಾತಂತ್ರ್ಯ ಕಂಡು 75 ವರ್ಷ ತುಂಬಲಿರುವ 2022ರೊಳಗೆ ದೇಶದ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಗುರಿಯನ್ನು ಹೊಂದಿದ್ದೇವೆ. ಆಯುಷ್ ಇಲಾಖೆ ಮತ್ತು ಕೃಷಿ ಇಲಾಖೆ ಜಂಟಿಯಾಗಿ ರೈತರನ್ನು ಔಷಧೀಯ ಸಸ್ಯಗಳನ್ನು ಬೆಳೆಯುವತ್ತ ಉತ್ತೇಜಿಸಿದರೆ ಅವರ ಆದಾಯ ವೃದ್ಧಿ ಮಾಡಲು ಇದೂ ಒಂದು ಮಾರ್ಗವಾಗಲಿದೆ. ತಾವು ಬೇಸಾಯ ಮಾಡುವ ಹೊಲಗಳ ಬದಿಯಲ್ಲಿ ಔಷಧೀಯ ಸಸ್ಯಗಳನ್ನು ನೆಡುವ ಮೂಲಕ ಮಿಶ್ರಬೆಳೆಗಳ ಪದ್ಧತಿಯಲ್ಲಿ ಆರ್ಥಿಕ ಲಾಭವನ್ನು ಹೊಂದಬಹುದಾಗಿದೆ.

ಸ್ನೇಹಿತರೇ ಈ ವಲಯವು ಅಭಿವೃದ್ಧಿ ಮತ್ತು ವಿಸ್ತರಣೆ ಹೊಂದಬೇಕಾದರೆ ಈಗ ಸಾಕಷ್ಟು ಬಂಡವಾಳದ ಅಗತ್ಯವಿದೆ. ಆರೋಗ್ಯ ವ್ಯವಸ್ಥೆಯಲ್ಲಿ ಶೇಕಡಾ ನೂರರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ನಮ್ಮ ಸರ್ಕಾರವು ಅವಕಾಶ ಮಾಡಿಕೊಟ್ಟಿದೆ. ಆಯುರ್ವೇದ ಮತ್ತ ಯೋಗಾಗಳಿಗೆ ಆರೋಗ್ಯ ವ್ಯವಸ್ಥೆಯ ಎಫ್ಡಿ ಐ ಲಾಭ ದೊರಕುವಂತೆ ನೋಡಿಕೊಳ್ಳುವ ಪ್ರಯತ್ನ ನಡೆದಿದೆ.

ಯೋಗ ಮತ್ತು ಆಯುರ್ವೇದಕ್ಕಾಗಿ ನಮ್ಮ ದೇಶದಲ್ಲಿರುವ ಎಲ್ಲ ಕಂಪನಿಗಳು ಮತ್ತು ಖಾಸಗಿ ಕ್ಷೇತ್ರದ ಉದ್ಯಮಿಗಳು ಮುಂದೆ ಬರಬೇಕಿದೆ. ಅಲೋಪಥಿಕ್ ಮಾದರಿ ಆಸ್ಪತ್ರೆಗಳನ್ನು ಆರಂಭಿಸಿದಂತೆ ಆಯುರ್ವೇದ ಮತ್ತು ಯೋಗಕ್ಕೂ ಕಾಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಕೊಡುಗೆ ನೀಡುವಂತೆ ನಾನು ಮನವಿ ಮಾಡಿಕೊಳ್ಳುತ್ತೇನೆ.

 

 

ಮನಷ್ಯನ ಕಲ್ಯಾಣದ ದೃಷ್ಟಿಯಿಂದ ನಮ್ಮ ಪೂರ್ವಜರು ಸಾಕಷ್ಟು ಒಳಿತನ್ನು ಮಾಡಿಹೋಗಿದ್ದಾರೆ. ಸಾವಿರಾರು ವರ್ಷಗಳ ಹಿಂದಿನಿಂದ ನಮ್ಮ ಪೂರ್ವಜರು ಅರ್ಜಿಸಿಕೊಂಡು ಬಂದ ಜ್ಞಾನವನ್ನು ಬಳಸಿಕೊಂಡು ನಾವು ಇನ್ನಷ್ಟು ಸದ್ಬಳಕೆ ಮಾಡಿಕೊಳ್ಳಬೇಕಿದೆ. ಯೋಗ ಮತ್ತು ಆಯುರ್ವೇದಲ್ಲಿ ಅನ್ವೇಷಣೆ ಮತ್ತು ಪ್ರಯೋಗಾತ್ಮಕ ಅಚ್ಚರಿಗಳು ಈಗ ಆರಂಭವಾಗಿವೆ. ನಾವು ಅನ್ವೇಷಣೆಯನ್ನು ನಿರ್ಲಕ್ಷ್ಯ ಮಾಡಿದರೆ ನಮ್ಮ ಪ್ರಭಾವವು ಕುಸಿಯುತ್ತಾ ಹೋಗುತ್ತದೆ.

ಈ ಸನ್ನಿವೇಶವನ್ನು ಸಂಪೂರ್ಣವಾಗಿ ಬದಲಿಸಬೇಕಿದೆ. ಭಾರತವು ಈ ಸನ್ನಿವೇಶವನ್ನು ಬದಲಿಸಲು ಪ್ರತಿಯೊಬ್ಬ ಮನುಷ್ಯನೂ ಒಂದಷ್ಟು ಗಂಟೆಗಳನ್ನು ಮೀಸಲಿಡಬೇಕಿದೆ. ಇವತ್ತು ಇಡೀ ವಿಶ್ವವೇ ಹೋಲಿಸ್ಟಿಕ್ ಹೆಲ್ತ್ಕೇಿರ್ನೊ ಹುಡುಕಾಟ ನಡೆಸುತ್ತಿದೆ. ಆದರೆ ಇನ್ನೂ ಅದು ಸಾಧ್ಯವಾಗಿಲ್ಲ. ಭಾರತ ಹಾಗೂ ಯೋಗದ ಶಕ್ತಿ ಮತ್ತು ಆಯುರ್ವೇದ ಶಕ್ತಿಗಳನ್ನು ವಿಶ್ವವು ಅತ್ಯಂತ ಭರವಸೆ ಮತ್ತು ನಿರೀಕ್ಷೆಗಳಿಂದ ನೋಡುತ್ತಿದೆ. ಇಡೀ ವಿಶ್ವದ ಹಿತದೃಷ್ಟಿಯಿಂದ ಭಾರತವು ತನ್ನ ಯೋಗ ಮತ್ತು ಆಯುರ್ವೇದವನ್ನು ಇನ್ನಷ್ಟು ಮಾನವ ಸ್ನೇಹಿಗೊಳಿಸುತ್ತದೆ ಎಂದು ಜನ ಕಾಯುತ್ತಿದ್ದಾರೆ. ಭಾರತವು ತನ್ನ ಸಮಯವನ್ನು ಹಾಳುಮಾಡಿಕೊಳ್ಳಬಾರದು. ನಾವು ಈ ಕ್ರಾಂತಿಕಾರಿ ಹೆಜ್ಜೆಗಳತ್ತ ಮುನ್ನಡೆಯಬೇಕಿದೆ. ಅದನ್ನು ಸಾಧಿಸಿ ತೋರಿಸಬೇಕಿದೆ.

ಸ್ನೇಹಿತರೇ, ಭಾರತವು ‘ಏಕಂ ಶಾತಾ ವಿಪ್ರ ಬಹುಧ ವದಂತಿ’ ಎಂದು ಆಲೋಚಿಸುತ್ತದೆ. ಅಂದರೆ ‘ಸೃಷ್ಟಿ ಒಂದೇ, ಸಂತರು ಅದನ್ನು ವಿವಿಧ ಹೆಸರುಗಳಲ್ಲಿ ಕರೆಯುತ್ತಾರೆ’. ಇದು ಎಲ್ಲ ಮಾದರಿಯ ಔಷಧೀಯ ವ್ಯವಸ್ಥೆ ಮತ್ತು ಆರೋಗ್ಯ ವ್ಯವಸ್ಥೆಗೂ ಅನ್ವಯವಾಗುತ್ತದೆ. ನಾವು ಎಲ್ಲ ಆರೋಗ್ಯ ವ್ಯವಸ್ಥೆಗಳನ್ನೂ ಗೌರವಿಸಬೇಕು.

ಎಲ್ಲದರ ಅಭಿವೃದ್ಧಿಗೂ ಆಶಿಸಬೇಕು. ಭಾರತದ ಪ್ರಜಾಪ್ರಭುತ್ವದ ಮಾದರಿಯಲ್ಲಿ. ಎಲ್ಲ ಆರೋಗ್ಯ ವ್ಯವಸ್ಥೆಯೂ ಅದರದೇ ಆದ ಪ್ರಜಾಪ್ರಭುತ್ವ ಹಕ್ಕನ್ನು ಹೊಂದಿರುತ್ತದೆ. ಪ್ರತಿಯೊಂದು ವ್ಯವಸ್ಥೆಯೂ ಬೆಳೆವಣಿಗೆಯ ಹಕ್ಕು ಮತ್ತು ಅವಕಾಶಗಳನ್ನು ಹೊಂದಿರುತ್ತದೆ. ಬಡವರಿಗಾಗಿ ಎಲ್ಲ ರೀತಿಯ ಆರೋಗ್ಯ ವ್ಯವಸ್ಥೆಗಳನ್ನು ಸರ್ಕಾರ ಉತ್ತೇಜಿಸಬೇಕಿದೆ. ಆನರಿಗೆ ಸುಲಭ ದರದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡುವುದಲ್ಲದೇ ಬಡವರಿಗೆ ಸುಲಭವಾಗಿ ಚಿಕಿತ್ಸೆ ಲಭಿಸುವಂತೆ ಮಾಡಬೇಕಿದೆ.

ಆದ್ದರಿಂದ ನಮ್ಮ ಆದ್ಯತೆಯು ಆರೋಗ್ಯ ಕ್ಷೇತ್ರದ ಮೇಲಿದೆ. ಎರಡು ಮಹತ್ವದ ಅಂಶಗಳ ಮೇಲೆ ನಾವು ನಿಗಾ ಇಟ್ಟಿದ್ದೇವೆ. ಒಂದು ತಡೆಗಟ್ಟಬಹುದಾದ ಆರೋಗ್ಯ ವ್ಯವಸ್ಥೆ ಮತ್ತು ಎರಡನೇಯದ್ದು ಆರೋಗ್ಯದ ಶಕ್ತತೆ ಮತ್ತು ಲಭ್ಯತೆಯನ್ನು ಹೆಚ್ಚಳಗೊಳಿಸುವುದು.

ತಡೆಗಟ್ಟಬಹುದಾದ ಆರೋಗ್ಯ ವ್ಯವಸ್ಥೆಯ ಅಡಿಯಲ್ಲಿ ನಾವು ಮಿಷನ್ ಇಂಧ್ರದನುಷ್ ಯೋಜನೆಯನ್ನು 2020ರ ಒಳಗೆ ಎಲ್ಲ ಮಕ್ಕಳಿಗೂ ಲಸಿಕೆ ಹಾಕುವ ಗುರಿಯೊಂದಿಗೆ ಆರಂಭಿಸಿದ್ದೇವೆ. ಸಾಮಾನ್ಯ ಲಸಕೀಖರಣ ಅಭಿಯಾನವನ್ನು ಆರಂಭಿಸಲಾಗಿದೆ. 12 ಮಾದರಿಯ ರೋಗಗಳೀಂದ ಮಕ್ಕಳನ್ನು ಮುಕ್ತಿಗೊಳಿಸುವ ಲಸಿಕೆ ಅಭಿಯಾನವನ್ನು ಸರ್ಕಾರ ಆಕಿಕೊಂಡಿದೆ. ಇಂದ್ರದನುಷ್ ಅಡಿಯಲ್ಲಿ 2.5 ಕೋಟಿ ಮತ್ತು ಮತ್ತು 70 ಲಕ್ಷ ಗರ್ಭಿಣಿಯರಿಗೆ ಲಸಿಕೆ ಹಾಕಲಾಗಿದೆ.

ಇದರ ಪರಿಣಾಮವಾಗಿ ಪ್ರತಿವರ್ಷ ಪ್ರತಿರಕ್ಷಣಾ ಲಸಿಕೆ ಹಾಕುವ ಪ್ರಮಾಣ ದೇಶದಲ್ಲಿ ಶೇಕಡಾ ಒಂದರಷ್ಟಿದ್ದದ್ದು ಶೇಕಡಾ 6ರಷ್ಟಕ್ಕೆ ಹೆಚ್ಚಳವಾಗಿದೆ. ಮೂರು ವರ್ಷಗಳ ಹಿಂದೆ ನಾವು ಈ ಅಭಿಯಾನವನ್ನು ಆರಂಭಿಸಿದ್ದೆವು. ಂiನಾವು ಗುರಿ ಹಾಕಿಕೊಂಡ ಎಲ್ಲ ಸಂದರ್ಭಗಳಲ್ಲೂ ಇದೇ ಅಧಿಕಾರೀ ವ್ಯವಸ್ಥೆಯನ್ನಿಟ್ಟುಕೊಂಡೇ ಗುರಿಯನ್ನು ಮುಟ್ಟುತ್ತಿದ್ದೇವೆ. ಅದಲ್ಲದೇ ಈ ಅಧಿಕಾರಿ ವ್ಯವಸ್ಥೆಯಿಂದ ಉತ್ತಮ ಫಲಿತಾಂಶವನ್ನೂ ಪಡೆದುಕೊಳ್ಳುತ್ತಿದ್ದೇವೆ. ಈ ತಿಂಗಳಲ್ಲಿ ಇಂದ್ರದನುಷ್ ಯೋಜನೆಯನ್ನು ಇನ್ನಷ್ಟು ವಿಸ್ತರಿಸಲಾಗಿದೆ. ಇವತ್ತಿನವರೆಗೂ ಹಿಂದೆ ಬಿದ್ದಿರುವ ಜಿಲ್ಲೆಗಳನ್ನು ಗುರುತಿಸಿ ಅವುಗಳಿಗೆ ಹೆಚ್ಚು ಆಸಕ್ತಿಯನ್ನು ತೋರಿಸಲಾಗುತ್ತಿದೆ. ಮುಂದಿನ ವರ್ಷದವರೆಗೆ ಪ್ರತಿರಕ್ಷಣಾ ಲಸಿಕೆ ಅಭಿಯಾನವನ್ನು ದೇಶದ 173 ಜಿಲ್ಲೆಗಳಲ್ಲಿ ಪ್ರತಿ ತಿಂಗಳ ಒಂದು ವಾರದ 7 ದಿನಗಳಲ್ಲಿ ಹಾಕಲು ನಿರ್ಧರಿಸಿದ್ದೇವೆ. ಸರ್ಕಾರವು 2018ರ ಡಿಸೆಂಬರ್ ಒಳಗೆ ಇಡೀ ದೇಶದಲ್ಲಿ ಪ್ರತಿರಕ್ಷಣ ಲಸಿಕೆ ಹಾಕುವ ಗುರಿ ಸಾಧನೆಯನ್ನು ಹೊಂದಿದೆ.

ಸ್ನೇಹಿತರೇ ಈ ಹಿಂದೆ ಆರೋಗ್ಯ ರಕ್ಷಣೆ ಎನ್ನುವುದು ಕೇವಲ ಆರೋಗ್ಯ ಇಲಾಖೆಯ ಹೊಣೆ ಎಂದು ಈ ಹಿಂದೆ ತಿಳಿದುಕೊಳ್ಳಲಾಗುತ್ತಿತ್ತು. ಇವತ್ತು ಆಲೋಚನೆ ಬದಲಾಗಿದೆ. ಇಂಧ್ರದನುಷ್ ಮಿಷನ್ ತೀವ್ರಗೊಳಿಸುವ ದೃಷ್ಟಿಯಿಂದ 12 ಇಲಾಖೆಗಳ ಸಹಯೋಗ ಮಾಡಿಕೊಳ್ಳಲಾಗಿದೆ. ರಕ್ಷಣಾ ಇಲಾಖೆಯೂ ಕೂಡ ಇದರಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

ಸೋದರ-ಸೋದರಿಯರೇ ಆರೋಗ್ಯ ರಕ್ಷಣೆಯ ಇನ್ನೊಂದು ಅತ್ಯಂತ ಅಗ್ಗದ ಮತ್ತು ಆರೋಗ್ಯಕಾರಿ ಮಾರ್ಗವೆಂದರೆ ಸ್ವಚ್ಛತೆ ಕಾಪಾಡುವುದು. ಸರ್ಕಾರ ಸ್ವಚ್ಛತೆಯನ್ನು ಸಾಧಿಸುವುದನ್ನು ಸಾಮುದಾಯಿಕ ಅಭಿಯಾನವಾಗಿ ಪರಿವರ್ತಿಸಿದೆ. ಸರ್ಕಾರವು ಮೂರು ವರ್ಷಗಳಲ್ಲಿ ಐದು ಕೋಟಿಗೂ ಅಧಿಕ ಶೌಚಾಲಯಗಳನ್ನು ನಿರ್ಮಾಣಮಾಡಿದೆ. ಸಾರ್ವಜನಿಕರಲ್ಲಿ ಸ್ವಚ್ಛತೆ ಬಗೆಗಿನ ಕಲ್ಪನೆಯು ಬದಲಾಗಿದೆ ಎನ್ನುವದಕ್ಕೆ ಇದು ಒಂದು ಉದಾಹರಣೆಯಾಗಿದೆ. ಕೆಲವರು ಶೌಚಾಲಯಗಳನ್ನು ಇಝತ್ಘೆರ್(ಘನತೆಯ ಗೂಡು)ಎಂದು ಕರೆದುಕೊಳ್ಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ಯುನಿಸೆಫ್ ಬಿಡುಗಡೆ ಮಾಡಿದ ವರದಿಯನ್ನು ನೀವೆಲ್ಲಾ ಓದಿದ್ದೀರಿ ಎಂದುಕೊಂಡಿದ್ದೇನೆ. ಒಬ್ಬ ವ್ಯಕ್ತಿಯು ತನ್ನ ಕುಟುಂಬಕ್ಕಾಗಿ ಒಂದು ಶೌಚಾಲಯವನ್ನು ನಿರ್ಮಾಣ ಮಾಡಿದರೆ ಆತ ವರ್ಷಕ್ಕೆ 50,000 ರೂಪಾಯಿಗಳನ್ನು ಉಳಿಸಿದಂತೆ. ಒಬ್ಬ ಬಡವ ಶೌಚಾಲಯ ನಿರ್ಮಿಸುವ ಮೂಲಕ ವರ್ಷಕ್ಕೆ 50,000 ಉಳಿಸಿದರೆ ಅದರ ಲಾಭ ಎಷ್ಟರಮಟ್ಟಿಗಿದೆ ಎನ್ನುವುದನ್ನು ಊಹಿಸಿಕೊಳ್ಳಿ.

ಸರ್ಕಾರವು ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಕೈಗೆಟಕುವಂತೆ ಮಾಡುವ ಮತ್ತು ಸೌಕರ್ಯಗಳನ್ನು ಹೆಚ್ಚಿಸುವ ಮೂಲಕ ನಮ್ಮ ಸರ್ಕಾರವು ಸಮಗ್ರ ದೃಷ್ಟಿಕೋನವನ್ನು ತೋರುತ್ತಿದೆ. ಮೆಡಿಕಲ್ ಕಾಲೇಜುಗಳಲ್ಲಿ ಓದುವ ಮಕ್ಕಳ ಸ್ನಾತಕೋತ್ತರ ವೈದ್ಯಕೀಯ ಸೀಟ್ಗರಳನ್ನು ಹೆಚ್ಚಳ ಮಾಡಲಾಗುತ್ತಿದೆ. ಇದು ನಮ್ಮ ಬಡಯುವಕರಿಗೆ ನೇರವಾಗಿ ಸಹಾಯಕ್ಕೆ ಬರಲಿದೆ. ಬಡವರು ವೈದ್ಯರಾಗುವ ಅವಕಾಶಗಳನ್ನು ಇದು ಹೆಚ್ಚಿಸುತ್ತದೆ. ಈ ದೇಶದ ಜನರಿಗೆ ಉತ್ತಮ ಚಿಕಿತ್ಸೆ ಮತ್ತು ಆರೋಗ್ಯ ರಕ್ಷಣಾ ವ್ಯವಸ್ಥೆ ಸಿಗಲಿ ಎನ್ನುವ ಉದ್ದೇಶದಿಂದಲೇ ಎಲ್ಲ ರಾಜ್ಯಗಳಲ್ಲೂ ಹೊಸ ಎಐಐಎಂಎಸ್(ಏಮ್ಸ್)ಗಳನ್ನು ಆರಂಭ ಮಾಡಲಾಗುತ್ತಿದೆ. ಸ್ಟೆಂಟ್ಗ್ಳ ಮಾರಾಟದರದಲ್ಲಿ ಭಾರೀ ಕಡಿತ ಮಾಡಲಾಗಿದೆ. 50000 ಬೆ ಬಾಳುವ ಸ್ಟೆಟ್ ಕೆಲವೊಮ್ಮೆ 1 ಲಕ್ಷಕ್ಕೆ ಏರುತ್ತಿತ್ತು. 1 ಲಕ್ಷದ್ದು 2 ಲಕ್ಷಕ್ಕೆ, ಎರಡು ಲಕ್ಷದ್ದು 2.5 ಲಕ್ಷಕ್ಕೂ ಮಾರಾಟವಾಗುತ್ತಿತ್ತು. ಮಧ್ಯಮ ವರ್ಗದ ಕುಟುಂಬದ ವ್ಯಕ್ತಿ ಹೃದಯ ಸಮಸ್ಯೆ ಹೊಂದಿದ್ದರೆ ಆತನಿಗೆ ಸ್ಟಂಟ್ ಅಗತ್ಯ ಬಂದಾಗ ಇಷ್ಟೊಂದು ಬೆಲೆಯನ್ನು ನೀಡಿ ಖರೀದಿ ಮಾಡಲು ಆತನಿಂದ ಸಾಧ್ಯವಾಗುವುದಿಲ್ಲ. ಆತ ತನ್ನ ಮನೆ ಮತ್ತು ಸಂಪತ್ತನ್ನು ಅಡವಿಟ್ಟರೂ ಸಾಧ್ಯವಾಗುವುದಿಲ್ಲ. ಇದನ್ನು ತಡೆಯಲು ಸರ್ಕಾರ ಆಲೋಚಿಸಿ ಸ್ಟೆಂಟ್ಗೆಳ ಬೆಲೆ ಇಷ್ಟೊಂದು ಪ್ರಮಾಣದಲ್ಲಿ ಏರುವುದೇಕೆ ಎಂದು ಚರ್ಚಿಸಿತು. ಕಂಪನಿಗಳ ಜತೆ ಚರ್ಚೆ ನಡೆಸಿದ ನಂತರ ಸ್ಟೆಂಟ್ಗಟಳ ಬೆಲೆ ಶೇಕಡಾ 30ರಿಂದ 40 ರಷ್ಟು ಕಡಿಮೆಯಾಗಿದೆ. ಇವತ್ತು ಸಾಕಷ್ಟು ಹಿರಿಯ ಜೀವಿಗಳಿಗೆ ಮಂಡಿ ಶಸ್ತ್ರ ಚಿಕಿತ್ಸೆಯ ಅಗತ್ಯ ಎದ್ದು ಕಾಣುತ್ತದೆ. ಮೊಣಕಾಲು ಕಸಿಯ ಅಗತ್ಯ ಹೆಚ್ಚಿದೆ. ಹೀಗಾಗಿ ನಾವು ಮೊಣಕಾಲು ಕಸಿ ಸಾಧನಗಳ ದರ ತಗ್ಗಿಸಿದ್ದೇವೆ. ಜನೌಷಧಿ ಕೇಂದ್ರಗಳ ಮೂಲಕ ಕಡಿಮೆ ದರದ ಔಷಧಿಗಳನ್ನು ಪೂರೈಕೆ ಮಾಡುತ್ತಿದ್ದೇವೆ. ಆಸ್ಪತ್ರೆಗಳಲ್ಲಿ ಈಗಾಗಲೇ ಜನೌಷಧಿ ಕೇಂದ್ರಗಳು ಆರಂಭಗೊಂಡಿವೆ. ಈ ಮೊದಲು 12 ರೂಪಾಯಿಗೆ ಮಾರಾಟವಾಗುತ್ತಿದ್ದ ಉತ್ತಮ ಔಷಧಿಗಳ ಬೆಲೆ ಒಂದು ರೂಪಾಯಿ ಮತ್ತು ಐವತ್ತು ಪೈಸೆಗೂ ಬಂದಿದೆ.

ಸ್ನೇಹಿತರೇ, 24 ದೇಶಗಳಲ್ಲಿರುವ ನಮ್ಮ ವಿದೇಶಿ ಮಿಷನ್ಗಔಳಿಗೆ ಇಂದು ಆಯುರ್ವೇದ ದಿನವನ್ನು ಆಚರಿಸುವಂತೆ ನಾನು ತಿಳಿಸಿದ್ದೇನೆ. ಕಳೆದ 30 ವರ್ಷಗಳಲ್ಲಿ ಐಟಿ ಕ್ರಾಂತಿಯು ಇಡಿ ವಿಶ್ವವನ್ನು ವ್ಯಾಪಿಸಿಕೊಂಡಿದೆ. ಈಗ ಆರೋಗ್ಯ ಕ್ರಾಂತಿಯು ಆಯುರ್ವೇದದ ನಾಯಕತ್ವದಲ್ಲಿ ಇಡೀ ವಿಶ್ವವನ್ನು ವ್ಯಾಪಿಸಲಿ. ಇವತ್ತಿನ ವಿಶೇಷ ದಿನವನ್ನು ಈ ನಿಟ್ಟಿನಲ್ಲಿ ತಗೆದುಕೊಳ್ಳೋಣ. ನಾವೂ ಆಯುರ್ವೇದ ಬಳಸಿಕೊಳ್ಳೋಣ, ಆಯುರ್ವೇದವನ್ನು ಜೀವಂತವಾಗಿ ಇಡೋಣ ಮತ್ತು ಆಯುರ್ವೇದಕ್ಕಾಗಿ ಬದುಕೋಣ.

ಸ್ನೇಹಿತರೇ, ಅಖಿಲ ಭಾರತ ಸಂಸ್ಥೆಯು ಹಮ್ಮಿಕೊಂಡಿರುವ ಆಯುರ್ವೇದ ದಿನದಂದು ನಿಮ್ಮೆಲ್ಲರಿಗೂ ಶುಭಕೋರುತ್ತಾ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ. ಮತ್ತೊಮ್ಮೆ ನಿಮಗೆಲ್ಲರಿಗೂ ನನ್ನ ಶುಭಾಕಾಂಕ್ಷೆಗಳು.

ನಿಮ್ಮೆಲ್ಲರಿಗೂ ಧನ್ಯವಾದಗಳು,

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...

Prime Minister Shri Narendra Modi paid homage today to Mahatma Gandhi at his statue in the historic Promenade Gardens in Georgetown, Guyana. He recalled Bapu’s eternal values of peace and non-violence which continue to guide humanity. The statue was installed in commemoration of Gandhiji’s 100th birth anniversary in 1969.

Prime Minister also paid floral tribute at the Arya Samaj monument located close by. This monument was unveiled in 2011 in commemoration of 100 years of the Arya Samaj movement in Guyana.