Sardar Patel integrated India territorially, GST is integrating India economically: PM Modi
GST is a shining example of cooperative federalism which would facilitate inclusive growth of the nation: PM Modi
GST is a landmark achievement which is bound to take the nation towards exponential growth, says PM Modi
GST is the path breaking legislation for New India. It is a revolutionary taxation system for the digital India: Prime Minister
GST is 'Good and Simple Tax': PM Narendra Modi

 

ಆದರಣೀಯ ರಾಷ್ಟ್ರಪತಿ, ಗೌರವಾನ್ವಿತ ಉಪರಾಷ್ಟ್ರಪತಿ, ಲೋಕಸಭಾ ಸ್ಪೀಕರ್ ಮೇಡಮ್ ಅವರೆ, ಮಾಜಿ ಪ್ರಧಾನಿ ದೇವೇಗೌಡಜೀ, ಎಲ್ಲ ಸಂಪುಟ ಸಹೋದ್ಯೋಗಿಗಳೇ, ಸದನದ ಎಲ್ಲ ಸದಸ್ಯರೆ ಹಾಗೂ ಇಲ್ಲಿ ನೆರೆದಿರುವ ನಾನಾ ವಲಯಗಳನ್ನು ಪ್ರತಿನಿಧಿಸುವ ಬಂಧುಗಳೆ.
ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ನಾವು ಆಗಿಂದಾಗ್ಗೆ ಕೆಲವು ದಿಕ್ಕು ಬದಲಿಸುವಂತಹ ಸಂದರ್ಭಗಳಿಗೆ ಎದುರಾಗುತ್ತೇವೆ ಮತ್ತು ಅದು ಹೊಸ ಕನಸುಗಳು ಅರಳಲು ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸುವ ಮಾರ್ಗಗಳನ್ನು ತೆರೆಯುತ್ತದೆ. ಈ ಮಧ್ಯರಾತ್ರಿ ಸಮಯದಲ್ಲಿ ದೇಶವನ್ನು ಭವಿಷ್ಯದಲ್ಲಿ ಮುಂಚೂಣಿಗೆ ತರುವ ಭರವಸೆ ಈಡೇರಿಕೆಗೆ ನಾವೆಲ್ಲ ಒಟ್ಟಾಗಿ ಇಲ್ಲಿ ಸೇರಿದ್ದೇವೆ.
ಈಗಿನಿಂದ ಇನ್ನು ಕೆಲವೇ ಕ್ಷಣಗಳಲ್ಲಿ ನಮ್ಮ ದೇಶ ಹೊಸ ಆರ್ಥಿಕ ವ್ಯವಸ್ಥೆಗೆ ದಾಪುಗಾಲಿಡಲಿದೆ. ದೇಶದ 125 ಕೋಟಿ ಜನರು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಈ ಜಿಎಸ್ಟಿ ಪ್ರಕ್ರಿಯೆಯ ವ್ಯಾಪ್ತಿ ಕೇವಲ ಆರ್ಥಿಕ ರಂಗಕ್ಕೆ ಸಂಬಂಧಿಸಿದ್ದುದು ಎಂಬುದನ್ನು ನಾನು ನಂಬುವುದಿಲ್ಲ, ಇಂದಿನ ಈ ಸ್ಮರಣೀಯ ಸಮಾರಂಭ, ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಕಾರಿ ಒಕ್ಕೂಟ ಪದ್ಧತಿಗೆ ಉತ್ತಮ ಉದಾಹರಣೆಯಾಗಿದೆ. ಈ ಮಹತ್ವದ ದಿನಕ್ಕಾಗಿ ಹಲವು ಜ್ಞಾನಿಗಳು ದಶಕಗಳ ಕಾಲ ನಿರಂತರ ಪ್ರಯತ್ನ ನಡೆಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕಟ್ಟಿದ ತಂಡಗಳು ಈ ಸರಕು ಮತ್ತು ಸೇವಾ ತೆರಿಗೆಯ ಚೌಕಟ್ಟನ್ನು ಅಭಿವೃದ್ಧಿಗೊಳಿಸಿವೆ.
ಈ ಪವಿತ್ರ ಸಂದರ್ಭದಲ್ಲಿ ತಮ್ಮ ಅಮೂಲ್ಯ ಸಮಯದಲ್ಲಿ ಇಲ್ಲಿ ಬಂದು ಭಾಗವಹಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಅದಕ್ಕಾಗಿ ನಾನು ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತೇನೆ ಮತ್ತು ಇಂದು ಇಲ್ಲಿ ನೆರೆದಿರುವ ಎಲ್ಲರಿಗೂ ನನ್ನ ವಿನಯಪೂರ್ವಕ ಕೃತಜ್ಞತೆಗಳು. ನಾವು ತುಳಿದ ಮಾರ್ಗ, ನಾವು ಆಯ್ದುಕೊಂಡಿರುವ ದಿಕ್ಕು ಮತ್ತು ನಾವು ಅಭಿವೃದ್ಧಿಗೊಳಿಸಿರುವ ವ್ಯವಸ್ಥೆ ಕೇವಲ ಒಂದು ತಂಡದ ಅಥವಾ ಒಂದು ಸರ್ಕಾರದ ಸಾಧನೆಯಲ್ಲ, ಇದು ಹಂಚಿಕೆಯ ಪರಂಪರೆಯ ಪ್ರಯತ್ನ. ಸಂಘಟಿತ ಪ್ರಯತ್ನಗಳಿಂದಾಗಿ ಇದು ಸಾಧ್ಯವಾಗಿದೆ. ನಾವೆಲ್ಲ ಇಲ್ಲಿ ಒಗ್ಗೂಡಿ, ಸೆಂಟ್ರಲ್ ಹಾಲ್ನಲ್ಲಿ ಈ 12 ಗಂಟೆಯ ಸಮಯವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುತ್ತಿದ್ದೇವೆ.
ಹಲವು ಶ್ರೇಷ್ಠ ರಾಷ್ಟ್ರೀಯ ನಾಯಕರು ತಮ್ಮ ಹೆಜ್ಜೆ ಗುರುತು ಮೂಡಿಸಿ ಆಶೀರ್ವಾದ ಪಡೆದದ್ದು ಇದೇ ಸ್ಥಳದಲ್ಲಿ, ಅಂತಹ ಪವಿತ್ರ ಸ್ಥಳದಲ್ಲಿ ನಾವೀಗ ಕುಳಿತಿರುವುದಕ್ಕೆ ಗೌರವವಿದೆ. 1946 ಡಿಸೆಂಬರ್ 9ರಂದು ಇದೇ ಸೆಂಟ್ರಲ್ ಹಾಲ್ ದೇಶದ ಸಂವಿಧಾನ ರಚನೆಯ ಚೊಚ್ಚಲ ಸಭೆಗೆ ಸಾಕ್ಷಿಯಾಗಿತ್ತು. ಇಂದು ನಾವು ಆ ಸ್ಥಳವನ್ನು ಹೆಮ್ಮೆಯಿಂದ ನೋಡುತ್ತಿದ್ದೇವೆ. ಸಭಾಂಗಣದ ಮುಂದಿನ ಸಾಲುಗಳನ್ನು ನಮ್ಮ ರಾಷ್ಟ್ರೀಯ ಆದರ್ಶ ನಾಯಕರಾದ ಪಂಡಿತ್ ಜವಹರಲಾಲ್ ನೆಹರು, ಮೌಲಾನ ಅಬ್ದುಲ್ ಕಲಾಂ ಆಜಾದ್, ಸರ್ದಾರ್ ವಲ್ಲಭಬಾಯ್ ಪಟೇಲ್, ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್, ಆಚಾರ್ಯ ಕೃಪಲಾನಿ, ಡಾ. ರಾಜೇಂದ್ರ ಪ್ರಸಾದ್, ಸರೋಜಿನಿ ನಾಯ್ಡು ಅಂತಹ ದಿಗ್ಗಜರು ಅಲಂಕರಿಸಿದ್ದರು.
ಇದೇ ಸಭಾಂಗಣ 1947ರ ಆಗಸ್ಟ್ 14ರಂದು ಮಧ್ಯರಾತ್ರಿಯಲ್ಲಿ ದೇಶ ಸ್ವಾತಂತ್ರ್ಯಗಳಿಸಿದ ಸಮಾರಂಭಕ್ಕೂ ಸಾಕ್ಷಿಯಾಗಿತ್ತು. 1949ರ ನವೆಂಬರ್ 26ರಂದು ಈ ಸದನ ಮತ್ತೊಂದು ಐತಿಹಾಸಿಕ ಸಮಾರಂಭ, ರಾಷ್ಟ್ರ ಸಂವಿಧಾನದ ಅಳವಡಿಕೆಗೆ ಸಾಕ್ಷೀಕರಿಸಲ್ಪಟ್ಟಿತು.
ಹಲವು ವರ್ಷಗಳ ನಂತರ ಈ ಸದನ ಮತ್ತೊಮ್ಮೆ ಇತಿಹಾಸ ಪುಟಗಳತ್ತ ನೋಡುವಂತಹ ಕಾಲ ಬಂದಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಅತ್ಯಂತ ಬೃಹತ್ತಾದ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಸುಧಾರಣೆ ಜಾರಿಗೆ ಈ ಸ್ಥಳಕ್ಕಿಂತ ಅತ್ಯಂತ ಪ್ರಶಸ್ತವಾದ ಸ್ಥಳ ಮತ್ತೊಂದಿಲ್ಲ.
ಹಲವು ಒಳ್ಳೆಯ ಚರ್ಚೆಗಳು, ಒಪ್ಪಂದಗಳು ಮತ್ತು ಭಿನ್ನಾಭಿಪ್ರಾಯಗಳ ನಡುವೆ ಹೊಸ ಮಾರ್ಗ ಕಂಡುಕೊಳ್ಳಲಾಗಿದೆ. ಕೆಲವೊಮ್ಮೆ ಹಾದಿ ತಪ್ಪುತ್ತಿದ್ದಾಗ ಮಾಧ್ಯಮ ಮಾರ್ಗವನ್ನು ಒಪ್ಪಿಕೊಳ್ಳುವಂತಹುದು ಭಾರತೀಯ ಸಂವಿಧಾನ ರಚನೆಗೊಂಡಾಗ ಹುಟ್ಟಿಕೊಂಡಿದೆ. ಎರಡು ವರ್ಷ, ಹನ್ನೊಂದು ತಿಂಗಳೂ ಮತ್ತು ಹದಿನೇಳು ದಿನಗಳ ಸುದೀರ್ಘ ಸಮಾಲೋಚನೆಗಳ ನಂತರ ದೇಶದ ಎಲ್ಲ ಭಾಗಗಳ ಜನರು ಒಗ್ಗೂಡಿ, ಚರ್ಚಿಸಿ ಸಂವಿಧಾನವನ್ನು ರೂಪಿಸಿದ್ದಾರೆ. ಅದೇ ರೀತಿ ಜಿಎಸ್ಟಿ ಕೂಡ ಬಹುದೂರ ಕ್ರಮಿಸಿದ ಫಲವಾಗಿದೆ. ಹಲವು ವರ್ಷಗಳ ಕಾಲ ನಡೆಸಿದ ನಿರಂತರ ಪ್ರಯತ್ನಕ್ಕೆ ರಾಜ್ಯ ಸರ್ಕಾರಗಳು ಬೆಂಬಲಿಸಿವೆ. ಮಾಜಿ ಸಚಿವರು ಹಾಗೂ ದೇಶದ ಅತ್ಯುತ್ತಮ ಜ್ಞಾನಿಗಳ ಜತೆ ನಿರಂತರ ಸಮಾಲೋಚನೆಗಳು ಹಾಗೂ ಅವರ ಸಹಕಾರದಿಂದಾಗಿ ಜಿಎಸ್ಟಿ ಇಂದು ಸಾಕಾರಗೊಳ್ಳುತ್ತಿದೆ.
ಸಂವಿಧಾನ ರೂಪಿಸಿದಾಗ ಎಲ್ಲರಿಗೂ ಸಮಾನ ಅವಕಾಶಗಳು ಮತ್ತು ಸಮಾನ ಹಕ್ಕುಗಳನ್ನು ನೀಡುವ ಚೌಕಟ್ಟನ್ನು ಪರಿಚಯಿಸಲಾಗಿದೆ. ಬಹುಮುಖ್ಯವಾಗಿ ಜಿಎಸ್ಟಿಯ ಉದ್ದೇಶ ಆರ್ಥಿಕ ಸುಧಾರಣೆಗಳನ್ನು ತರುವುದಾಗಿದೆ. ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿರುವ ಈ ವ್ಯವಸ್ಥೆ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಅತ್ಯುತ್ತಮ ಉದಾಹರಣೆಯಾಗಿದೆ.
ಜಿಎಸ್ಟಿ ಜಾರಿಯೊಂದಿಗೆ ಟೀಂ ಇಂಡಿಯಾ ತನ್ನ ಸಾಮಥ್ರ್ಯ ಮತ್ತು ಕಾರ್ಯತತ್ಪರತೆಯನ್ನು ನಿರೂಪಿಸಿದೆ. ಜಿಎಸ್ಟಿ ಮಂಡಳಿ ಎಂತಹ ವ್ಯವಸ್ಥೆ ರೂಪಿಸಿದೆ ಎಂದರೆ ಎಲ್ಲ ದುರ್ಬಲ ವರ್ಗದವರು ತಮಗೆ ಆಶ್ವಾಸನೆ ನೀಡಿದ ಸವಲತ್ತುಗಳನ್ನು ಪಡೆಯಬಹುದಾಗಿದೆ. ಜಿಎಸ್ಟಿಗೆ ಸಂಬಂಧಿಸಿದ ಜನರು ರಾಜಕೀಯವನ್ನು ಮೀರಿ ಅವಿರೋಧವಾಗಿ ಬಡಜನರ ಕಲ್ಯಾಣಕ್ಕಾಗಿ ತಮ್ಮ ಕೊಡುಗೆ ನೀಡಿದ್ದಾರೆ. ಅರುಣ್ ಜಿ ಅವರು, ತಮ್ಮ ಸರ್ಕಾರದೊಂದಿಗೆ ಹೆಜ್ಜೆಹಾಕಿದ ಅಂತಹವರ ಕೊಡುಗೆಯನ್ನು ಸ್ಮರಿಸಿದ್ದಾರೆ. ಈ ಮಹತ್ವದ ಮೈಲಿಗಲ್ಲು ಸ್ಥಾಪನೆ ಚಳುವಳಿಯಲ್ಲಿ ಭಾಗಿಯಾದ ಎಲ್ಲರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು.
ಎಲ್ಲ ರಾಜ್ಯಗಳಿಗೂ ಹೆಚ್ಚಿನ ಲಾಭವಾಗಲಿದೆ. ಅವುಗಳಿಗೆಲ್ಲ ಅಭಿವೃದ್ಧಿಯ ಸಮಾನ ಅವಕಾಶಗಳು ಲಭ್ಯವಾಗಲಿದೆ. ಜಿಎಸ್ಟಿ ಹಾದಿ ಹೇಗಿದೆ ಎಂದರೆ ನಮ್ಮ ರೈಲ್ವೆಯ ರೀತಿ, ರೈಲ್ವೆಯ ಕಾರ್ಯಾಚರಣೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳು ಸಮಾನ ಪಾತ್ರ ನಿರ್ವಹಿಸುವಂತೆ ಇಲ್ಲೂ ಸಹ ಜತೆಯಾಗಿರುತ್ತವೆ. ಅದಕ್ಕೆ ರಾಜ್ಯಮಟ್ಟದಲ್ಲಿ ಪ್ರಾದೇಶಿಕ ಬೆಂಬಲ ದೊರೆಯುತ್ತದೆ. ಭಾರತೀಯ ರೈಲ್ವೆ ಎಲ್ಲ ಪ್ರತಿನಿಧಿಗಳನ್ನು ಪ್ರತಿನಿಧಿಸುತ್ತದೆ.
ಕೇಂದ್ರ ಸೇವೆಗಳ ಎಲ್ಲ ಅಧಿಕಾರಿಗಳನ್ನು ಬೇರೆ ಬೇರೆ ರಾಜ್ಯಗಳಿಗೆ ನಿಯೋಜಿಸಲಾಗಿದೆ, ಅವರು ರಾಜ್ಯಗಳನ್ನು ಕೇಂದ್ರದ ಮುನ್ನೋಟಕ್ಕೆ ತಕ್ಕಂತೆ ಹಳಿಗೆ ತರುವ ಕೆಲಸ ಮಾಡುತ್ತಿದ್ದಾರೆ.
ಜಿಎಸ್ಟಿ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಜಾರಿಯಾಗುತ್ತಿರುವ ಹೊಸ ವ್ಯವಸ್ಥೆ. ಆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರಂತರ ಸಂಘಟಿತ ಪ್ರಯತ್ನ ನಡೆಸಿವೆ. ಜಿಎಸ್ಟಿ ಒಂದು ಮಹತ್ವದ ಮೈಲಿಗಲ್ಲಾಗಿದ್ದು, ಅದು ಮುಂದಿನ ತಲೆಮಾರಿಗೆ ಒಂದು ಅದ್ಬುತ ವ್ಯವಸ್ಥೆಯಾಗುತ್ತದೆ ಎಂದು ನಾವೆಲ್ಲಾ ಹೆಮ್ಮೆ ಪಡಬೇಕು. ದೇಶವನ್ನು ಅದು ಭಾರಿ ಪ್ರಗತಿಯತ್ತ ಕೊಂಡೊಯ್ಯಲಿದೆ.

ಇಂದು ಜಿಎಸ್ಟಿ ಮಂಡಳಿಯ 18ನೇ ಸಭೆ ನಡೆದಿದೆ, ಇನ್ನು ಕೆಲವೇ ಕ್ಷಣಗಳಲ್ಲಿ ಜಿಎಸ್ಟಿ ಜಾರಿಗೊಳ್ಳುತ್ತಿದೆ. ಕಾಕತಾಳೀಯವೆಂದರೆ ನಮ್ಮ ಪವಿತ್ರ ಗ್ರಂಥ ಗೀತೆಯಲ್ಲೂ ಸಹ 18 ಅಧ್ಯಾಯಗಳಿವೆ ಮತ್ತು ನಾವು ಇಂದು ಮುನ್ನಡೆಯುತ್ತಿದ್ದೇವೆ. ಇದಕ್ಕೆ ಬಹುದೊಡ್ಡ ಪ್ರಕ್ರಿಯೆ ನಡೆದಿದೆ. ಅದಕ್ಕಾಗಿ ಕಠಿಣ ಶ್ರಮಪಡಲಾಗಿದೆ ಮತ್ತು ಕೆಲವು ಆಂತಕಗಳೂ ಇವೆ. ರಾಜ್ಯಗಳ ತಲೆಯಲ್ಲಿ ಇನ್ನೂ ಪ್ರಶ್ನೆಗಳಿವೆ. ಆದರೆ ನಾವು ಪರಿಶ್ರಮ ಮತ್ತು ಕಾರ್ಯತತ್ಪರತೆಯಿಂದ ಹಿಡಿದಿರುವ ಕಾರ್ಯವನ್ನು ಸಾಧಿಸಬಹುದಾಗಿದೆ.
ಚಾಣಕ್ಯ ಹೀಗೆ ಹೇಳುತ್ತಾರೆ.
“यद दुरं यद दुराद्यम, यद च दुरै, व्यवस्थितम्,
तत् सर्वम् तपसा साध्यम तपोहिदुर्तिक्रमम।“

ಚಾಣಕ್ಯನ ಮಾತುಗಳ ಸಾರಾಂಶದಲ್ಲಿ ಜಿಎಸ್ಟಿ ಇಡೀ ಪ್ರಕ್ರಿಯೆಯನ್ನು ಸಂಕ್ಷಿಪ್ತವಾಗಿ ಹೇಳಬಹುದು. ತುಂಬಾ ಕಷ್ಟಕರವಾದ ಯಾವುದೇ ಕೆಲಸವನ್ನೂ ಸಹ ತಪಸ್ಸು ಮತ್ತು ಕಠಿಣ ಪರಿಶ್ರಮದಿಂದ ಸಾಧಿಸಲು ಸಾಧ್ಯ. ನಾವು ಸ್ವಾತಂತ್ರ್ಯಗಳಿಸಿದಾಗ ನಮ್ಮಲ್ಲಿ 500ಕ್ಕೂ ಅಧಿಕ ಸಣ್ಣ ಪ್ರಾದೇಶಿಕ ರಾಜ್ಯಗಳಿದ್ದವು ಎಂಬುದನ್ನು ಊಹಿಸಲು ಸಾಧ್ಯವೇ? ಸರ್ದಾರ್ ವಲ್ಲಭಬಾಯ್ ಪಟೇಲ್ ಅವರಿಂದಾಗಿ ಎಲ್ಲ ಪ್ರಾದೇಶಿಕ ರಾಜ್ಯಗಳನ್ನು ಒಗ್ಗೂಡಿಸಲು ಸಾಧ್ಯವಾಯಿತು. ಇಲ್ಲವಾದರೆ ಇಂದು ಭಾರತದ ರಾಜಕೀಯ ನಕ್ಷೆಯ ಚಿತ್ರಣ ಏನಾಗುತ್ತಿತ್ತು ಊಹಿಸಿ? ಸರ್ದಾರ್ ವಲ್ಲಭಬಾಯ್ ಪಟೇಲ್ ಅವರು ಹಲವು ರಾಜ್ಯಗಳನ್ನು ಏಕೀಕರಣಗೊಳಿಸಿ ಹೇಗೆ ಅವುಗಳ ಬೆಳವಣಿಗೆಗೆ ನೆರವಾದರೂ ಹಾಗೆಯೇ, ಜಿಎಸ್ಟಿ ಆರ್ಥಿಕ ಏಕೀಕರಣವನ್ನು ತರಲಿದೆ. ನಾವು 29 ರಾಜ್ಯಗಳು, 7 ಕೇಂದ್ರಾಡಳಿತ ಪ್ರದೇಶಗಳನ್ನು ಪರಿಗಣಿಸಿದರೆ, 8 ಬಗೆಯ ರಾಜ್ಯ ತೆರಿಗೆಗಳು , ಹಲವು ಬಗೆಯ ಪದಾರ್ಥಗಳಿಗೆ ಹಲವು ಬಗೆಯ ತೆರಿಗೆಗಳು.. ಹೀಗೆ ಎಲ್ಲ ತೆರಿಗೆಗಳನ್ನು ಸೇರಿಸಿದರೆ ಅವುಗಳೇ ಸಂಖ್ಯೆಯೇ ಸುಮಾರು 500..ಆಗುತ್ತವೆ ! ಇಂದು ಆ ಎಲ್ಲ ತೆರಿಗೆಗಳು ದೂರವಾಗಲಿವೆ, “ಒಂದು ರಾಷ್ಟ್ರ- ಒಂದು ತೆರಿಗೆ” ವ್ಯವಸ್ಥೆ ಅನುಷ್ಠಾನಕ್ಕೆ ಬರಲಿದೆ. ಗಂಗಾನಗರದಿಂದ ಇಟಾನಗರದವರೆಗೆ, ಲೇಹ್ನಿಂದ ಲಕ್ಷದ್ವೀಪದವರೆಗೆ ಒಂದೇ ಬಗೆಯ ತೆರಿಗೆ ಇರಲಿದೆ.
ಒಮ್ಮೆ ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್, ಇಡೀ ವಿಶ್ವದಲ್ಲಿ ಅರ್ಥಮಾಡಿಕೊಳ್ಳಲಾಗದ ಅತ್ಯಂತ ಕ್ಲಿಷ್ಟಕರ ವಿಷಯ ಎಂದರೆ ಆದಾಯ ತೆರಿಗೆ ಎಂದಿದ್ದರು. ಆವರೇನಾದರೂ ಈಗ ಇದ್ದಿದ್ದರೆ ಇಷ್ಟೆಲ್ಲಾ ತೆರಿಗೆಗಳನ್ನು ನೋಡಿ ಅವರು ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎಂದು ನನಗೆ ಆಚ್ಚರಿ ಮೂಡಿಸುತ್ತದೆ. ಆದರೆ ನಾವು ಇಂದು ಉತ್ಪಾದನಾ ಸಾಮಥ್ರ್ಯದಲ್ಲಿ ಹೆಚ್ಚಿನ ವ್ಯತ್ಯಾಸಗಳನ್ನೇನೂ ಕಾಣುತ್ತಿಲ್ಲ. ಆದರೆ ಪದಾರ್ಥಗಳು ಹೊರಗೆ ಹೋದ ಮೇಲೆ, ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ತೆರಿಗೆ ಪದ್ಧತಿಗಳಿರುವುದರಿಂದ ಅವುಗಳ ಬೆಲೆಗಳಲ್ಲಿ ವ್ಯತ್ಯಾಸಗಳಿರುತ್ತವೆ. ದೆಹಲಿ-ಗುರುಗ್ರಾಮ ಮತ್ತು ನೋಯ್ಡಾ ಸುತ್ತಮುತ್ತ 20-30 ಕಿಲೋಮೀಟರ್ ಪಾಸಲೆಯಲ್ಲಿ ಒಂದೇ ವಸ್ತುವಿಗೆ ಬೇರೆ ಬೇರೆ ದರ ಇರುತ್ತದೆ. ಇದು ಏಕೆಂದರೆ, ಹರ್ಯಾಣ, ದೆಹಲಿ ಮತ್ತು ಉತ್ತರ ಪ್ರದೇಶಗಳಲ್ಲಿ ಬೇರೆ ಬೇರೆ ತೆರಿಗೆ ವ್ಯವಸ್ಥೆ ಇರುವುದರಿಂದ. ಈ ಎಲ್ಲ ಏರಿಳಿತಗಳಿಂದ ನಾಗರಿಕರು, ನಾನು ಗುರುಗ್ರಾಮದಲ್ಲಿ ಹೋದರೆ ಅಲ್ಲಿ ಪದಾರ್ಥ ಒಂದು ಬೆಲೆಗೆ ಸಿಗುತ್ತದೆ, ನಾನು ದೆಹಲಿಗೆ ಹೋದರೆ ಅದೇ ಪದಾರ್ಥ ಇನ್ನೊಂದು ಬೆಲೆಗೆ ಹಾಗೂ ನೋಯ್ಡಾಕ್ಕೆ ಹೋದರೆ ಅಲ್ಲೂ ಅದೇ ಪದಾರ್ಥಕ್ಕೆ ಬೇರೊಂದು ಬೆಲೆ ತೆರಬೇಕಾಗುತ್ತದೆ ಎಂದು ಆಶ್ವರ್ಯ ವ್ಯಕ್ತಪಡಿಸುತ್ತಾರೆ.
ಎಲ್ಲರ ಮನಸ್ಸಿನಲ್ಲೂ ಒಂದು ಬಗೆಯ ಗೊಂದಲವಿದೆ. ವಿದೇಶಿ ಬಂಡವಾಳ ಹೂಡಿಕೆದಾರರೂ ಸಹ ಒಂದೊಂದು ರಾಜ್ಯದಲ್ಲಿ ಒಂದೊಂದು ಬಗೆಯ ತೆರಿಗೆ ಪದ್ದತಿಗಳನ್ನು ನೋಡಿ ಗೊಂದಲಕ್ಕೆ ಒಳಗಾಗುತ್ತಿದ್ದರು. ನಾವು ಇಂದು ಅಂತಹ ಸ್ಥಿತಿಯಿಂದ ಮುಕ್ತಿ ಹೊಂದುವತ್ತ ಮುನ್ನಡೆಯುತ್ತಿದ್ದೇವೆ. ಅರುಣ್ ಜಿ ಒಮ್ಮೆ ಜಿಎಸ್ಟಿ ಜಾರಿಗೆ ಬಂದ ನಂತರ ಮಾರಾಟ ತೆರಿಗೆ, ವ್ಯಾಟ್ ಸೇರಿದಂತೆ ಎಲ್ಲ ಬಗೆಯ ತೆರಿಗೆಗಳು ಇಲ್ಲವಾಗಲಿವೆ ಎಂಬುದನ್ನು ವಿವರಿಸಿದ್ದಾರೆ. ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಉದ್ದನೆಯ ಸರದಿ ಇನ್ನು ಇರುವುದಿಲ್ಲ. ಕೋಟ್ಯಾಂತರ ರೂಪಾಯಿ ಬೆಲೆಯ ಇಂಧನ ವ್ಯಯವಾಗುವುದಿಲ್ಲ.
ಅದೇ ರೀತಿ ಪರಿಸರ ಹಾನಿಯೂ ಕೂಡ ತಗ್ಗಲಿದೆ. ನಾವು ಇದೀಗ ಎಲ್ಲ ಬಗೆಯ ತೊಂದರೆಗಳಿಂದ ಮುಕ್ತರಾಗಿ ದೇಶಾದ್ಯಂತ ಏಕರೂಪದ ತೆರಿಗೆ ಪದ್ಧತಿ ಜಾರಿಯಾಗಲಿದೆ. ಕೆಲವೊಮ್ಮೆ ನಾಶವಾಗುವಂತಹ ವಸ್ತುಗಳು ಸಕಾಲದಲ್ಲಿ ನಿಗದಿತ ಸ್ಥಳ ತಲುಪಲು ವಿಳಂಬವಾಗಬಹುದು, ಅದಕ್ಕೆ ಕಾರಣ ಸಂಸ್ಕರಣೆಗೆ ತೆಗೆದುಕೊಳ್ಳುವ ಸಮಯ ಮತ್ತು ಅದರಿಂದ ಎರಡೂ ಕಡೆಗಳಲ್ಲೂ ನಷ್ಟವಾಗುತ್ತದೆ. ನಾವು ಇಂದು ಅದರಿಂದ ಮುಕ್ತವಾಗುತ್ತಿದ್ದೇವೆ. ಇಡೀ ದೇಶ ಆಧುನಿಕ ತೆರಿಗೆ ಪದ್ಧತಿಯತ್ತ ಮುಂದಡಿಯಿಡುತ್ತಿದೆ. ಈ ಪದ್ಧತಿ ಅತ್ಯಂತ ಸರಳ ಮತ್ತು ಹೆಚ್ಚು ಪಾರದರ್ಶಕ. ಇದು ಕಪ್ಪು ಹಣ ನಿರ್ಮೂಲನೆಗೆ ನಮಗೆ ಸಹಕಾರಿಯಾಗುವುದಲ್ಲದೆ ಭ್ರಷ್ಟಾಚಾರವನ್ನು ತೊಲಗಿಸಿ, ಪ್ರಾಮಾಣಿಕತೆಗೆ ಬೆಲೆ ತಂದುಕೊಡಲಿದೆ.
ಇದು ಪ್ರಾಮಾಣಿಕವಾಗಿ ವ್ಯಾಪಾರ ನಡೆಸುವವರಿಗೆ ಆಸಕ್ತಿ ಮತ್ತು ಉತ್ಸಾಹವನ್ನು ತಂದುಕೊಡಲಿದೆ. ಇದು ಹೊಸ ಆಡಳಿತ ಸಂಸ್ಕøತಿಯನ್ನು ತರಲಿದೆ. ನಾವೆಲ್ಲ ತೆರಿಗೆ ಭಯೋತ್ಪಾದನೆ ಮತ್ತು ಇನ್ಸ್ಪೆಕ್ಟರ್ ರಾಜ್ ವ್ಯವಸ್ಥೆಯನ್ನು ನೋಡಿದ್ದೇವೆ. ಇಂದು ಜಿಎಸ್ಟಿಯ ಮೂಲಕ ಪಾರದರ್ಶಕತೆ ತಂದಿದ್ದು, ತಾಂತ್ರಿಕ ಪ್ರಯೋಗಗಳಿಂದಾಗಿ ಹಲವು ಬಿಟ್ಟುಹೋದ ವಲಯಗಳನ್ನು ಗುರುತಿಸಲಾಗಿದೆ. ಜಿಎಸ್ಟಿಯ ಸಾಮಥ್ರ್ಯವೆಂದರೆ ಸಾಮಾನ್ಯ ವ್ಯಾಪಾರಿಗಳ ಮೇಲೆ ದೌರ್ಜನ್ಯ ಎಸಗುವುದು ನಿಲ್ಲುತ್ತದೆ. 20 ಲಕ್ಷ ರೂಪಾಯಿವರೆಗಿನ ವಹಿವಾಟು ನಡೆಸುವ ವರ್ತಕರಿಗೆ ಇದರ ವ್ಯಾಪ್ತಿಯಿಂದ ವಿನಾಯಿತಿ ನೀಡಲಾಗಿದೆ. 75 ಲಕ್ಷ ರೂಪಾಯಿವರೆಗೆ ವಹಿವಾಟು ನಡೆಸುವ ವ್ಯಾಪಾರಿಗಳಿಗೆ ಹಲವು ಬಗೆಯ ವಿನಾಯಿತಿಗಳನ್ನು ನೀಡಲಾಗಿದೆ.
ಈ ಹೊಸ ವ್ಯವಸ್ಥೆಯ ಜಾರಿಗೆ ಕೆಲವು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂಬುದು ನಿಜ. ಆ ವ್ಯವಸ್ಥೆಗಳು ಕೇವಲ ತಳಮಟ್ಟದಲ್ಲಲ್ಲ, ಸಾಮಾನ್ಯ ಜನರಿಗೆ ಈ ಹೊಸ ವ್ಯವಸ್ಥೆಯಿಂದ ಯಾವುದೇ ಹೊರೆಯಾಗುವುದಿಲ್ಲ.
ಗೆಳೆಯರೆ, ಜಿಎಸ್ಟಿ ಎನ್ನುವುದು ಕೇವಲ ತಾಂತ್ರಿಕ ಅಂಶಗಳಿಗೆ ಸೀಮಿತವಾದ ಪದವಲ್ಲ. ಈ ಪದ್ಧತಿ ಬಡಜನರ ಕಲ್ಯಾಣಕ್ಕಾಗಿ ರೂಪಿಸಿರುವಂತಹುದು. ಸ್ವಾತಂತ್ರ್ಯಗಳಿಸಿ, 70 ವರ್ಷಗಳಾದರೂ ನಾವು ಬಡÀಜನರಿಗೆ ಏನನ್ನೂ ಮಾಡಲಾಗುತ್ತಿಲ್ಲ, ಹಾಗೆಂದು ಪ್ರಯತ್ನಗಳನ್ನು ಮಾಡೇ ಇಲ್ಲ ಎಂದಲ್ಲ. ಪ್ರತಿಯೊಂದು ಸರ್ಕಾರವೂ ಆ ನಿಟ್ಟಿನಲ್ಲಿ ಹಲವು ಗಂಭೀರ ಪ್ರಯತ್ನಗಳನ್ನು ನೆಡೆಸಿವೆ. ಆದರೆ ಸೀಮಿತ ಸಂಪನ್ಮೂಲಗಳು, ನಮ್ಮ ದೇಶದ ಬಡಜನರ ಅಗತ್ಯತೆಗಳನ್ನು ಪೂರ್ಣಗೊಳಿಸುವುದಕ್ಕೆ ದೊಡ್ಡ ಅಡತಡೆಯಾಗಿವೆ.
ನಾವು ಎತ್ತರಕ್ಕೆ ಬೆಳೆಯುತ್ತಿದ್ದೇವೆ, ಅದರ ಜತೆಗೆ ಅಗಲಕ್ಕೂ ನಮ್ಮ ಪ್ರಗತಿಯನ್ನು ವಿಸ್ತರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯ ಮಾಡುವುದು ಸುಲಭದ ಕೆಲಸ. ನನಗೆ ವಿಶ್ವಾಸವಿರುವುದೇನೆಂದೆರೆ ಸಣ್ಣ ವ್ಯಾಪಾರಿಗಳು ಖಚಿತವಾಗಿಯೂ ತಮ್ಮ ಪ್ರಯೋಜನಗಳನ್ನು ಬಡಜನರಿಗೆ ವರ್ಗಾಯಿಸಲು ಸಹಕಾರ ನೀಡುತ್ತಾರೆ, ಆ ಮೂಲಕ ಬಡಜನರಿಗೆ ಅನುಕೂಲವಾಗಲಿದೆ.
ಕೆಲವೊಮ್ಮೆ ನಾವು ಯಾವುದಾದರೂ ಹೊಸದನ್ನು ಆರಂಭಿಸಬೇಕಾದರೆ ಅದು ಫಲ ನೀಡುವುದೋ ಅಥವಾ ಇಲ್ಲವೋ ಎಂಬ ಆತಂಕದಲ್ಲಿ ಮುಳುಗಿರುತ್ತೇವೆ. ಉದಾಹರಣೆಗೆ ಮೊದಲ ಬಾರಿಗೆ ಹತ್ತು ಹಾಗೂ 12ನೇ ತರಗತಿಯ ಫಲಿತಾಂಶವನ್ನು ಆನ್ಲೈನ್ನಲ್ಲಿ ಬಿಡುಗಡೆಗೊಳಿಸಿದಾಗ ವ್ಯವಸ್ಥೆ ತಟಸ್ಥ(ಹ್ಯಾಂಗ್)ಆಗಿತ್ತು, ಮರುದಿನ ಎಲ್ಲ ಪತ್ರಿಕೆಗಳ ಗಮನ ಅದೇ ವಿಷಯದ ಬಗ್ಗೆ ಕೇಂದ್ರೀಕೃತವಾಗಿತ್ತು. ಇಂದೂ ಕೂಡ ನಾವು ಅಂತಹ ವಿಷಯಗಳನ್ನು ಅಗ್ಗಾಗ್ಗೆ ಕೇಳುತ್ತಿರುತ್ತೇವೆ.
ಪ್ರತಿಯೊಬ್ಬರು ತಂತ್ರಜ್ಞಾನ ಸ್ನೇಹಿಯಾಗಿರುತ್ತಾರೆ ಎಂಬುದು ನಿಜವಲ್ಲ, ಆದರೆ ಯಾವುದೇ ಕುಟುಂಬದಲ್ಲಿ 10 ಅಥವಾ 12ನೇ ತರಗತಿ ಓದುವ ವಿದ್ಯಾರ್ಥಿ ಇದ್ದರೆ, ಆ ವಿದ್ಯಾರ್ಥಿ ಖಂಡಿತವಾಗಿಯೂ ತಂತ್ರಜ್ಞಾನದ ಬಗ್ಗೆ ತಿಳಿದಿರುತ್ತಾನೆ. ಜಿಎಸ್ಟಿ ಎಷ್ಟು ಸರಳ ಎಂದರೆ 12ನೇ ತರಗತಿಯ ವಿದ್ಯಾರ್ಥಿಯೂ ಕೂಡ ವ್ಯಾಪಾರಿಗಳಿಗೆ ರಿಟರ್ನ್ಸ್ ಫೈಲ್ ಮಾಡಲು ನೆರವು ನೀಡಬಹುದು.
ನಾನು ಇಲ್ಲಿ ಮನವಿ ಮಾಡುವುದೇನೆಂದರೆ ಯಾರಿಗೆ ಭಯವಿದೆಯೋ ಅವರು ಅದನ್ನೆಲ್ಲ ಹೊರಹಾಕಿ ಎಂದು, ನೀವು ನಿಮ್ಮ ಕಣ್ಣುಗಳನ್ನು ನಿಗದಿತ ವೈದ್ಯರ ಬಳಿ ಪರೀಕ್ಷಿಸಿಕೊಳ್ಳುತ್ತೀರಿ ಎಂದಿಟ್ಟುಕೊಳ್ಳೋಣ. ಆತ ನಿಮ್ಮ ಕಣ್ಣುಗಳಿಗೆ ಶಕ್ತಿ ತುಂಬುತ್ತಾರೆ, ನಿಮಗೆ ಕನ್ನಡಕ ನೀಡುತ್ತಾರೆ, ಆ ಕನ್ನಡಕವನ್ನು ನೀವು ಧರಿಸಿದಾಗ ಅದಕ್ಕೆ ನೀವು ಹೊಂದಿಕ್ಕೊಳ್ಳಲು ಎರಡು ಮೂರು ದಿನ ಸಮಯ ಹಿಡಿಯುತ್ತದೆ. ಈ ಕಥೆಯ ಮುಖ್ಯ ಸಾರಾಂಶವೆಂದರೆ, ಕಣ್ಣುಗಳು ಹೊಸ ಕನ್ನಡಕಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಅದೇ ರೀತಿ ನಾವು ಹೊಸ ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸಿದರೆ ಖಂಡಿತವಾಗಿಯೂ ನಾವು ಆ ವ್ಯವಸ್ಥೆಗಳಿಗೆ ಸೇರ್ಪಡೆಗೊಳ್ಳಬಹುದು. ಗೊಂದಲ ಹರಡುವುದನ್ನು ನಿಲ್ಲಿಸಲು ಇದು ಸಕಾಲ. ನಾವು ಅಭಿವೃದ್ಧಿಯತ್ತ ಹಾಗೂ ದೇಶದ ಒಳಿತಿಗೆ ಗಮನಕೊಡಲು ಇದು ಸೂಕ್ತಕಾಲ. ನಾವು ಜಿಎಸ್ಟಿಯನ್ನು ವಿಶ್ವದ ಆರ್ಥಿಕ ಸ್ಥಿತಿ ಮೇಲೆ ಸಕಾರಾತ್ಮಕ ಪರಿಣಾಮ ಬೀರುವಂತೆ ಅತ್ಯಂತ ಮುಂಚೂಣಿಗೆ ಕೊಂಡೊಯ್ಯಬೇಕು.
ಜಿಎಸ್ಟಿ ದೇಶದಲ್ಲಿನ ಅಸಮತೋಲನವನ್ನು ನಿವಾರಿಸುವ ವ್ಯವಸ್ಥೆಯಾಗಲಿದೆ. ಇದು ದೇಶದ ರಫ್ತನ್ನು ಉತ್ತೇಜಿಸುತ್ತದೆ. ಇದು ಈಗಾಗಲೇ ಅಭಿವೃದ್ಧಿ ಹೊಂದಿರುವ ರಾಜ್ಯಗಳಿಗೆ ಇನ್ನಷ್ಟು ಶಕ್ತಿ ತುಂಬುವುದಲ್ಲದೆ, ಹಿಂದುಳಿದ ರಾಜ್ಯಗಳು ಅಭಿವೃದ್ಧಿ ಹೊಂದಲು ಅವಕಾಶಗಳನ್ನೂ ಸಹ ಸೃಷ್ಟಿಸಲಿದೆ. ನಮ್ಮ ರಾಜ್ಯಗಳು ನೈಸರ್ಗಿಕವಾಗಿ, ಸಂಪದ್ಭರಿತವಾಗಿವೆ. ಬಿಹಾರ, ಪೂರ್ವ ಉತ್ತರ ಪ್ರದೇಶ, ಈಶಾನ್ಯ ರಾಜ್ಯಗಳು ಮತ್ತು ಒಡಿಶಾ ನೋಡಿದರೆ ಅರ್ಥವಾಗುತ್ತದೆ. ಈ ಎಲ್ಲಾ ರಾಜ್ಯಗಳು ನೈಸರ್ಗಿಕ ಸಂಪನ್ಮೂಲಗಳಿಂದ ಕಂಗೊಳಿಸುತ್ತಿವೆ.
ಇವೆಲ್ಲ ಏಕರೂಪ ತೆರಿಗೆ ಪದ್ಧತಿಗೆ ಒಳಪಟ್ಟರೆ ಎಲ್ಲೆಲ್ಲಿ ನ್ಯೂನತೆಗಳಿವೆಯೋ ಅವುಗಳನ್ನೆಲ್ಲ ನಿವಾರಿಸಿದರೆ ದೇಶ ಮುಂಚೂಣಿಯತ್ತ ಸಾಗಲಿದೆ. ಅಭಿವೃದ್ಧಿಯಲ್ಲಿ ಭಾರತದ ಎಲ್ಲಾ ರಾಜ್ಯಗಳಿಗೂ ಸಮಾನ ಅವಕಾಶ ಲಭ್ಯವಾಗಲಿದೆ. ಜಿಎಸ್ಟಿ ನಮ್ಮ ರೈಲ್ವೆಯಂತೆ, ರೈಲ್ವೆಯನ್ನು ಕೇಂದ್ರ ಸರ್ಕಾರ ರಾಜ್ಯಗಳ ಜತೆಗೂಡಿ ಮುನ್ನಡೆಸುತ್ತಿದೆ. ನಾವು ಅದನ್ನು ಭಾರತೀಯ ರೈಲ್ವೆ ಎಂದು ನೋಡುತ್ತೇವೆ. ನಾವು ಕೇಂದ್ರ ಸರ್ಕಾರಿ ಸೇವೆಗಳಿಂದ ಅಧಿಕಾರಿಗಳನ್ನು ಕೇಂದ್ರ ಮತ್ತು ರಾಜ್ಯಗಳಿಗೆ ನಿಯೋಜಿಸಿದ್ದೇವೆ. ಅವರೆಲ್ಲ ಒಗ್ಗೂಡಿ ಭಾರತಕ್ಕಾಗಿ ದುಡಿಯುತ್ತಿದ್ದಾರೆ. ಜಿಎಸ್ಟಿಯಡಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳು ಒಟ್ಟಾಗಿ ಒಂದೇ ದಿಕ್ಕಿನಲ್ಲಿ ಕೆಲಸ ಮಾಡುತ್ತಿವೆ. ಇದು “ಏಕ್ ಭಾರತ್ – ಶ್ರೇಷ್ಠ್ ಭಾರತ್”ಗೆ ಅತ್ಯುತ್ತಮ ಉದಾಹರಣೆ. ಇದರ ಪರಿಣಾಮಗಳ ಬಗ್ಗೆ ಮುಂಬರುವ ತಲೆಮಾರು ಬಹಳ ಹೆಮ್ಮೆಯಿಂದ ಮೆಚ್ಚುಗೆ ವ್ಯಕ್ತಪಡಿಸುತ್ತದೆ.
2022ಕ್ಕೆ ಭಾರತ ಸ್ವಾತಂತ್ರ್ಯಗಳಿಸಿ 75 ವರ್ಷಗಳಾಗಲಿದ್ದು, ಅದನ್ನು ವಜ್ರ ಮಹೋತ್ಸವವನ್ನಾಗಿ ಆಚರಿಸಲಾಗುವುದು. ಆ ವೇಳೆಗೆ ನವಭಾರತದ ನಿರ್ಮಾಣದ ನಿಟ್ಟಿನಲ್ಲಿ ನಾವು ಪಯಣ ಆರಂಭಿಸಿದ್ದೇವೆ. ಈ ನವಭಾರತದ ಕನಸು ನಮ್ಮ 125 ಕೋಟಿ ಭಾರತೀಯರದು.
ಆದ್ದರಿಂದ ಮಹಿಳೆಯರೆ ಮತ್ತು ಮಹನಿಯರೆ, ಜಿಎಸ್ಟಿ ನಮ್ಮ ಕನಸಿನ ಭಾರತವನ್ನು ನಿರ್ಮಾಣ ಮಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಬಯಸುತ್ತೇನೆ.

 

ಲೋಕಮಾನ್ಯ ತಿಲಕರ ತಮ್ಮ “ಗೀತಾ ರಹಸ್ಯ”ದ ಕೊನೆಯಲ್ಲಿ ಹೇಳಿರುವಂತೆ ಜಿಎಸ್ಟಿ ತಂಡ ಹೇಗೆ ಮುನ್ನಡೆಯಬೇಕೆಂಬ ಆದರ್ಶ ನಮ್ಮನ್ನು ಆವರಿಸಿಕೊಂಡಿದೆ.
ಋಗ್ವೇದದಲ್ಲಿನ ಈ ಮಾತು ಇಂದಿಗೂ ನಮಗೆ ಸ್ಫೂರ್ತಿದಾಯಕ. ಅದು ಹೀಗೆ ಹೇಳುತ್ತದೆ.
सवाणिवाह: आकृति: समाना रुदयनिवाह:
समान वस्तु वो मनो यथावा सुसहासिति
ಅದರ ಅರ್ಥ ನಾವೆಲ್ಲ ಒಂದೇ ನಿರ್ಣಯ, ನಿರ್ಧಾರ ಮತ್ತು ಭಾವನೆ ಹೊಂದಿರಬೇಕು, ನಮ್ಮ ಹೃದಯಗಳು ಸಮ ಸ್ಥಿತಿಯಲ್ಲಿ ಇರಬೇಕು. ಇದರಿಂದಾಗಿ ಸಮಾನ ಗುರಿ ಸಾಧನೆಗೆ ಪ್ರತಿಯೊಬ್ಬರೂ ಪರಸ್ಪರ ಬೆಂಬಲ ಮತ್ತು ಸಹಕಾರ ನೀಡಬೇಕು ಎಂಬುದಾಗಿದೆ.
ಜಿಎಸ್ಟಿ ನವಭಾರತದ ದಿಕ್ಕು ನಿರ್ಧರಿಸುವ ಶಾಸನ. ಡಿಜಿಟಲ್ ಇಂಡಿಯಾದಲ್ಲಿ ಹೊಸ ಕ್ರಾಂತಿ ಮಾಡಲಿರುವ ತೆರಿಗೆ ಪದ್ಧತಿ
ಸರಕು ಮತ್ತು ಸೇವಾ ತೆರಿಗೆ ನವಭಾರತದ ಮತ್ತು ಡಿಜಿಟಲ್ ಇಂಡಿಯಾದ ತೆರಿಗೆ ಪದ್ಧತಿಯಾಗಿದೆ. ಇದರಿಂದ ವ್ಯಾಪಾರ ವಹಿವಾಟು ನಡೆಸುವುದು ಸುಲಭವಾಗುವುದಷ್ಟೇ ಅಲ್ಲ, ಹೇಗೆ ವ್ಯಾಪಾರ ಮಾಡಬೇಕು ಎಂಬುದನ್ನು ತೋರಿಸಿಕೊಡುತ್ತದೆ. ಜಿಎಸ್ಟಿ ಕೇವಲ ತೆರಿಗೆ ಸುಧಾರಣೆಯಷ್ಟೇ ಅಲ್ಲ, ಇದು ಆರ್ಥಿಕ ಸುಧಾರಣೆಯ ನಿಟ್ಟಿನಲ್ಲಿ ಕೈಗೊಂಡ ಮಹತ್ವದ ಮೈಲುಗಲ್ಲಾಗಿದೆ. ತೆರಿಗೆ ಪುನರ್ ವಿಮರ್ಶೆಯಷ್ಟೇ ಅಲ್ಲದೆ ಇದು ಸಾಮಾಜಿಕ ಸುಧಾರಣೆಗೆ ಮಾರ್ಗ ಹಾಕಿಕೊಡಲಿದೆ. ಇದು ಭ್ರಷ್ಟಾಚಾರ ರಹಿತ ತೆರಿಗೆ ಪದ್ಧತಿಗೆ ನಾಂದಿ ಹಾಡಲಿದೆ. ಕಾನೂನು ಪರಿಭಾಷೆಯಲ್ಲಿ ಜಿಎಸ್ಟಿಯನ್ನು ಗೂಡ್ಸ್ ಮತ್ತು ಸರ್ವೀಸ್ ಟ್ಯಾಕ್ಸ್ – ಸರಕು ಮತ್ತು ಸೇವಾ ತೆರಿಗೆ ಎನ್ನಬಹುದು. ಆದರೆ ಜಿಎಸ್ಟಿ ಪ್ರಯೋಜನಗಳು ಸಕಾರಾತ್ಮಕವಾಗಿದ್ದು, ಅದನ್ನು ಭಾರತದ ಸಾಮಾನ್ಯ ಜನರಿಗಾಗಿ ಇರುವ “ಗುಡ್ ಅಂಡ್ ಸಿಂಪಲ್ ಟ್ಯಾಕ್ಸ್’’ ಅಂದರೆ ಒಳ್ಳೆಯ ಮತ್ತು ಸರಳ ತೆರಿಗೆ ಎನ್ನಬಹುದು. ಒಳ್ಳೆಯದು ಏಕೆಂದರೆ ಇದು ತೆರಿಗೆಯ ಹಲವು ಹಂತಗಳಿಂದ ಮುಕ್ತಿ ಕೊಡಿಸುತ್ತದೆ. ಸರಳ ಏಕಂದರೆ ಭಾರತದಾದ್ಯಂತ ಏಕರೂಪವಾಗಿ ಅದು ಅನುಷ್ಠಾನಗೊಳ್ಳುತ್ತಿದೆ. ಇನ್ನು ಮುಂದೆ “ಒಂದು ರಾಷ್ಟ್ರ ಒಂದು ತೆರಿಗೆ” ಇರಲಿದೆ, ಹೊಸ ತೆರಿಗೆ ವ್ಯವಸ್ಥೆಯನ್ನು ಎಲ್ಲ ರಾಜ್ಯಗಳಲ್ಲಿ ನಿಗದಿತ ಮಾನದಂಡದಲ್ಲಿ ಜಾರಿಯಾಗಲಿದೆ. ಸಂಘಟಿತ ರೂಪದಲ್ಲಿ ಇದನ್ನು ಮುಂದೆ ತೆಗೆದುಕೊಂಡು ಹೋಗಲಿದ್ದೇವೆ ಎಂಬ ಭರವಸೆ ನನಗಿದೆ.
ಇಂತಹ ಸ್ಮರಣೀಯ ಸಂದರ್ಭದಲ್ಲಿ ನಾನು ಗೌರವಾನ್ವಿತ ರಾಷ್ಟ್ರಪತಿಗಳ ಪಾತ್ರವನ್ನು ನೆನಪಿಸಿಕೊಳ್ಳುತ್ತೇನೆ ಅವರು ಬದ್ಧತೆಯಿಂದ ಈ ಯೋಜನೆಯನ್ನು ನಿರೂಪಿಸಿದ್ದರು. ಅವರು ತೆರಿಗೆ ಸುಧಾರಣೆಯ ಪ್ರತಿಯೊಂದು ಹಂತದ ವಿನ್ಯಾಸದಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಈ ಐತಿಹಾಸಿಕ ದಿನ ಸಾಕಾರವಾಗಲು ಅವರು ತಂಡಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಅವರ ಸ್ಫೂರ್ತಿ ಇಡೀ ಯಾತ್ರೆಯುದ್ದಕೂ ಪ್ರತಿಯೊಬ್ಬರಿಗೂ ಹುಮ್ಮಸ್ಸು ತಂದಿದೆ. ಅವರ ಮಾರ್ಗದರ್ಶನದಿಂದ ಮತ್ತು ಈ ಜಿಎಸ್ಟಿ ಜಾರಿ ಸಮಾರಂಭದಲ್ಲಿ ಅವರು ಭಾಗವಹಿಸಿರುವುದು ನಮಗೆ ಅತೀವ ಸಂತಸ ತಂದಿದೆ. ಹೊಸ ಶಕ್ತಿ ಮತ್ತು ಹುರುಪಿನಿಂದ ರಾಷ್ಟ್ರವನ್ನು ಪ್ರಬಲ ಆರ್ಥಿಕ ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿದೆ.
ಈ ಎಲ್ಲ ಭಾವನೆಗಳೊಂದಿಗೆ ನಾನು ಮತ್ತೊಮ್ಮೆ ಇದರಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಮತ್ತು ಗೌರವಾನ್ವಿತ ರಾಷ್ಟ್ರಪತಿಗಳನ್ನು ಇಲ್ಲಿಂದ ಮತ್ತೆ ಮುನ್ನಡೆಯಲು ನಮಗೆ ಮಾರ್ಗದರ್ಶನ ನೀಡಬೇಕೆಂದು ಕೋರುತ್ತೇನೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India's export performance in several key product categories showing notable success

Media Coverage

India's export performance in several key product categories showing notable success
NM on the go

Nm on the go

Always be the first to hear from the PM. Get the App Now!
...
Prime Minister greets valiant personnel of the Indian Navy on the Navy Day
December 04, 2024

Greeting the valiant personnel of the Indian Navy on the Navy Day, the Prime Minister, Shri Narendra Modi hailed them for their commitment which ensures the safety, security and prosperity of our nation.

Shri Modi in a post on X wrote:

“On Navy Day, we salute the valiant personnel of the Indian Navy who protect our seas with unmatched courage and dedication. Their commitment ensures the safety, security and prosperity of our nation. We also take great pride in India’s rich maritime history.”