ಭಾರತ ಮಹತ್ವಾಕಾಂಕ್ಷಿ ಮಿಷನ್ ವೊಂದರ ಕಡೆಗೆ ದಿಟ್ಟ ಹೆಜ್ಜೆಯನ್ನ ವಿಶ್ವಾಸದಿಂದ ಇಟ್ಟಿದೆ ಅನ್ನೋದನ್ನ ಹೆಮ್ಮೆಯಿಂದ ಹೇಳುತ್ತಿದ್ದೇವೆ . ಈ ಮಹತ್ವಾಕಾಂಕ್ಷಿ ಮಿಷನ್ ಅಥವಾ ಈ ಮಹತ್ವಾಕಾಕ್ಷಿ ಯೋಜನೆ ದೇಶದಲ್ಲಿರುವ ಹದಿನೆಂಟು ಸಾವಿರ ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯವನ್ನ ಕಲ್ಪಿಸುವುದಾಗಿದೆ. ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿ ಏಳು ದಶಕಗಳು ಸಂಧರೂ ಈ ಹದಿನೆಂಟು ಸಾವಿರ ಹಳ್ಳಿಗಳು ವಿದ್ಯುತ್ನ್ ಅನ್ನೋದನ್ನ ಸೌಲಭ್ಯ ರೂಪದಲ್ಲಿ ಪಡೆದಿರಲಿಲ್ಲ….ದೇಶದ ಸ್ವಾತ್ರಂತ್ಯೋತ್ಸವದ ದಿನದಂದು ದೇಶದ ಪ್ರಧಾನಮಂತ್ರಿ ಶ್ರೀಯತ ನರೇಂದ್ರ ಮೋದಿಯವರು ಒಂದು ಮಾತನ್ನ ಹೇಳಿದ್ದರು..”ದೇಶದಲ್ಲಿ ವಿಧ್ಯುತ್ ಶಕ್ತಿಯನ್ನ ಕಾಣದೇ ಬಾಕಿ ಉಳಿದಿರುವ ಹಳ್ಳಿಗಳಿಗೆ ಒಂದು ಸಾವಿರ ದಿನಗಳಗೊಳಗಾಗಿ ವಿದ್ಯುತ್ ಸೌಲಭ್ಯವನ್ನು ಕಲ್ಪಿಸುವುದಾಗಿ” ಘೋಷಿಸಿದ್ರುಮಾನ್ಯ ಪ್ರಧಾನ ಮಂತ್ರಿಯವರ ಈ ಘೋಷಣೆಯಂತೆ ದೇಶದಲ್ಲಿ ವಿದ್ಯುತ್ ಸೌಲಭ್ಯ ವಂಚಿತ ಗ್ರಾಮಗಳಲ್ಲಿ ವಿದ್ಯುತ್ತೀಕರಣ ಆಗುತ್ತಿದೆ ಮತ್ತು ಈ ಕೆಲಸ ಸಮೋರೋಪಾಧಿಯಲ್ಲಿ ನಡೆಯುತ್ತಿದೆ. ಅಲ್ಲದೇ ನಿಗಧಿತ ಕಾಲಾವಾಕಾಶದಲ್ಲಿ ಗುರಿ ತಲುಪುವ ಉತ್ಸಾಹ ಹಾಗೂ ನಂಬಲು ಸಾಧ್ಯವಾಗದಷ್ಟು ಮಟ್ಟಿಗೆ ಪಾರದರ್ಶಕತೆಯ ಅಡಿಯಲ್ಲಿ ಸಾಂಗವಾಗಿ ನಡೆಯುತ್ತಿದೆ.. ಈಗಾಗ್ಲೇ ವಿದ್ಯತ್ತೀಕರಣ ಕಂಡು, ಮನೆಗಳಲ್ಲಿ ಕರೆಂಟ್ ಸೌಲಭ್ಯಗಳನ್ನು ಪಡೆದಿರುವ ಹಳ್ಳಿಗಳು, ಗ್ರಾಮಗಳ ಸಂಪೂರ್ಣ ವಿವರ ಹಾಗೂ ಪರಿಪೂರ್ಣ ವಿವರ ಮೊಬೈಲ್ ಆಪ್ ಹಾಗೂ ವೆಬ್ ಸೈಟ್ ನ ಡ್ಯಾಶ್ ಬೋರ್ಡ್ ನಲ್ಲಿ ವಿಸ್ತೃತವಾಗಿ ಪಡೆಯಬಹುದು. ಈ ಸೌಲಭ್ಯವನ್ನ ಸಾರ್ವಜನಿಕರ ಪರಿವೀಕ್ಷಣೆಗಾಗಿಯೇ ಒದಗಿಸಲಾಗಿದೆ. ಇನ್ನೂ ಮೊಬೈಲ್ ಆಫ್ ಹಾಗೂ ವೆಬ್ ಸೈಟ್ ನ ಡ್ಯಾಶ್ ಬೋರ್ಡ್ಗಳಲ್ಲಿ ದೇಶದ ಯಾವ್ಯಾವ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕಗಳನ್ನ ಕಲ್ಪಿಸಲಾಗಿದೆ ಅನ್ನೋದ್ರ ಮಾಹಿತಿ ಸ್ಪಷ್ಟವಾಗಿ ಸಿಗಲಿದೆ.. ವಿಶೇಷವಾದ ಸಂಗತಿ ಅಂದರೇ ಈ ವಿದ್ಯತ್ ಸಂಪರ್ಕದ ಕಲ್ಪನೆ ಗ್ರಾಮೀಣ ಬದುಕಿನಲ್ಲಿ ವಾಸಿಸುತ್ತಿರುವ ಹಳ್ಳಿಗಳ ಜನರ ವಿಶೇಷವಾದ ಕನಸು ಹಾಗೂ ಮಹತ್ವಾಕಾಂಕ್ಷೆ ಮೊಬೈಲ್ ನ ಪರಿಪೂರ್ಣ ಬಳಕೆಯ ಮಿತಿಯ ಆಕಾಂಕ್ಷೆಯನ್ನು ಸ್ಪಷ್ಟವಾಗಿ ಹೊಂದಿದೆ..
From the ramparts of the Red Fort last year, I had called for the electrification of all remaining villages in 1000 days (18,452 villages).
— Narendra Modi (@narendramodi) February 11, 2016
Happy to share that Team India has done exceedingly well. Within about 6 months only (around 200 days), we have crossed the 5000 mark.
— Narendra Modi (@narendramodi) February 11, 2016
Already 5279 villages have been electrified. Excellent work has been done by the Power Ministry in Bihar, UP, Odisha, Assam & Jharkhand.
— Narendra Modi (@narendramodi) February 11, 2016
Power Ministry shares real time updates on rural electrification. Their dashboard is worth a look. https://t.co/5BoqVm7hJA @PiyushGoyal
— Narendra Modi (@narendramodi) February 11, 2016
ದೇಶದಲ್ಲಿ ಈ ಹಿಂದೇ ನಡೆದ ಘಟನೆಯೊಂದನ್ನ ಮರೆಯೋದು ನಿಜಕ್ಕೂ ನೆನಪಿನಿಂದ ಆಚೆ ಹಾಕುವುದು ಬಹಳ ಕಷ್ಟ.. ಅದು 2012 ರ ಜುಲೈನಲ್ಲಿ ದೇಶದಲ್ಲಿ ನಡೆದ ಘಟನೆ. ಆ ಮಾಸದಲ್ಲಿ ದೇಶದಲ್ಲಿ ಹಿಂದೆಂದೂ ಇತಿಹಾಸದ ಪುಟಗಳಲ್ಲಿ ಕಂಡು ಕೇಳರಿಯದಂತ ವಿದ್ಯುತ್ ಕ್ಷಾಮ ತಲೆದೋರಿತ್ತು .. ಸರಿಸುಮಾರು ಆ ತಿಂಗಳಲ್ಲಿ ಕಾಣಿಸಿದ್ದ ವಿದ್ಯುತ್ ಕ್ಷಾಮದಿಂದಾಗಿ ದೇಶದಲ್ಲಿ ಬರೋಬ್ಬರಿ ಸುಮಾರು ಆರವತ್ತೇರಡು ಕೋಟಿ ಪ್ರಜೆಗಳು ಕತ್ತಲಲ್ಲಿ ದಿನಕಳೆಯುವಂತಾಗಿತ್ತು.ದೇಶದ ಬಹುತೇಕ ಕಡೆಗಳಲ್ಲಿ ಕಗ್ಗತಲ್ಲು ಆವರಿಸಿತ್ತು. ಅಂದಿನ ಆವತ್ತಿನ ಸನ್ನಿವೇಶ ಯಾವ ಮಟ್ಟಿಗಿತ್ತು ಅಂದರೆ ಸೌಲಭ್ಯಗಳಿದ್ರೂ ವಿದ್ಯುತ್ ಉತ್ಪಾದನೆ ಸಾಧ್ಯವಾಗಿರಲಿಲ್ಲ. ಸುಮಾರು ಇಪ್ಪತ್ತಾನಾಲ್ಕು ಮೆಗಾವ್ಯಾಟ್ ಗೂ ಅಧಿಕ ಉತ್ಪಾಧನಾ ಸಾಮರ್ಥ್ಯದ ವಿದ್ಯುತ್ ಉತ್ಪಾದಕನ ಘಟಕಗಳು ಕೆಲಸವಿಲ್ಲದೇ ಐಡಲ್ ಆಗಿದ್ದವು…ಇದಕ್ಕೆ ಕಾರಣವಾಗಿದ್ದು, ಕಲ್ಲಿದ್ದಲ್ಲು ಹಾಗೂ ಹಾಗೂ ಗ್ಯಾಸ್ನಂತಃ ವಿದ್ಯುತ್ ಉತ್ಪಾದನಾ ವಾಹಕಗಳ ಬರಪೂರ ಕೊರತೆ.. ಈ ಸನ್ನಿವೇಶದ ಪರಿಣಾಮವಾಗಿ ಸಂಪೂರ್ಣ ವಿದ್ತುತ್ ವಲಯ ನಂಬಲಾಗದಂತಃ ತಳಮಟ್ಟದ ಸ್ಥಿತಿಯನ್ನ ತಲುಪಿತ್ತು.. ದೇಶದಲ್ಲಿ ಒಂದು ವಿದ್ಯುತ್ ಉತ್ಪಾಧನ ಸಾಮರ್ಥ್ಯದ ಹೊರತಾಗಿಯು ಹಾಗೂ ಸದ್ಬಳಕೆಯನ್ನ ಮಾಡಿಕೊಳ್ಳಲು ಸಾಧ್ಯವಾಗಂತ ಬೃಹತ್ ಮೊತ್ತದ ಬಂಡಾವಾಳ ಹೂಡಿಕೆಯ ಜೊತೆಗೆ ಘನ ಸರ್ಕಾರದ ವಿದ್ಯತ್ತೀಕರಣದ ಮಹತಾತ್ವಕಾಂಕ್ಷಿ ಯೋಜನೆಗಳು ವ್ಯರ್ಥವಾದಂತೆ ಸನ್ನಿವೇಶಕ್ಕೆ ಗುರಿಯಾಗಿತ್ತು.. ಮತ್ತೊಂದೆಡೆ ದೇಶದಲ್ಲಿರುವ ಅಪಾರ ಗ್ರಾಹಕರು ಸಂದರ್ಭವಲ್ಲದ ಸಂದರ್ಭದಲ್ಲಿ ಅನಿವಾರ್ಯತೆಯ ಸಮಯದಲ್ಲಿ ಪವರ್ ಕಟ್ ಸಮಸ್ಯೆಯನ್ನ ಎದುರಿಸುವ ಮೂಲಕ ಇನ್ನಿಲ್ಲದ ಸಮಸ್ಯೆಗೆ ಈಡಾಗಬೇಕಾಗಿತ್ತು
ಕಳೇದ ವರ್ಷದಲ್ಲಿ ದೇಶದಲ್ಲಿ ಯಾವಾಗ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ವಿದ್ಯುತ್ ಸಮಸ್ಯೆಯ ಗಂಭೀರತೆ ಯಾವಮಟ್ಟಿಗೆ ಇತ್ತು ಅನ್ನೋದನ್ನ ಹೇಳೋದಾದ್ರೆ, ದೇಶದ ಒಟ್ಟು ಮೂರನೇ ಏರಡಷ್ಟು ಕದ್ದಿದಲು ಆಧರಿತ ವಿದ್ಯುತ್ ಉತ್ಪಾಧನ ಘಟಕಗಳು ಕಲ್ಲಿದ್ದಲಿನ ಕೊರತೆಯನ್ನ ಎದುರಿಸುತ್ತಿದ್ದವು(ಕೇಂದ್ರ ವಿದ್ಯತ್ ನಿಗಮ ನೂರು ಕಲ್ಲಿದ್ದಲು ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಆರವತ್ತಾರು ಕಲ್ಲಿದ್ದಲು ಉತ್ಪಾದನಾ ಘಟಕಗಳು ಕಲ್ಲಿದ್ದಲಿನ ಕೊರತೆಯನ್ನ ಎದುರಿಸ್ತಿದ್ದವು ಎನ್ನಲಾಗಿದೆ) ಈ ಕಲ್ಲಿದ್ದಲು ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕೇವಲ ಏಳು ದಿನಗಳಿಗೂ ಸಾಕಾಗುವಷ್ಟು ಕಲ್ಲಿದ್ದಿಲಿನ ಸಂಗ್ರಹವಿರಲಿಲ್ಲ. ಇಂತಹ ವಿಷಮ ಸ್ಥಿತಿಯನ್ನ ದಿಟ್ಟವಾಗಿ ಎದುರಿಸಿಕೊಂಡು ಬಂಧ ಎನ್ಡಿಡಿಎ ಸರ್ಕಾರ ಪರಿಸ್ಥಿತಿಯನ್ನ ಸರಿಪಡಿಸುವಲ್ಲಿ ಯಶಸ್ವಿಯು ಆಯ್ತು. ಇದ್ರ ಫಲವಾಗಿ ದೇಶದಲ್ಲಿ ಯಾವುದೇ ಒಂದೇ ಒಂದು ವಿದ್ಯುತ್ ಉತ್ಪಾಧನ ಘಟಕವೂ ಕೂಡ ಕಲ್ಲಿದ್ದಲು ಪೂರೈಕೆಯ ಸಮಸ್ಯೆಯನ್ನ ಎದುರಿಸುತ್ತಿಲ್ಲ …
ವಿದ್ಯುತ್ ಪೂರೈಕೆ ನಿಟ್ಟಿನಲ್ಲಿ ಗಂಭೀರವಾಗಿ ಹಾಗೂ ದಿಟ್ಟ ಹೆಜ್ಜೆ ಇಡುವುದಷ್ಟೆ ಅಲ್ಲದೇ ಕಠಿಣ ಶ್ರಮವನ್ನ ಸರ್ಕಾರ ಹಾಕಿದೆ. ಇದ್ರ ಜೊತೆಜೊತೆಯಲ್ಲಿಯೇ ಕೇಂದ್ರ ಸರ್ಕಾರ ಕ್ಲೀನ್ ಎನರ್ಜಿಗೆ ಹೆಚ್ಚಿನ ಮತ್ತು ಬಹುಮುಖ್ಯ ಆದ್ಯತೆಯನ್ನ ನೀಡುತ್ತಿದೆ ..ಮಾನ್ಯ ಕೇಂದ್ರ ಸರ್ಕಾರ ಕ್ಲೀನ್ ಎನರ್ಜಿಗೆ ಆಧ್ಯತೆ ನೀಡುವ ಸಲುವಾಗಿ ಬಹುಮುಖ್ಯವಾದ ಮಹತಾತ್ವಾಕಾಂಕ್ಷಿ ಸಾಧನೆಯ ಗುರಿಯೊಂಧನ್ನ ಸಹ ಹಾಕಿಕೊಂಡಿದೆ.. ನೂರ ಎಪ್ಪತ್ತೈದು ಗಿಗಾವ್ಯಾಟ್ನಷ್ಟು ವಿದ್ಯುತ್ತ್ ಅನ್ನು ನವೀಕರಿಸಬಹುದಾದ ಮೂಲಗಳಿಂದ ತಯಾರಿಸುವ ಗುರಿಯನ್ನ ಹೊಂದಲಾಗಿದೆ..ಇದ್ರಲ್ಲಿ ಸರಿಸುಮಾರು ನೂರುಗಿಗಾವ್ಯಾಟ್ನಷ್ಟು ವಿದ್ಯುತ್ ಶಕ್ತಿಯನ್ನ ಸೋಲಾರ್ ಎನರ್ಜಿಯ ಮೂಲಕ ತಯಾರಿಸುವ ಗುರಿಯನ್ನ ಕೇಂದ್ರ ಸರ್ಕಾರ ಹೊಂದಿದೆ..
ದೇಶದಲ್ಲಿ ಅಸ್ತಿತ್ವದಲ್ಲಿರುವ ಹೊಸ ಕೇಂದ್ರ ಸರ್ಕಾರ ವಿದ್ಯುತ್ತೀಕರಣದ ಕ್ಷೇತ್ರದಲ್ಲಿ ಸಮಗ್ರ ಹಾಗೂ ಸುದೀರ್ಘವಾದ ಸಂಘಟನಾತ್ಕ ಬೆಳವಣಿಗೆಯ ಸಂಬಂಧ ಅತಿಹೆಚ್ಚು ಹಾಗೂ ಬಹುಮಖ್ಯವಾಗಿ ಗಮನವನ್ನ ಕೇಂದ್ರಿಕರಿಸುತ್ತಿದೆ. ಅಲ್ಲದೇ ಈ ವಿದ್ಯುತ್ ಶಕ್ತಿಯ ಕ್ಷೇತ್ರದಲ್ಲಿ ದೇಶದ ಜನತೆಗೆ ದಿನದ ಇಪ್ಪತ್ತಾನಾಲ್ಕು ಗಂಟೆಗಳಲ್ಲೂ ಅಗತ್ಯವಾದ ವಿದ್ಯುತ್ ಸೌಲಭ್ಯವನ್ನ ಕಲ್ಪಿಸುವ ಗುರಿಯನ್ನ ಸಾಧಿಸುವ ಇಚ್ಚೇಯನ್ನ ಹೊಂದಿದೆ. ಇದಕ್ಕೆ ಪೂರಕವಾಗಿ ದೇಶದ ವಿದ್ಯುತ್ ಶಕ್ತಿಯ ಕ್ಷೇತ್ರ ವಿಭಿನ್ನ ಹಾಗೂ ಸಾಧನೆಯುತವಾದ ಅಭಿವೃದ್ಧಿ ದತ್ತಾಂಶಗಳಿಂದ ಕೇಂದ್ರ ಸರ್ಕಾರದ ಇಚ್ಚೇಯನ್ನ ಸಮರ್ಥಿಸುತ್ತಿದೆ.. ವಿದ್ಯುತ್ ಶಕ್ತಿಯ ಕ್ಷೇತ್ರದಲ್ಲಿ ಮುಖ್ಯವಾಗಿ ಕೈಗಾರಿಕಾ ಕ್ಷೇತ್ರದ ಅಂಕಿಸಂಖ್ಯೆಯ ಆದಾರವಾಗಿಟ್ಟುಕೊಂಡು ಹೇಳುವುದಾದ್ರೆ ವಿದ್ಯತ್ ಶಕ್ತಿಯ ಉತ್ಪಾದನೆ ಶೇಕಡ ಒಂಬತ್ತರಷ್ಟು ಕಳೆದ ಅಕ್ಟೋಬರ್ನಲ್ಲಿ ಹೆಚ್ಚಳವಾಗಿರೋದು ಸ್ಪಷ್ಟವಾಗಿ ಕಂಢು ಬಂದಿದೆ. ಇದಕ್ಕೆ ಹೊಂದಿಕೊಂಡಂಥೆ ಕೋಲ್ ಇಂಡಿಯಾ ಲಿಮಿಟೆಡ್ನ ವಿದ್ಯುತ್ ಶಕ್ತಿಯ ಪೂರೈಕೆಯ ಸಾಮರ್ಥ್ಯ ಶೇಕಡಾ ಒಂಬತ್ತರಷ್ಟು ಕಳೆದ ಎಪ್ರಿಲ್ ನನಿಂದ ನವೆಂಬರ್ ತಿಂಗಳ ಅವಧಿಯಲ್ಲಿ ಗುರಿಸಾಧಿಸಿದೆ..ಇನ್ನೂ 2014 ಹಾಗೂ 2015 ನೇ ವಾರ್ಷಿಕ ಸಾಲಿನಲ್ಲಿ ಕಲ್ಲಿದ್ದಲು ಪ್ರಾಧಿಕಾರ ದೇಶದಲ್ಲಿ ಕಲ್ಲಿದ್ದಲುನನಿ ಉತ್ಪಾದನೆಯನ್ನ ನಿರೀಕ್ಷೆಗೂ ಮೀರಿ ಹೆಚ್ಚಿಸಿದೆ. ಈ ಸಾಲಿನ ಕಲ್ಲಿದ್ದಲ ಉತ್ಪಾಧನೆ ಕಳೆದ ನಾಲ್ಕುವರ್ಷಗಳ ಒಟ್ಟು ಉತ್ಪಾಧನೆಗಿಂತಲೂ ಹೆಚ್ಚಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ..ಕಕಳೆದ ನವೆಂಬರ್ ಮಾಸಾಂತ್ಯಕ್ಕೆ ಶೇಕಡ ನಲವತ್ತೊಬ್ಬರಷ್ಟು ಕಲ್ಲಿದ್ದಲಿನ ಆಮದು ಗಣನೀಯವಾಗಿ ಇಳಿದಿರುವುದರ ಸಾಧನೆ ಸಾಧ್ಯವಾಗಿರುವ ಜೊತೆಯಲ್ಲಿ ಕಳೆದ ವರ್ಷ ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾಧನಾ ಘಟಕಗಳ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯ 2014 ಹಾಗೂ 2015 ನೇ ಸಾಲಿನಲ್ಲಿ ಶೇಡಕೆ 12.12 ರಷ್ಟು ಹೆಚ್ಚಳಗೊಂಡಿದೆ.. ಇದು ಸಾರ್ವಕಾಲಿಕ ಹೆಚ್ಚಳ ಅನ್ನೋದ್ರಲ್ಲಿ ಯಾವ ಪ್ರಶ್ನೆಯು ಉಳಿದಿಲ್ಲ.. ಇನ್ನೂರ ಹದಿನಾಲ್ಕು ಕಲ್ಲಿದ್ದಲು ಘಟಕಗಳನ್ನ ಮುಚ್ಚುವ ಸಂಬಂಧ ವಿವಾದ ಸಂಬಂಧ ದೇಶದ ಗೌರವಾನ್ವಿತ ಸುಪ್ರೀಂಕೋರ್ಟ್ ಕೈಗೊಂಡ ನಿರ್ಧಾರ ದೇಶದಲ್ಲಿ ಕಲ್ಲಿದ್ದಲು ಪೂರೈಕೆಯ ಸಂಬಂಧ ಇ ಆಕ್ಷನ್ಗಳನ್ನ ವಿದ್ಯುತ್ತವಾಗಿ ಜಾರಿಗೊಳಿಸುವ ಅತ್ಯನ್ನತ ಅವಕಾಶವಾಗಿ ಮಾರ್ಪಾಡುಗೊಂಡಿದೆ.. ಅಲ್ಲದೇ ಇದ್ರ ಮೂಲಕ ವಿಶೇಷವಾಗಿ ಪೂರ್ವ ಭಾರತದ ಅಭಿವೃದ್ಧಿ ಕಾಣದ ರಾಜ್ಯಗಳಿಗೆ ಇದ್ರಿಂದಗಾಗಿ ಅತ್ಯುನ್ನತ ಸೌಲಭ್ಯಗಳನ್ನ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಉಪಯೋಗ ಕ್ಕೆ ಬಂದಿವೆ..
ಈ ಎಲ್ಲಾ ಸಾಧನೆಗಳ ಜೊತೆಯಲ್ಲಿ ವಿದ್ಯುತ್ ಉತ್ಪಾದನೆಯ ಒಟ್ಟಾರೆ ಸಾಮರ್ಥ್ಯದ ಹೆಚ್ಚಳವೂ ಆಗಿದೆ. ಇದಕ್ಕಾಗಿ ಕೈಗೊಂಡ ಪ್ರಯತ್ನಗಳ ಫಲವಾಗಿ ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿ ಒಟ್ಟಾರೆ ಇಪ್ಪೆತ್ತರಡು ಸಾವಿರದ ಐನೂರ ಆರವತ್ತಾರು ಮೆಗಾವ್ಯಾಟ್ ವಿದ್ಯುತ್ ಪೂರೈಕೆಯನ್ನ ಹೆಚ್ಚುವರಿಯಾಗಿ ವಿದ್ಯುತ್ ಉತ್ಪಾಧನಾ ಸಾಮರ್ಥ್ಯಕ್ಕೆ ಸೇರಿಸಲಾಗಿದೆ. ಇದು ಕೂಡ ಸಾರ್ವಕಾಲಿಕ ಗುರಿ ಸಾಧನೆಯಾಗಿದ್ದು, ಇದನ್ನ ಸಾಧಿಸಲಾಗಿದೆ..ಇದರ ಪರಿಣಾಮವಾಗಿ ವಿದ್ಯುತ್ ಕೊರತೆಯ ಒಟ್ಟಾರೆ ಅಂಶ ಗಣನೀಯ ಮಟ್ಟದಲ್ಲಿ ಕುಸಿಸಿದೆ. 2008 ಹಾಗೂ 2009 ನೇ ಸಾಲಿನಲ್ಲಿ ಶೇಕಡಾ 11.9 ರಷ್ಟಿದ್ದ ಒಟ್ಟಾರೆ ವಿದ್ಯುತ್ ಕೊರೆತೆ ಶೇಕಡಾ 3.2 ರಷ್ಟಕ್ಕೆ ಗಣನೀಯವಾಗಿ ಇಳಿದಿದೆ.. ,ಮತ್ತು ಈ ಇಳಿಕೆಯ ಪ್ರಮಾಣ ಇದುವರೆಗಿನ ಅತಿ ಕಡಿಮೆ ಪ್ರಮಾಣವಾಗಿದೆ ಅನ್ನೋದು ಇಲ್ಲಿ ಗಮನಾರ್ಹ…ಇನ್ನೂ ಇದರ ಜೊತೆಯಲ್ಲಿಯೇ ಕಳೆದ ವರ್ಷದ ಸಾಲಿನಲ್ಲಿ ವಿದ್ಯುತ್ ಕೊರತೆಯ ಮಟ್ಟದಲ್ಲೀಯು ಬಹಳಷ್ಟು ಇಳಿಕೆಯಾಗಿದೆ.. 2008 ಹಾಗೂ 2009 ರ ಸಾಲಿನಲ್ಲಿ ಶೇಕಡಾ 11.09 ರಷ್ಟಿದ್ದ ವಿದ್ಯುತ್ ಕೊರತೆಯ ಪ್ರಮಾಣ ಶಕಡಾ 2.3 ರಷ್ಟಕ್ಕೆ ಇಳಿದಿರೋದು ಗಮನಾರ್ಹ..ಈ ಪ್ರಮಾಣ ಭಾರತ ದೇಶದ ಇತಿಹಾಸದಲ್ಲಿಯೇ ಅತಿಕಡಿಮೆ ಯ ಪ್ರಮಾಣ ಎಂದು ಅಂಕಿಅಂಶಗಳಲ್ಲಿ ಸ್ಪಷ್ಟವಾಗಿದೆ.. .
ವಿದ್ಯುತ್ ಪ್ರಸರಣ ಕ್ಷೇತ್ರ ಈ ಮೊದಲು ಹಲವು ಸಮಸ್ಯೆಗಳನ್ನ ಕಂಡಿತ್ತು. ಇದರಲ್ಲಿ ಬಹುಮುಖ್ಯವಾಗಿ ವಿದ್ಯುತ್ ಪೂರೈಕೆಯ ರಾಜ್ಯಗಳಿಂದ ವಿದ್ತುತ್ ಕೊರತೆ ಹೊಂದಿರುವ ರಾಜ್ಯಗಳಿಗೆ ವಿದ್ಯುತ್ನನ್ನ ಪೂರೈಸುವುದು ಜಠಿಲವಾದ ಕಾರ್ಯವಾಗಿತ್ತು..ಇದ್ರಿಂದ ಸಾಕಷ್ಟು ಸವಾಲುಗಳು ಎದುರಾಗಿದ್ದವು.. ಈ ಸಮಸ್ಯೆಗಳನ್ನ ನಿವಾರಿಸುವ ಸಂಬಂಧ ಕೇಂದ್ರ ಸರ್ಕಾರ ವಿಶಿಷ್ಟ ಶ್ರಮವನ್ನ ಹಾಕಿದೆ.. ಕೇಂದ್ರ ಸರ್ಕಾರದ ಶ್ರಮದ ಫಲವಾಗಿ ಪ್ರಸ್ತುತ ದೇಶದಲ್ಲಿರುವ ಗ್ರಿಡ್ಗಳನ್ನ ಒಂದೇ ಪಿಲ್ಲರ್ನ ಅಡಿಯಲ್ಲಿ ವೀಲಿನವಾಗಿದೆ.. ಇದೀಗೆ ಪ್ರಸ್ತುತ ರುವ ಗ್ರಿಡ್ ಒಂದೇ ದೇಶ, ಒಂದೇ ಗ್ರಿಡ್ ಹಾಗೂ ಒಂದೇ ಪ್ರೀಕ್ವೇನ್ಸಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.. ಇದ್ರ ಪರಿಣಾಮವಾಗಿ ಸದ್ಯ ದೇಶದಲ್ಲಿ ಲಭ್ಯವಿರುವ ಪ್ರಸರಣದ ಸಾಮರ್ಥ್ಯ ಕಳೇದ 2013 ಹಾಗೂ 2014 ನೇ ಸಾಲಿನಲ್ಲಿದ್ದ ಮೂರು ಸಾವಿರದ ನಾನೂರ ಐವತ್ತು ಮೆಗಾವ್ಯಾಟ್ಗಿನಿಂದ ಐದು ಸಾವಿರದ ಒಂಭೈನೂರು ಮೆಗಾವ್ಯಾಟ್ಗೆಗೆ ಗಣೀನೀಯವಾಗಿ ಏರಿಕೆ ಕಂಡಿದೆ. ಕಳೆದ ತಿಂಗಳಲ್ಲಿ ಸಾಧಿಸಲಾಗಿರುವ ಈ ಸಾಧನೆಯ ಶೇಕಡಾವಾರು ಶೇಕಡಾ 71 ರಷ್ಟಿದೆ……
ಇನ್ನು ಈ ಸಂಬಂಧ ಮತ್ತೊಂದು ಹೆಜ್ಜೆಯನ್ನ ಕೇಂದ್ರ ಸರ್ಕಾರ ಇಟ್ಟಿದ್ದು, ವಿದ್ಯುತ್ ಅವಲಂಭಿತ ಕೇತ್ರದಲ್ಲಿ ದುರ್ಬಲ ವಿಭಾಗಳನ್ನ ಗುರುತಿಸುವ ಸಲುವಾಗಿಯೇ ಕೇಂದ್ರ ಸರ್ಕಾರದ ಉಜ್ವಲ್ ಡಿಸ್ಕೋಮ್ ಖಾತರಿ ಯೋಜನೆಯನ್ನ ಜಾರಿಗೆ ತಂದಿದೆ. (ಉದಯ್( ಉಜ್ವಲ್ ಡಿಸ್ಕೋಮ್ ಆಶ್ಯುರೆನ್ಸ್ ಯೋಜನಾ(Ujwal DISCOM Assurance Yojana) ಈ ಉನ್ನತ ಯೋಜನೆ ಈ ಹಿಂದಿನ ಹಾಗಾ ಪ್ರಸ್ತುತ ವರ್ತಮಾನದ ಮತ್ತು ಭವಿಷ್ಯದಲ್ಲಿ ಸಂಭವಿಸಬಹುದಾದ ವಿದ್ಯುತ್ ಕ್ಷೇತ್ರದ ಸಮಸ್ಯೆಗಳನ್ನ ಅರ್ಥಪೂರ್ಣವಾಗಿ ನಿಭಾಯಿಸಲಿದೆ ಎನ್ನಲಾಗಿದೆ..ಉದಯ್ ಅನ್ನು ದೇಶದ ತಳಮಟ್ಟದ ಪ್ರಸ್ತಾವನೆಯ ಮೂಲಕವೇ ಅಭಿವೃದ್ಧಿ ಪಡಿಸಲಾಗಿದೆ. ಅಷ್ಟೆಅಲ್ಲದೇ ಇದ್ರ ರೂಪುರೇಷಗಳನ್ನ ಹಾಗೂ ವ್ಯವಸ್ತೆಗಳನ್ನರಾಜ್ಯಗಳ ಉನ್ನತ ಮಟ್ಟದ ಅಧಿಕಾರಯುತ ಹಂತದಲ್ಲಿ ನಿರ್ಮಿಸಲಾಗಿದೆ.( ಉದಾಹರಣೆಗೆ ಮುಖ್ಯಮಂತ್ರಿ, ಸರ್ಕಾರದ ಮುಖ್ಯಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ ಹಾಗೂ ಡಿಸ್ಕೋಮ್ ಎಂಡಿಯನ್ನ ಈ ಉದಯ್ ಯೋಜನೆಯಲ್ಲಿ ಭಾಗಿಯಾಗಿರುತ್ತಾರೆ..)ಇವರಷ್ಟೆ ಅಲ್ಲದೇ ಬ್ಯಾಂಕ್ ಅಧಿಕಾರಿಗಳು, ರೆಗುಲೇಟರ್ಸ್ಗುಗಳು ಹಾಗು ಮತ್ತಿತರು ಈ ಯೋಜನೆಯ ಭಾಗವಾಗಿರುತ್ತಾರೆ.. ಈ ಸಂಬಂಧ ಡಿಸ್ಕೋಮ್ನ ನ ಸಭೆಯಲ್ಲಿ ಇವೆರೆಲ್ಲಾ ಭಾಗಿಯಾಗಿ ಒಟ್ಟಾರೆ ಡಿಸ್ಕೋಮ್ನ ಅಭಿವೃದ್ಧಿ ಹಾಗೂ ಬೆಳವಣಿಗೆ ದರಗಳನ್ನ ಪರಿಶೀಲಿಸುತ್ತಾರೆ. ಮತ್ತು ಈ ಸಂಬಂಧ ಅಗತ್ಯ ಹಾಗೂ ಅನಿವಾರ್ಯ ಕ್ರಮಗಳನ್ನು ಕೈಗೊಳ್ಳುತ್ತಾರೆ..ಇವೆಲ್ಲದರ ಜೊತೆಯಲ್ಲಿ ವಿದ್ಯುತ್ ಶಕ್ತಿಯ ಉತ್ಪಾದನೆಯಲ್ಲಿ ಆಗ್ತಿರುವ ಉತ್ಪಾಧನ ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದ್ರ ಪರಿಣಾಮವಾಗಿ ದೇಶದ ಎಲ್ಲಾ ಡಿಸ್ಕೋಮ್ಗಳ ಮುಂಬರುವ 2018 ಹಾಗೂ 2019 ನೇ ಸಾಲಿನಲ್ಲಿ ಆರ್ಥಿಕವಾಗಿ ಲಾಭದತ್ತ ಹೆಜೆ ಇಡಲಿದೆ ಅಂತಾ ಭರವಸೆಯನ್ನ ಕೇಂದ್ರ ಸರ್ಕಾರ ಹೊಂದಿಎ. ಉದಯ್ ಯೋಜನೆಯ ಮೂಲಕ ಡಿಸ್ಕೋಮ್ನಗಳ ವಿದ್ಯುತ್ ಉತ್ಪಾದನಾ ವೆಚ್ಚವನ್ನುತಗ್ಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗ್ತಿದ್ದು ಈ ಸಂಬಂಧ ಡಿಸ್ಕೋಮ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಉದಯ್ ಯೋಜನೆ ನೀಡಲಿದೆ. ಮತ್ತ ಸಂಯೋಜಿತ ಹಾಗೂ ಸಹಯೋಗಯುತವಾದ ಪ್ರಸ್ತಾವನೆ ಮೂಲಕ ಉದಯ್ ಯೋಜನೆ ಡಿಸ್ಕೋಮ್ಗಳ ದಕ್ಷತೆಯನ್ನ ಅಭಿವೃದ್ಧಿ ಪಡಿಸಲಿದೆ. ಮತ್ತಷ್ಟೆ ಅಲ್ಲದೇ ಇದ್ರ ಜೊತೆಯಲ್ಲಿ ಡಿಸ್ಕೋಮ್ಗಳ ಉತ್ಪಾದನಾ ಸಾಮರ್ಥ್ಯವನ್ನು ಗಣನೀಯವಾಗಿ ತಗ್ಗಿಸಲಿದೆ. ಹಾಗೂ ಇವೆಲ್ಲರದ ಜೊತೆಯಲ್ಲಿ ಉದಯ್ ಯೋಜನೆ ಮತ್ತು ವಿದ್ಯುತ್ ಉತ್ಪಾದನ ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಈ ಹಿಂದೇ ಕೈಗೊಳ್ಳಲಾಗಿರುವ ಕ್ರಮಕ್ಕೂ ಹಾಗೂ ಉದಯ್ ನ ನಿರ್ಧಾರಿತ ಕ್ರಮಗಳಿಂದ ವಿದ್ಯುತ್ ಕ್ಷೇತ್ರದಲ್ಲಿ ಆಗಿರುವ ಪುನರುಜ್ಜಿವನಕ್ಕೆ ಇರುವ ವ್ಯತ್ಯಾಸಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ.
ಇನ್ನು ವಿದ್ಯುತ್ ಕ್ಷೇತ್ರದಲ್ಲಿ ವಿದ್ಯುತ್ ಶಕ್ತಿಯ ಧಕ್ಷತೆ ಹೆಚ್ಚಳದಲ್ಲಿ ಡೈನಾಮಿಕ್ ಬೆಳವಣಿಗೆ ಆಗಿದೆ ಅನ್ನೋದು ಗಮನಾರ್ಹವಾಗಿದೆ. ವಿದ್ಯುತ್ ಉಳಿಸುವ ನಿಟ್ಟಿನಲ್ಲಿ ಎಲ್ಇಡಿ ಬಲ್ಬ್ಗಳ ಬೆಲೆಯಲ್ಲಿ ಶೇಖಡಾ ಎಪ್ಪತ್ತೈದರಷ್ಟು ರಿಯಾಯಿತಿಯನ್ನ ನೀಡಲಾಗಿದೆ. ಇದು ವಿದ್ಯುತ್ ಶಕ್ತಿಯ ದಕ್ಷತೆಯನ್ನಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ. ಅಲ್ಲದೇ ದೇಶದಲ್ಲಿ ಒಂದು ವರ್ಷಕ್ಕೂ ಮೀರದ ಒಟ್ಟಾರ ಅವಧಿಯಲ್ಲಿ ಒಟ್ಟಾರೆ ಸುಮಾರು ನಾಲ್ಕು ಕೋಟಿಗೂ ಅಧಿಕ ಎಲ್ಇಡಿ ಬಲ್ಬ್ಗಳನ್ನ ವಿತರಿಸಲಾಗಿದೆ. ದೇಶದಲ್ಲಿರುವ ಪ್ರತಿಯೊಂದು ಬಲ್ಬ್ಗಗಳು ಕೂಡ ಎಲ್ಇಡಿ ಬಲ್ಬ್ಗಳು ಆಗಿರಬೇಕು ಅನ್ನುವ ಮಹಾತ್ವಾಕಾಂಕ್ಷಿ ಗುರಿಸಾಧನೆಯನ್ನ ಕೇಂಧ್ರ ಸರ್ಕಾರ ಹೊಂದಿದ್ದು ಮತ್ತಿ ಈ ಗುರಿಸಾಧನೆಯ ಸಾಧನೆಯ ಹಂತದಲ್ಲಿ ಸಾಗುತ್ತಿದೆ. ಈ ಸಂಬಂಧ ಒಟ್ಟು ಎಪ್ಪತ್ತೇಳು ಕೋಟಿಎಲ್ ಇಡಿ ಬಲ್ಬ್ಗಳನ್ನು ಮುಂದಿನ ಎರಡು ವರ್ಷದಲ್ಲಿ ಅಂದ್ರೆ, 2018 ರ ಆರ್ಥಿಕ ಸಾಲಿನ ಅವಧಿಯಲ್ಲಿ ಪೂರ್ಣಗೊಳಿಸುವ ಗುರಿಯನ್ನ ಕೇಂದ್ರ ಸರ್ಕಾರ ಹೊಂದಿದೆ.. ಗೃಹಬಳಕೆ ಹಾಗೂ ಬೀದಿದೀಪಗಳಲ್ಲಿ ಎಲ್ಇಡಿ ಬಲ್ಬ್ಗಳನ್ನ ಅಳವಡಿಸುವ ಯೋಜನೆ ದೇಶದಲ್ಲಿ ಪ್ರತಿದಿನ ಅಗತ್ಯವಿರುವ ಬೇಡಿಕೆಯಾದ ಪೀಕ್ ಲೋಡ್ ಬೇಡಿಕೆಯನ್ನ ಸುಮಾರು ಇಪ್ಪತ್ತೇರಡು ಗಿಗಾವ್ಯಾಟ್ನನಷ್ಟು ತಗ್ಗಿಸಲಿದೆ ಎಂದು ನಂಬಲಾಗಿದೆ. ಇನ್ನೂ ಇದ್ರ ಜೊತೆಯಲ್ಲಿ ಒಟ್ಟು ವಿದ್ಯತ್ ತಯಾರಿಕೆ ಕ್ಷೇತ್ರದಲ್ಲಿ ಒಟ್ಟು ಹನ್ನೊಂಧು ಸಾವಿರದ ನಾನೂರು ಕೋಟಿ ವಿದ್ಯುತ್ ಯುನಿಟ್ಗಳು ವಾರ್ಷಿಕವಾಗಿ ಬರೋಬ್ಬರಿ 8.5 ಕೋಟಿ ಟನ್ನಷ್ಟು ಇಂಗಾಲ ಡೈ ಆಕ್ಸೈಡ್ ನ್ನು ಹೊರಹಾಕುತ್ತಿದೆ.. ಎಲ್ಇಡಿ ಬಲ್ಬ್ ಯೋಜನೆಯಿಂದಾಗಿ ಈ 8.5 ಕೋಟಿ ಟನ್ ಇಂಗಾಲದ ಡೈ ಆಕ್ಸೈಡ್ ತ್ಯಾಜ್ಯ ವಾತಾವರಣ ಪ್ರತಿವರ್ಷ ವಾತಾವರಣ ಸೇರುವುದು ತಪ್ಪಲಿದೆ.. ಇದರ ಜೊತಗೆ ಇಪ್ಪತ್ತೆರಡು ಗಿಗಾವೈಟ್ ಸಾಮರ್ಥ್ವನ್ನ ಹೆಚ್ಚಿಸುವ ಗುರಿ ಈ ವಿದ್ಯುತ್ ಕ್ಷೇತ್ರ ದಲ್ಲಿ ಸ್ಮರಣೀಯವಾದ ಸಾಧನೆ ಅನ್ನೋ ಹೆಗ್ಗಳಿಗೆಕೆ ಪ್ರಾತ್ರವಾಗುವ ಎಲ್ಲಾ ವಿಶ್ವಾಸಗಳನ್ನು ಹೊಂದಿದೆ. ಆದ್ರೆ ಇದು ಪರಿಸರವನ್ನ ಸಂರಕ್ಷಿಸುವ ಸಲುವಾಗಿ ಕೈಗೊಳ್ಳಲಾಗ್ತಿರುವ ಕ್ರಮ ಹಾಗೂ ಹಾಕಲಾಗ್ತಿರುವ ಅನಗತ್ಯ ಬಂಡವಾಳವನ್ನ ತಪ್ಪಿಸುವಂತ ವಿಭಿನ್ನ ದೃಷ್ಟಿಕೋನವನ್ನ ಇದು ಗೌರವಿಸತ್ತದೆ