ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿಯು (ಪಿಎನ್ ಜಿಆರ್ಬಿ) ನೈಸರ್ಗಿಕ ಅನಿಲ ಕ್ಷೇತ್ರದಲ್ಲಿ ಬಹು ನಿರೀಕ್ಷಿತ ಸುಧಾರಣೆ ಎನಿಸಿದ ಏಕೀಕೃತ ಸುಂಕ ಪದ್ಧತಿ ಜಾರಿಯನ್ನು ಪರಿಚಯಿಸಿದೆ.
ಇಂಧನ ಹಾಗೂ ನೈಸರ್ಗಿಕ ಅನಿಲ ಕ್ಷೇತ್ರದಲ್ಲಿ ಇದೊಂದು ಮಹತ್ವದ ಸುಧಾರಣೆ ಎನಿಸಿದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದ್ದಾರೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ಈ ಸಂಬಂದ ಟ್ವೀಟ್ ಮಾಡಿದ್ದು, ದೇಶದ ಎಲ್ಲ ವಲಯಗಳ ಆರ್ಥಿಕ ಅಭಿವೃದ್ಧಿ ಉದ್ದೇಶದಿಂದ ಪಿಎನ್ ಜಿಆರ್ಬಿ ನೈಸರ್ಗಿಕ ಅನಿಲ ವಲಯದಲ್ಲಿ ಬಹು ನಿರೀಕ್ಷಿತ ಏಕೀಕೃತ ಸುಂಕ ವ್ಯವಸ್ಥೆ ಜಾರಿಯನ್ನು ಪರಿಚಯಿಸಲಾಗುತ್ತಿದೆ ಎಂದಿದ್ದಾರೆ.
ಹಾಗೆಯೇ, ಸುಧಾರಿತ ಸುಂಕ ವ್ಯವಸ್ಥೆಯು 'ಒಂದು ರಾಷ್ಟ್ರ ಒಂದು ಗ್ರಿಡ್, ಒಂದು ಸುಂಕ' ಮಾದರಿಯನ್ನು ಜಾರಿಗೊಳಿಸುವ ಗುರಿ ಸಾಧನೆಗೆ ನೆರವಾಗಲಿದೆ. ಜತೆಗೆ ದೂರದ ಪ್ರದೇಶಗಳಲ್ಲಿನ ಅನಿಲ ಮಾರುಕಟ್ಟೆಗಳನ್ನು ಉತ್ತೇಜಿಸಲಿದೆ ಎಂಬುದಾಗಿಯೂ ಶ್ರೀ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಕೇಂದ್ರ ಸಚಿವರ ಟ್ವೀಟ್ ಗೆ ಟ್ವೀಟ್ ಮೂಲಕವೇ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿಗಳು, "ಇಂಧನ ಹಾಗೂ ನೈಸರ್ಗಿಕ ಅನಿಲ ವಲಯದಲ್ಲಿ ಇದೊಂದು ಗಮನಾರ್ಹ ಸುಧಾರಣೆ," ಎಂದಿದ್ದಾರೆ.
Noteworthy reform in the energy and natural gas sector. https://t.co/PqFwNg5tdX
— Narendra Modi (@narendramodi) March 31, 2023