ಸಂಘರ್ಷ ತಪ್ಪಿಸುವ ಮತ್ತು ಪರಿಸರ ಪ್ರಜ್ಞೆ ಕುರಿತ ಜಾಗತಿಕ ಉಪಕ್ರಮ "ಸಂವಾದ್"ನ ಎರಡನೇ ಆವೃತ್ತಿಯನ್ನು ಯಾಂಗೊನ್ ನಲ್ಲಿ ಇಂದು ಮತ್ತು ನಾಳೆ ಆಯೋಜಿಸಲಾಗಿದೆ.
ವಿವಿಧ ಧರ್ಮ ಮತ್ತು ಸಂಪ್ರದಾಯಗಳನ್ನು ಪ್ರತಿನಿಧಿಸುವ ಈ ವಿಶಿಷ್ಠ ಸಮಾವೇಶದ ಪ್ರಥಮ ಆವೃತ್ತಿಯ ಆತಿಥ್ಯವನ್ನು ನವದೆಹಲಿಯಲ್ಲಿ ವಿವೇಕಾನಂದ ಕೇಂದ್ರ 2015ರ ಸೆಪ್ಟೆಂಬರ್ ನಲ್ಲಿ ವಹಿಸಿತ್ತು, ಇದನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಭಾಷಣ ಮಾಡಿದ್ದರು. ಸಂವಾದ್ ನ ಎರಡನೇ ಆವೃತ್ತಿಗೆ ನೀಡಿರುವ ವಿಡಿಯೋ ಸಂದೇಶದಲ್ಲಿ ಪ್ರಧಾನಮಂತ್ರಿಯವರು ವಿಶ್ವಾದ್ಯಂತ ಇರುವ ಸಮಾಜಗಳು ಇಂದು ಹಲವು ಪ್ರಶ್ನೆಗಳನ್ನು ಎದುರಿಸುತ್ತಿವೆ, ಅವುಗಳೆಂದರೆ:
ಸಂಘರ್ಷವನ್ನು ಕಡಿಮೆ ಮಾಡುವುದು ಹೇಗೆ?
ಹವಾಮಾನ ಬದಲಾವಣೆಯಂಥ ಜಾಗತಿಕ ಸವಾಲುಗಳನ್ನು ಎದುರಿಸುವುದು ಹೇಗೆ?
ಶಾಂತಿ ಮತ್ತು ಸೌಹಾರ್ದತೆಯೊಂದಿಗೆ ಬಾಳುವುದು ಮತ್ತು ನಮ್ಮ ಜೀವನವನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಹೇಗೆ ?
ವಿವಿಧ ಧರ್ಮಗಳ ಬೇರುಗಳಲ್ಲಿ, ನಾಗರಿಕತೆಯಲ್ಲಿ ಮತ್ತು ಆಧ್ಯಾತ್ಮಿಕತೆಯ ಬಹುಮುಖಿ ವಾಹಿನಿಗಳಲ್ಲಿ ಅಂರ್ತರ್ಗತವಾಗಿರುವ ಮಾನವೀಯತೆಯ ದೀರ್ಘಕಾಲೀನ ಸಂಪ್ರದಾಯಗಳ ಚಿಂತನೆ ನೇತೃತ್ವದಲ್ಲಿ ಉತ್ತರಗಳ ಹುಡುಕಾಟ ನಡೆಯುವುದು ಸ್ವಾಭಾವಿಕ ಎಂದು ಅವರು ಹೇಳಿದರು.
"ಕಷ್ಟದ ವಿಷಯಗಳ ವಿಚಾರದಲ್ಲಿ ಮಾತುಕತೆಯ ಮೇಲೆ ಅಚಲ ನಂಬಿಕೆ ಇಟ್ಟಿರುವ ಪ್ರಾಚೀನ ಭಾರತೀಯ ಸಂಪ್ರದಾಯದ ಉತ್ಪನ್ನ ತಾವೆಂದು" ಪ್ರಧಾನಿ ಹೇಳಿದರು. ಪುರಾತನ ಭಾರತದ ಅಂಶವಾದ " ತರ್ಕ ಶಾಸ್ತ್ರ "ವನ್ನು ಅಭಿಪ್ರಾಯಗಳ ವಿನಿಮಯ ಮತ್ತು ಸಂಘರ್ಷದ ತಪ್ಪಿಸುವ ತಳಹದಿಯ ಮೇಲೆ ರೂಪಿಸಲಾಗಿದೆ ಎಂದು ಅವರು ಹೇಳಿದರು.
ಭಾರತದ ಪುರಾಣಗಳ ಭಗವಾನ್ ರಾಮ, ಭಗವಾನ್ ಕೃಷ್ಣ, ಭಗವಾನ್ ಬುದ್ಧ ಮತ್ತು ಭಕ್ತ ಪ್ರಹ್ಲಾದರ ಉದಾಹರಣೆಯನ್ನು ನೀಡಿದ ಪ್ರಧಾನಮಂತ್ರಿಯವರು, ಅವರೆಲ್ಲರ ಕ್ರಿಯೆಗಳೂ ಉದ್ದೇಶಗಳೂ ಧರ್ಮವನ್ನು ಎತ್ತಿಹಿಡಿಯುವುದೇ ಆಗಿತ್ತು, ಅದು ಭಾರತೀಯರನ್ನು ಪ್ರಾಚೀನತೆಯಿಂದ ಆಧುನಿಕ ಕಾಲದಲ್ಲೂ ತಾಳಿಕೊಳ್ಳುವಂತೆ ಮಾಡಿದೆ ಎಂದರು.
“ಸಂವಾದ’’ ಅಥವಾ “’ಮಾತುಕತೆ’ ಮಾತ್ರವೇ ಆಳವಾಗಿ ಬೇರೂರಿರುವ ಧಾರ್ಮಿಕ ರೂಢ ಮಾದರಿಗಳ ಮತ್ತು ವಿಶ್ವದಾದ್ಯಂತ ಸಮುದಾಯಗಳನ್ನು ವಿಭಜಿಸುವ ಮತ್ತು ರಾಷ್ಟ್ರಗಳು ಮತ್ತು ಸಮಾಜಗಳ ನಡುವಿನ ಸಂಘರ್ಷದ ಬೀಜಗಳನ್ನು ಬಿತ್ತಿವ ಪೂರ್ವಗ್ರಹಗಳನ್ನು ಕತ್ತರಿಸುವ ಏಕೈಕ ಮಾರ್ಗವಾಗಿದೆ ಎಂದರು.
ಮಾನವ ಪ್ರಕೃತಿಯನ್ನು ಪೋಷಿಸದಿದ್ದರೆ, ಆಗ ಪ್ರಕೃತಿ ಹವಾಮಾನ ಬದಲಾವಣೆಯ ಮಾದರಿಯಲ್ಲಿ ಸ್ಪಂದಿಸುತ್ತದೆ ಎಂದು ಪ್ರಧಾನಿ ಹೇಳಿದರು. ಪರಿಸರಾತ್ಮಕ ಕಾನೂನು ಮತ್ತು ನಿಯಂತ್ರಣಗಳು ಯಾವುದೇ ಆಧುನಿಕ ಸಮಾಜಕ್ಕೆ ಅಗತ್ಯವಾಗಿವೆಯಾದರೂ, ಪ್ರಕೃತಿಗೆ ಕೆಳಮಟ್ಟದ ರಕ್ಷಣೆಯನ್ನು ಮಾತ್ರ ಕೊಡುತ್ತದೆ ಎಂದ ಅವರು, "ಸೌಹಾರ್ದಯುತ ಪರಿಸರ ಪ್ರಜ್ಞೆ" ಗೆ ಕರೆ ನೀಡಿದರು.
ಮಾನವ ಪ್ರಕೃತಿಗೆ ಹೊಂದಿಕೊಂಡಿರಬೇಕು, ಮನುಷ್ಯ ಪ್ರಕೃತಿಯನ್ನು ಪೂಜಿಸಬೇಕು, ಅದನ್ನುಕೇವಲ ಬಳಸಿಕೊಳ್ಳುವ ಒಂದು ಸಂಪನ್ಮೂಲ ಎಂದುಪರಿಗಣಿಸಬಾರದು ಎಂದು,ಪ್ರಧಾನಿ ಪ್ರತಿಪಾದಿಸಿದರು.
21ನೇ ಶತಮಾನದ "ಅಂತರ ಸಂಪರ್ಕಿತ ಮತ್ತು ಅಂತರ ಅವಲಂಬಿತ ವಿಶ್ವವು ಹಲವು ಜಾಗತಿಕ ಸವಾಲುಗಳಾದ ಭಯೋತ್ಪಾದನೆಯಿಂದ ಹವಾಮಾನ ಬದಲಾವಣೆಗಳ ವಿರುದ್ಧ ಹೋರಾಡುತ್ತಿದೆ, ಏಷ್ಯಾದ ಸನಾತನ ಸಂಪ್ರದಾಯವಾದ ಮಾತುಕತೆ ಮತ್ತು ಚರ್ಚೆಯ ಮೂಲಕ ಇದನ್ನು ಪರಿಹರಿಸಿಕೊಳ್ಳಬಹುದು ಎಂಬ ವಿಶ್ವಾಸ ತಮಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು.
Shared my message for the 2nd edition of 'Samvad- Global Initiative on Conflict Avoidance and Environment Consciousness', held in Yangon.
— Narendra Modi (@narendramodi) August 5, 2017
Talked about issues such as avoiding conflicts, addressing climate change and furthering peace.
— Narendra Modi (@narendramodi) August 5, 2017
Asia’s oldest traditions of dialogue and debate can give the answers to several global challenges such as terrorism and climate change.
— Narendra Modi (@narendramodi) August 5, 2017