2018ರ ಡಿಸೆಂಬರ್ 12-13ರಂದು ದೆಹಲಿಯಲ್ಲಿ ನಡೆಯಲಿರುವ ಮುಂಬರುವ 2018ರ ಪಾಲುದಾರಿಕೆ ವೇದಿಕೆಗೆ ಆಹ್ವಾನಿಸುವ ಸಲುವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಜೆ.ಪಿ. ನಡ್ಡಾ, ಚಿಲಿಯ ಮಾಜಿ ಅಧ್ಯಕ್ಷ ಹಾಗೂ ಪಿಎಂಎನ್.ಸಿ.ಎಚ್.ನ ಮುಂಬರುವ ಮಂಡಲಿಯ ಅಧ್ಯಕ್ಷ ಡಾ. ಮಿಚೆಲ್ ಬ್ಯಾಚೆಲೆಟ್ ಹಾಗೂ ಹೆಸರಾಂತ ನಟಿ ಮತ್ತು ಯುನಿಸೆಫ್ ನ ಗುಡ್ ವಿಲ್ ರಾಯಭಾರಿ ಶ್ರೀಮತಿ ಪ್ರಿಯಾಂಕಾ ಚೋಪ್ರಾ, ಪಿ.ಎಂ.ಎನ್.ಸಿ.ಎಚ್. ಪಾಲುದಾರಿಕಾ ವೇದಿಕೆಯ ಮೂವರು ನಾಯಕರುಗಳಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಹಾಯಕ ಸಚಿವ ಶ್ರೀ. ಎ.ಕೆ. ಚೌಬೆ, ಮತ್ತು ಎಚ್.ಎಫ್.ಡಬ್ಲ್ಯು ಕಾರ್ಯದರ್ಶಿ ಶ್ರೀಮತಿ ಪ್ರೀತಿ ಸುಡಾನ್ ಸೇರಿದಂತೆ ಮಾತೃತ್ವ, ನವಜಾತ ಮತ್ತು ಮಕ್ಕಳ ಆರೋಗ್ಯ ಪಾಲುದಾರಿಕೆ (ಪಿ.ಎಂ. ಎನ್.ಸಿ.ಎಚ್.)ಯ ನಿಯೋಗ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು. ರಾಜ್ಯಗಳ ಮುಖ್ಯಸ್ಥರು ಮತ್ತು ವಿವಿಧ ರಾಷ್ಟ್ರಗಳ ಆರೋಗ್ಯ ಸಚಿವರು ಮತ್ತು 1200 ಪ್ರತಿನಿಧಿಗಳು ಈ ವೇದಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪಿ.ಎಂ.ಎನ್.ಸಿ.ಎಚ್. 92 ರಾಷ್ಟ್ರಗಳು ಮತ್ತು 1000 ಸಂಘಟನೆಗಳ ಒಂದು ಜಾಗತಿಕ ಪಾಲುದಾರಿಕೆಯಾಗಿದೆ. ಪಿ.ಎಂ.ಎನ್.ಸಿ.ಎಚ್. ವೇದಿಕೆಯ ಪ್ಯಾರ್ಟನ್ ಆಗಲು ಪ್ರಧಾನಮಂತ್ರಿ ಸಂತೋಷದಿಂದ ಒಪ್ಪಿಗೆ ನೀಡಿದರು ಮತ್ತು ವೇದಿಕೆಯ ಲಾಂಛವನ್ನು ಸ್ವೀಕರಿಸಿದರು.
ಪಿಎಂಎನ್.ಸಿ.ಎಚ್.ನ ಮುಂಬರುವ ಮಂಡಲಿಯ ಅಧ್ಯಕ್ಷ ಡಾ. ಮಿಚೆಲ್ ಬ್ಯಾಚೆಲೆಟ್ ಪಾಲುದಾರಿಕೆಯ ಆದೇಶವನ್ನು ವಿವರಿಸಿ, ಮಹಿಳೆಯರು, ಮಕ್ಕಳು ಮತ್ತು ಯುವಕರ ಸಬಲೀಕರಣದ ಸವಾಲುಗಳನ್ನು ಎದುರಿಸಲು ಹೇಗೆ ಮುಂದೆ ತೆಗೆದುಕೊಂಡು ಹೋಗಬೇಕು ಎಂಬ ಬಗ್ಗೆ ಪ್ರಧಾನಿಯವರ ಕಲ್ಪನೆಗಳನ್ನು ಕೋರಿದರು. ಪ್ರಧಾನಿ, ಗುಜರಾತ್ ನಲ್ಲಿ ಖಾಸಗಿ ವಲಯದಲ್ಲಿ ಪಾಲುದಾರಿಕೆಯ ಮೂಲಕ ಸಾಂಸ್ಥಿಕ ವಿತರಣೆಯನ್ನು ಹೆಚ್ಚಿಸಲು ಮತ್ತು ಹಳ್ಳಿಗಳಲ್ಲಿ ಬಡ ಮತ್ತು ಗರ್ಭಿಣಿ ಮಹಿಳೆಯರಿಗೆ ಸಮುದಾಯದ ಆಹಾರವನ್ನು ಒದಗಿಸುವುದಕ್ಕಾಗಿ ಅವರ ಪೌಷ್ಟಿಕತೆಯ ಅಗತ್ಯಗಳನ್ನು ಪೂರೈಸಲು ಕೈಗೊಂಡ ಪ್ರಯತ್ನಗಳ ಬಗ್ಗೆ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು. ಅವರು ದಕ್ಷ ಸಂವಹನ ವ್ಯೂಹಗಳ ಬಗ್ಗೆ ಒತ್ತಿ ಹೇಳಿದರು. ಪಾಲ್ಗೊಳ್ಳುವಿಕೆಯೇ ಪಾಲುದಾರಿಕೆ ಎಂದು ಅವರು ಪ್ರತಿಪಾದಿಸಿದರು. ಪೌಷ್ಟಿಕಾಂಶ, ವಿವಾಹದ ವಯಸ್ಸು, ಪ್ರಸವಪೂರ್ವ ಮತ್ತು ಪ್ರಸವಾನಂತರದ ಕಾಳಜಿಯಂತಹ ಪ್ರಮುಖ ವಿಷಯಗಳಲ್ಲಿ ಜಗತ್ತಿನಾದ್ಯಂತದ ಜನರನ್ನು ಅದರಲ್ಲೂ ಯುವಜನರನ್ನು ನಾವು ತೊಡಗಿಸಿಕೊಳ್ಳಬೇಕು ಎಂದರು ಮತ್ತು,ಮಹಿಳೆಯರು, ಮಕ್ಕಳು ಮತ್ತು ಹರಯದವರ ಕಾರ್ಯಕ್ರಮಗಳಿಗೆ ಪರಿಣಾಮಕಾರಿ ಅನುಷ್ಠಾನ ಮತ್ತು ಸಂವಹನಕ್ಕಾಗಿ ಕಲ್ಪನೆಗಳನ್ನು ಕೇಳುವಂತೆ ಪ್ರಧಾನಿ ಸಲಹೆ ಮಾಡಿದರು. ಈ ವಿಷಯಗಳ ಮೇಲೆ ನಾವು ಒಂದು ಆನ್ ಲೈನ್ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿ, 2018ರ ಡಿಸೆಂಬರ್ ನಲ್ಲಿ ನಡೆಯಲಿರುವ ಮುಂಬರುವ ಪಾಲುದಾರಿಕೆ ವೇದಿಕೆಯಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಬಹುದು ಎಂದು ಸಲಹೆ ಮಾಡಿದರು.