ವಲ್ಸಾಡ್ ಜಿಲ್ಲೆಯ ಜುಲ್ವಾ ಗ್ರಾಮದಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನಾ (ಗ್ರಾಮೀಣ) ಇದರ ಫಲಾನುಭವಿಗಳ ಸಾಮೂಹಿಕ ಇ-ಗೃಹಪ್ರವೇಶಕ್ಕೆ ಲಕ್ಷಾಂತರ ಜನಸಮೂಹದ ಜೊತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಕ್ಷಿಯಾದರು. ರಾಜ್ಯದ ಎಲ್ಲ 26 ಜಿಲ್ಲೆಗಳ ಫಲಾನುಭವಿಗಳಿಗೆ ಒಂದು ಲಕ್ಷಕ್ಕೂ ಅಧಿಕ ವಸತಿಗಳನ್ನು ವಿತರಿಸಲಾಯಿತು. ಉಳಿದ ಜಿಲ್ಲೆಗಳಲ್ಲಿ, ಒಟ್ಟಾಗಿ ಗೃಹಪ್ರವೇಶ ಬ್ಲಾಕ್ ಹಂತದಲ್ಲಿ ಜರುಗಲಿದೆ. ಹಲವು ಜಿಲ್ಲೆಗಳ ಫಲಾನುಭವಿಗಳಿಗೆ ವಿಡಿಯೊ ಮೂಲಕ ಮುಖ್ಯಕಾರ್ಯಕ್ರಮದ ಸಂಪರ್ಕವನ್ನು ಬೆಳೆಸಲಾಯಿತು ಮತ್ತು ಪ್ರಧಾನಮಂತ್ರಿ ಕೆಲವರೊಂದಿಗೆ ಸಂವಾದ ನಡೆಸಿದರು.
ಈ ಕಾರ್ಯಕ್ರಮದಲ್ಲಿ ದೀನ್ ದಯಾಳ್ ಉಪಾಧ್ಯಾಯ್ ಗ್ರಾಮೀಣ ಕೌಶಲ್ಯ ವಿಕಾಸ್ ಯೋಜನಾ, ಮುಖ್ಯ ಮಂತ್ರಿ ಗ್ರಾಮೋದಯ ಯೋಜನಾ ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಪಟ್ಟ ಫಲಾನುಭವಿಗಳಲ್ಲಿ ಆಯ್ದ ಕೆಲವರಿಗೆ ಪ್ರಮಾಣಪತ್ರ ಮತ್ತು ಉದ್ಯೋಗ ಪತ್ರಗಳನ್ನು ಪ್ರಧಾನಮಂತ್ರಿ ವಿತರಿಸಿದರು. ಅವರು ಮಹಿಳಾ ಬ್ಯಾಂಕ್ ಪ್ರತಿನಿಧಿಸುವವರಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ಮತ್ತು ಸಣ್ಣ-ಎ.ಟಿ.ಎಂ.ಗಳನ್ನು ವಿತರಿಸಲಿದ್ದಾರೆ.
ಅಸ್ಟೋಲ್ ಜಲ ಪೂರೈಕಾ ಯೋಜನೆಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ಮಾಡಿದರು.
ರಕ್ಷಾ ಬಂಧನ ಹಬ್ಬ ಸಮೀಪಿಸುತ್ತಿದೆ ಎಂದು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ತಿಳಿಸಿದರು. ಹೊಸಮನೆಗಳು ಹೊಸ ಕನಸನ್ನು ಹೊತ್ತು ತರುತ್ತವೆ; ಕನಸನ್ನು ನನಸಾಗಿಸಲು ಶ್ರಮಿಸಲು ಕುಟುಂಬದ ಎಲ್ಲರಿಗೂ ಉತ್ಸಾಹ ನೀಡುತ್ತದೆ ಎಂದು ಪ್ರಧಾನಮಂತ್ರಿ ತಿಳಿಸಿದರು.
ಇಂದು ನಾವು ನೋಡುತ್ತಿರುವ ಇ-ಗೃಹಪ್ರವೇಶದ ವಸತಿಗಳು ಉತ್ತಮ ಗುಣಮಟ್ಟದವುಗಳು ಎಂದು ಮೇಲುನೋಟಕ್ಕೆ ಗೋಚರಿಸುತ್ತವೆ, ಇವುಗಳು ಸಾಧ್ಯವಾಗಿದೆ ಏಕೆಂದರೆ ನಡುವೆಯಾವುದೇ ಮಧ್ಯವರ್ತಿಗಳಿಲ್ಲ. 2022ರ ಒಳಗಾಗಿ “ ಎಲ್ಲರಿಗೂ ಮನೆ ” ನೀಡುವ ಕೇಂದ್ರ ಸರಕಾರದ ಬದ್ಧತೆಯನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.
ಕೇವಲ ರಾಜಕಾರಣಿಗಳು ಮಾತ್ರ ಸುಂದರ (ಅಲಂಕಾರಿಕ ) ಮನೆ ನಿರ್ಮಿಸಿಕೊಳ್ಳುತ್ತಾರೆ ಎಂಬ ಮಾತುಕತೆಗಳು ಬಹಳಕಾಲ ತನಕ ರೂಡಿಯಲ್ಲಿತ್ತು, ಈಗ ಬಡಜನರೂ ಕೂಡಾ ಸ್ವಂತ ಮನೆಗಳನ್ನು ಪಡೆಯುತ್ತಿದ್ದಾರೆ ಎಂದು ಈಗ ಮಾತುಕತೆಯ ವಿಷಯ ಬದಲಾಗಿದೆ.
ಇಂದು ಶಂಕುಸ್ಥಾಪನೆಯಾಗಿರುವ ಅಸ್ಟೋಲ್ ಜಲ ಪೂರೈಕಾ ಯೋಜನೆ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು, ನಿರ್ಮಾಣದಲ್ಲಿ ಅತ್ಯುತ್ತಮ ಎಂಜಿನೀಯರಿಂಗ್ ಬಳಕೆಯಾಗಿದೆ, ಶುದ್ಧ ಕುಡಿಯುವ ನೀರು ಜನರನ್ನು ರೋಗ-ರುಜಿನಗಳಿಂದ ರಕ್ಷಿಸುತ್ತದೆ ಎಂದು ಹೇಳಿದರು.
ಶುದ್ಧ ಅಡುಗೆ ಇಂಧನ, ವಿದ್ಯುತ್ ಸಂಪರ್ಕ, ಶುದ್ಧ ಕುಡಿಯುವ ನೀರು, ಸ್ವಂತ ಮನೆ ಹೊಂದುವ ಅವಕಾಶಗಳ ಪೂರೈಕೆ ಮೂಲಕ ಸರಕಾರ ಹೇಗೆ ಬಡವರ ಜೀವನ ಮಾರ್ಪಡಿಸುತ್ತದೆ, ಎಂದು ಪ್ರಧಾನಮಂತ್ರಿ ಅವರು ವಿವರಿಸಿದರು.
I got an opportunity to talk to women across the state today who got their homes under PM Awas Yojana.
— PMO India (@PMOIndia) August 23, 2018
The wonderful homes under PM Awas Yojana are being made possible because there are no middlemen: PM
It is my dream, it is our endeavour to ensure that every Indian has his own house by 2022.
— PMO India (@PMOIndia) August 23, 2018
Till now, we only heard about politicians getting their own homes.
Now, we are hearing about the poor getting their own homes: PM