ನಮ್ಮ ಬಾಂಧವ್ಯ ಶತಮಾನಗಳ ಹಿಂದಕ್ಕೆ ಹೋಗುತ್ತದೆ, ಆಧ್ಯಾತ್ಮಿಕತೆ,ಕಲಿಕೆ,ಕಲೆ,ವಾಣಿಜ್ಯ ಮತ್ತುಪರಸ್ಪರರಿಗೆ ಸಂಬಂಧಿಸಿದ ನಾಗರಿಕತೆ ಹಾಗೂ ಸಹಯೋಗದ ಏಳಿಗೆ ಸರ್ವವ್ಯಾಪಿಯಾಗಿದೆ. ನಾನು ಮೊದಲೇ ಹೇಳಿದಂತೆ ನಮ್ಮ ಎರಡೂ ರಾಷ್ಟ್ರಗಳು ಹಲವು ಮಾರ್ಗಗಳಲ್ಲಿ, ಒಂದೇ ರೀತಿಯ ಆಶೋತ್ತರಗಳಲ್ಲಿ, ಸವಾಲುಗಳಲ್ಲಿ ಮತ್ತು ಅವಕಾಶಗಳಲ್ಲಿ ಪರಸ್ಪರರ ಯಶಸ್ಸಿನಿಂದ ಪ್ರೇರಣೆ ಪಡೆದಿದೆ.
ಇಡೀ ವಿಶ್ವ ಏಷ್ಯಾದತ್ತ ನೋಡುತ್ತಿರುವ ಕಾಲದಲ್ಲಿ ಚೀಣಾ ಮತ್ತು ಭಾರತದ ಪ್ರಗತಿ ಮತ್ತು ಏಳಿಗೆ, ಮತ್ತು ನಮ್ಮ ಆಪ್ತ ಸಹಕಾರ, ಏಷ್ಯಾದ ಸುಸ್ಥಿರ ಮತ್ತು ಶಾಂತಿಯುತ ಭವಿಷ್ಯ ರೂಪಿಸಲು ಸಮರ್ಥವಾಗಿದೆ. ನಾನು ಈ ದೃಷ್ಟಿಕೋನವನ್ನು ಅಧ್ಯಕ್ಷ ಕ್ಸಿ ಮತ್ತು ಪ್ರಧಾನಿ ಲಿ ಅವರೊಂದಿಗೆ ಹಂಚಿಕೊಂಡಿದ್ದೇನೆ.
ಇತ್ತೀಚಿನ ದಿನಗಳಲ್ಲಿ, ನಾವು ನಮ್ಮ ಬಾಂಧವ್ಯದ ಎಲ್ಲ ಆಯಾಮಗಳಲ್ಲಿ ನಮ್ಮ ಕಾರ್ಯಕ್ರಮಗಳನ್ನು ಆಳಗೊಳಿಸಿದ್ದೇವೆ, ಮತ್ತು ಪರಸ್ಪರ ನಂಬಿಕೆ ಮತ್ತು ವಿಶ್ವಾಸವನ್ನು ಹೆಚ್ಚಿಸುವ ಮತ್ತು ನಮ್ಮ ಜನರೊಂದಿಗಿನ ಬಾಂಧವ್ಯವನ್ನು ಸಹ ವಿಸ್ತರಿಸಲು ಒತ್ತು ನೀಡಿದ್ದೇವೆ. ಮತ್ತು ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ.