ಪ್ರಧಾನಮಂತ್ರಿಯವರು ತಾಳಿಕೊಳ್ಳುವ ಅಕ್ಕಿ ವಿಧಗಳಿಗಾಗಿ ಹೊಸ ಜಮೀನಿನಲ್ಲಿ ಸಾಂಕೇತಿಕವಾಗಿ ಭೂಮಿ ಅಗೆಯುವ ಮೂಲಕ ಚಾಲನೆ ನೀಡಿದರು. ಶ್ರೀ ನರೇಂದ್ರ ಮೋದಿ ಚೇತರಿಕೆಯ ಭತ್ತದ ಗದ್ದೆಯ ಪ್ರಯೋಗ ಶಾಲೆಯನ್ನು ಉದ್ಘಾಟಿಸಲು ಫಲಕ ಅನಾವರಣ ಮಾಡಿದರು. ಐ.ಆರಾ.ಆರ್.ಐ. ವಂಶವಾಹಿ ಬ್ಯಾಂಕ್ ಗೆ ಪ್ರಧಾನಿ ಭಾರತದ ಎರಡು ಭತ್ತದ ತಳಿಗಳ ವಂಶವಾಹಿಯನ್ನು ಕೊಡುಗೆಯಾಗಿ ನೀಡಿದರು.
ಪ್ರವಾಹ ತಾಳಿಕೊಳ್ಳಬಲ್ಲ ಭತ್ತದ ತಳಿ; ಬರ ತಾಳಿಕೊಳ್ಳುವ ಭತ್ತದ ವಿಧ;ಉಪ್ಪಿನಂಶ ತಾಳಿಕೊಳ್ಳುವ ತಳಿ, ಮತ್ತು ಮಹಿಳಾ ಕೃಷಿ ಸಹಕಾರಿಗಳೊಂದಿಗೆ ಐ.ಆರ್.ಆರ್.ಐ ಮಾಡಿರುವ ಕಾರ್ಯ ಕುರಿತ ಛಾಯಾಚಿತ್ರ ಪ್ರದರ್ಶನವನ್ನೂ ಅವರು ಪರಾಮರ್ಶಿಸಿದರು.
ಪ್ರಧಾನಮಂತ್ರಿಯವರು ಮನಿಲಾದಲ್ಲಿ ಮಹಾವೀರ್ ಪಿಲಿಪ್ಪೀನ್ ಪ್ರತಿಷ್ಠಾನಕ್ಕೂ ಭೇಟಿ ನೀಡಿದರು. ಇದು ಭಾರತ ಮತ್ತು ಪಿಲಿಪ್ಪೀನ್ಸ್ ನಡುವೆ ದೀರ್ಘ ಕಾಲದಿಂದ ನಡೆಯುತ್ತಿರುವ ಮಾನವೀಯ ಸಹಕಾರದ ಕಾರ್ಯಕ್ರಮವಾಗಿದೆ, ಮತ್ತು ಇದನ್ನು ಮನಿಲಾದ ಭಾರತೀಯ ಮೂಲದ ಮೇಯರ್ ಡಾ. ರಾಮೋನ್ ಭಗತ್ ಸಿಂಗ್ ಅವರು ಸ್ಥಾಪಿಸಿದ್ದಾರೆ. ಈ ಪ್ರತಿಷ್ಠಾನವು ಮಹಾವೀರ್ ವಿಕಲಾಂಗ ಸಹಾಯತಾ ಸಮಿತಿಯೊಂದಿಗೆ ಸಹಯೋಗ ಹೊಂದಿದ್ದು, ಕಾಲಿಲ್ಲದವರಿಗೆ ಜೈಪುರ ಕೃತಕ ಕಾಲುಗಳ ಜೋಡಣೆ ಮಾಡುತ್ತಿದೆ. ಪ್ರಧಾನಮಂತ್ರಿಯವರು ಜೈಪುರ ಕಾಲುಗಳನ್ನು ಅಳವಡಿಸಿಕೊಂಡ ಫಲಾನುಭವಿಗಳೊಂದಿಗೆ ಮಾತುಕತೆ ನಡೆಸಿದರು.
ಈ ಭೇಟಿಯ ವೇಳೆ ಪ್ರಧಾನಮಂತ್ರಿಯವರು ಐ.ಆರ್.ಆರ್.ಐ.ನಲ್ಲಿ ಕೆಲಸ ಮಾಡುತ್ತಿರುವ ಹಲವು ಭಾರತೀಯ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು.
PM @narendramodi visits the International Rice Research Institute (IRRI), which is working towards developing better quality of rice seed and addressing food scarcity issues. A large number of Indian scientists are working in IRRI and contributing to R&D in these areas. pic.twitter.com/pg3IpVqAkT
— PMO India (@PMOIndia) November 13, 2017
In July 2017, the Cabinet approved a proposal for IRRI to set up its South Asia Regional Centre at Varanasi. This will be the first Research Centre by IRRI outside its headquarters in the Philippines.
— PMO India (@PMOIndia) November 13, 2017
The Varanasi Centre would help increase farmers' income by enhancing and supporting rice productivity, reducing cost of production, value addition, diversification and enhancement of farmers' skills.
— PMO India (@PMOIndia) November 13, 2017