"ಚೌಧರಿ ಛೋಟು ರಾಮ್ ರೈತರ ಬಗ್ಗೆ ಹೇಳಿದ್ದೇನೆಂದರೆ - ""ನನಗೆ ಕೃಷಿಯು ಬಡತನದ ಸಂಕೇತ ಮತ್ತು ಬ್ರಿಟಿಷ್ ಸೈನ್ಯದ ದೌರ್ಜನ್ಯಗಳ ವಿರುದ್ಧ ತನ್ನ ಧ್ವನಿ ಎತ್ತುವ ಸೈನಿಕೆ ಕೂಡ "": ಪ್ರಧಾನಮಂತ್ರಿ "
"ಭಾಕ್ರಾ ಅಣೆಕಟ್ಟನ್ನು ನಿರ್ಮಿಸುವ ಪರಿಕಲ್ಪನೆಯು ಚೌಧರಿ ಛೋಟು ರಾಮ್ ಅವರ ಕಲ್ಪನೆ ಎಂದು ಹಲವರು ತಿಳಿದಿರುವುದಿಲ್ಲ. ಅವರು, ಬಿಲಾಸ್ಪುರ ರಾಜನೊಂದಿಗೆ, ಭಕ್ರ ಆಣೆಕಟ್ಟು ಯೋಜನೆಗೆ ಸಹಿ ಹಾಕಿದರು: ಪ್ರಧಾನಮಂತ್ರಿ "
"ಚೌಧರಿ ಸಾಹಬ್ ಅವರ ದೃಷ್ಟಿಕೋನದಿಂದ ಪ್ರೇರೇಪಿಸಲ್ಪಟ್ಟ ನಾವು ನಮ್ಮ ರೈತರ ಕಲ್ಯಾಣದ ಕಡೆಗೆ ಕೆಲಸ ಮಾಡುತ್ತಿದ್ದೇವೆ: ಪ್ರಧಾನಿ "
"ಹರಿಯಾಣದ ರೈತರ ಆದಾಯ ಹೆಚ್ಚಾಗುವಂತೆ ಮತ್ತು ಹರಿಯಾಣದ ಗ್ರಾಮಗಳು ಸಮೃದ್ಧವಾಗುವಂತೆ ನಾವು ಖಚಿತಪಡಿಸುತ್ತಿದ್ದೇವೆ : ಪ್ರಧಾನಮಂತ್ರಿ "
"ಇಂದು, ಹರಿಯಾಣದ 'ಬೀಟಿ ಬಚಾವೋ, ಬೇಟಿ ಪಡಾವೋ ' ಅಭಿಯಾನದ ಯಶಸ್ಸನ್ನು ನೋಡಿ ಚೌಧರಿ ಛೋಟು ರಾಮ್ ನ ಆತ್ಮ ಸಂತೋಷಪಡಲಿದೆ: ಪ್ರಧಾನಿ "
"ಇಂದು ಹರಿಯಾಣ ದೇಶದ ಬೆಳವಣಿಗೆಯನ್ನು ಹೆಚ್ಚಿಸುತ್ತಿದೆ. ಈ ಬೆಳವಣಿಗೆ ದೀರ್ಘಾವಧಿಯಲ್ಲಿ ಮುಂದುವರೆಯುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ: ಪ್ರಧಾನಮಂತ್ರಿ "

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಪ್ಲಾ, ರೊಹ್ಟಕ್ ಗೆ ಭೇಟಿ ನೀಡಿದರು. ಅವರು ಸರ್ ಛೋಟು ರಾಮ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು.

ಸೋನೆಪಟ್ ನಲ್ಲಿ ಜರುಗಿದ ಸಾರ್ವಜನಿಕ ಸಮಾರಂಭದಲ್ಲಿ “ರೈಲು ಕೋಚ್ ರೆಫರ್ಬಿಷಿಂಗ್ ಕಾರ್ಖಾನೆ’ಗೆ ಅಡಿಗಲ್ಲು ಹಾಕುವ ಸಂಕೇತವಾಗಿ ಫಲಕವನ್ನು ಅನಾವರಣಗೊಳಿಸಿದರು. ಕಾರ್ಖಾನೆ ಪೂರ್ಣಗೊಂಡಾಗ, ಅದು ಉತ್ತರ ವಲಯದಲ್ಲಿ ರೈಲು ಬಂಡಿಗಳ ಬೃಹತ್ ದುರಸ್ಥಿ ಮತ್ತು ನಿರ್ವಹಣಾ ತಾಣವಾಗಲಿದೆ. ಕಾರ್ಖಾನೆ ನಿರ್ಮಾಣದಲ್ಲಿ ಮೊಡ್ಯುಲಾರ್ ಮತ್ತು ಪ್ರಿಫ್ಯಾಬ್ರಿಕೇಟೆಡ್ ನಿರ್ಮಾಣ ತಂತ್ರಜ್ಞಾನಗಳು, ಅಧುನಿಕ ಯಂತ್ರಗಳು ಹಾಗೂ ಪರಿಸರ ಸ್ನೇಹಿ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಆವರು, ಚೌಧರಿ ಛೋಟು ರಾಮ್ ಜೀ ಭಾರತಕ್ಕೆ ಪ್ರಮುಖ ಕೊಡುಗೆಗಳನ್ನು ನೀಡಿದ ಸಮಾಜ ಸುಧಾರಕರಲ್ಲಿ ಒಬ್ಬರು. ಸರ್ ಛೋಟು ರಾಮ್ ಅವರು ಶೋಷಿತರು ಮತ್ತು ಅವಕಾಶ ವಂಚಿತರ ಬಲಿಷ್ಠ ಧ್ವನಿಯಾಗಿದ್ದರು ಎಂದು ಪ್ರಧಾನಮಂತ್ರಿ ಅವರು ಹೇಳಿದರು.

“ರೈಲು ಕೋಚ್ ರೆಫರ್ಬಿಷಿಂಗ್ ಕಾರ್ಖಾನೆ” ಕೇವಲ ಸೋನೆಪಟ್ ನ ಅಭಿವೃದ್ಧಿಗೆ ಮಾತ್ರವಲ್ಲ ಬದಲಾಗಿ ಸಂಪೂರ್ಣ ಹರಿಯಾಣ ರಾಜ್ಯಕ್ಕೆ ಕೊಡುಗೆ ನೀಡಲಿದೆ. ಯುವಜನತೆಗೆ ಉದ್ಯೋಗ ಸೃಷ್ಠಿಸುವುದಲ್ಲದೆ, ಇದು ಈ ವಲಯದ ಸಣ್ಣ ವ್ಯವಹಾರಿಕೋದ್ಯಮಿಗಳಿಗೂ ಪ್ರಯೋಜನವಾಗಲಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಸರ್ ಛೋಟು ರಾಮ್ ಅವರ ದೂರದೃಷ್ಠಿಯನ್ನು ಪ್ರಧಾನಮಂತ್ರಿ ಅವರು ಪ್ರಶಂಸಿಸಿದರು ಹಾಗು ಈ ನಿಟ್ಟಿನಲ್ಲಿ ಭಕ್ರಾ ಅಣೆಕಟ್ಟು ಬಗ್ಗೆಯೂ ಮಾತನಾಡಿದರು. ಸರ್ ಛೋಟು ರಾಮ್ ಅವರು ರೈತರಿಗೆ ಸಂಭಾವನೆಯ ಬೆಲೆ ನೀಡಲು ಉಪಕ್ರಮಗಳನ್ನು ಪ್ರಾರಂಭಿಸಿದರು ಹಾಗೂ ಇದೇ ರೀತಿಯಲ್ಲಿ ಕೇಂದ್ರ ಸರಕಾರವೂ ಕೂಡಾ ಇಟ್ಟಿರುವ ಹೆಜ್ಜೆಗಳ ಕುರಿತಾಗಿ ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಆಯುಷ್ಮಾನ್ ಭಾರತ ಯೋಜನೆಯ ಪ್ರಗತಿಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು, ಆರೋಗ್ಯ ಭರವಸೆ ಯೋಜನೆಯ ಪ್ರಪ್ರಥಮ ಫಲಾನುಭವಿ ಈ ರಾಜ್ಯದವರಾಗಿದ್ದಾರೆ. ಎಂದು ಪ್ರಧಾನಮಂತ್ರಿ ಹೇಳಿದರು. ಎರಡು ವಾರಗಳಲ್ಲಿ 50,000 ಜನರು ಈ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ ಎಂಬ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದರು.

“ಬೇಟಿ ಬಚಾವೊ, ಬೇಟಿ ಪಡಾವೊ” ಯೋಜನೆಯ ಯಶಸ್ಸನ್ನು ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು. ಹರಿಯಾಣದ ಹಳ್ಳಿಯಲ್ಲಿ ಜನಿಸಿದ ಹುಡುಗಿಯರು ಜಾಗತಿಕ ರಂಗದಲ್ಲಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ, ಹಾಗೂ ಹರಿಯಾಣದ ಯುವ ಜನತೆ ಜಾಗತಿಕ ಕ್ರೀಡಾ ಶಕ್ತಿಯಾಗಿ ಮಿಂಚಲು ಭಾರತಕ್ಕೆ ಸಹಾಯ ಮಾಡಿದ್ದಾರೆ. ಇವುಗಳೆಲ್ಲವು ಸರ್ ಛೋಟು ರಾಮ್ ಅವರ ಕನಸು ನನಸಾಗಿಸುವಲ್ಲಿ ನಾವಿಂದು ಕ್ಷಿಪ್ರ ಪ್ರಗತಿ ಕಾಣುತ್ತಿದ್ದೇವೆ ಎಂಬುದರ ಸೂಚನೆಗಳಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು.

 

 

 

 

 

 

 

 

 

 

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi