ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ಪ್ರಧಾನಿಯವರು ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಪವಿತ್ರ ಜಲವನ್ನು ಸಮರ್ಪಿಸಿದರು. ಪ್ರಧಾನಿಯವರು ಸಸಿಯನ್ನೂ ನೆಟ್ಟರು.
ಬೆಂಗಳೂರಿನ ಬೆಳವಣಿಗೆಗೆ ನಗರ ಸಂಸ್ಥಾಪಕರಾದ ನಾಡಪ್ರಭು ಕೆಂಪೇಗೌಡರ ಕೊಡುಗೆಯನ್ನು ಸ್ಮರಿಸಲು ಪ್ರತಿಮೆಯನ್ನು ನಿರ್ಮಿಸಲಾಗಿದೆ. ಏಕತಾ ಪ್ರತಿಮೆ ಖ್ಯಾತಿಯ ರಾಮ್ ವಿ ಸುತಾರ್ ಅವರ ಪರಿಕಲ್ಪನೆ ಮತ್ತು ಕೆತ್ತನೆಯಲ್ಲಿ 98 ಟನ್ ಕಂಚು ಮತ್ತು 120 ಟನ್ ಉಕ್ಕಿನಿಂದ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ.
“ಬೆಂಗಳೂರು ನಿರ್ಮಾಣದಲ್ಲಿ ಶ್ರೀ ನಾಡಪ್ರಭು ಕೆಂಪೇಗೌಡರ ಪಾತ್ರ ಅಸಾಧಾರಣವಾದುದು. ಜನರ ಕಲ್ಯಾಣವನ್ನು ಯಾವಾಗಲೂ ಎಲ್ಲಕ್ಕಿಂತ ಮಿಗಿಲಾಗಿ ನೋಡುತ್ತಿದ್ದ ಕ್ರಿಯಾಶೀಲ ದಾರ್ಶನಿಕ ಎಂದು ಅವರನ್ನು ನೆನಪಿಸಿಕೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿ ‘ಪ್ರಗತಿಯ ಪ್ರತಿಮೆʼಯನ್ನು ಉದ್ಘಾಟಿಸಿರುವುದು ಗೌರವದ ವಿಷಯವಾಗಿದೆ.” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಮಂತ್ರಿಯವರೊಂದಿಗೆ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು.
ಬೆಂಗಳೂರು ನಿರ್ಮಾಣದಲ್ಲಿ ಶ್ರೀ ನಾಡಪ್ರಭು ಕೆಂಪೇಗೌಡರ ಪಾತ್ರ ಅಸಾಧಾರಣವಾದುದು. ಜನರ ಕಲ್ಯಾಣವನ್ನು ಯಾವಾಗಲೂ ಎಲ್ಲಕ್ಕಿಂತ ಮಿಗಿಲಾಗಿ ನೋಡುತ್ತಿದ್ದ ಕ್ರಿಯಾಶೀಲ ದಾರ್ಶನಿಕ ಎಂದು ಅವರನ್ನು ನೆನಪಿಸಿಕೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿ ‘ಪ್ರಗತಿಯ ಪ್ರತಿಮೆʼಯನ್ನು ಉದ್ಘಾಟಿಸಿರುವುದು ಗೌರವದ ವಿಷಯವಾಗಿದೆ. pic.twitter.com/rmOtUd7YxB
— Narendra Modi (@narendramodi) November 11, 2022
The role of Sri Nadaprabhu Kempegowda in the making of Bengaluru is unparalleled. He is remembered as a visionary who always put the welfare of people above everything else. Honoured to inaugurate the ‘Statue of Prosperity’ in Bengaluru. pic.twitter.com/zoMIXIYFf1
— Narendra Modi (@narendramodi) November 11, 2022