2021ರ ಫೆಬ್ರವರಿ 14ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಅಂದು ಬೆಳಗ್ಗೆ 11.15ರ ಸುಮಾರಿಗೆ ಪ್ರಧಾನಮಂತ್ರಿಯವರು ಚೆನ್ನೈನಲ್ಲಿ ಹಲವು ಪ್ರಮುಖ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಲೋಕಾರ್ಪಣೆಯನ್ನು ಮಾಡಲಿದ್ದಾರೆ ಮತ್ತು ಅರ್ಜುನ್ ಪ್ರಮುಖ ಯುದ್ಧ ಟ್ಯಾಂಕ್ (ಎಂ.ಕೆ. -1ಎ) ಅನ್ನು ಸೇನಾಪಡೆಗೆ ಹಸ್ತಾಂತರಿಸಲಿದ್ದಾರೆ. ಮಧ್ಯಾಹ್ನ 3.30ರವೇಳೆಗೆ ಪ್ರಧಾನಮಂತ್ರಿಯವರು, ಕೊಚ್ಚಿಯಲ್ಲಿ ವಿವಿಧ ಯೋಜನೆಗಳನ್ನು ಲೋಕಾರ್ಪಣೆ ಮಾಡಿ ಕೆಲವು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ಈ ರಾಜ್ಯಗಳ ಪ್ರಗತಿಯ ಪಥಕ್ಕೆ ಮಹತ್ವದ ವೇಗ ನೀಡಲಿವೆ ಮತ್ತು ಸಂಪೂರ್ಣ ಅಭಿವೃದ್ಧಿಯ ಸಾಮರ್ಥ್ಯಕ್ಕೆ ವೇಗ ನೀಡಲು ನೆರವಾಗಲಿವೆ.

ತಮಿಳುನಾಡಿನಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಅವರು 3770 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿರುವ ಚೆನ್ನೈ ಮೈಟ್ರೋ ರೈಲು ಮೊದಲ ಹಂತದ ವಿಸ್ತರಣೆಯನ್ನು ಉದ್ಘಾಟಿಸಲಿದ್ದಾರೆ ಮತ್ತು ವಾಷರ್ ಮನ್ ಪೇಟೆಯಿಂದ ವಿಮ್ಕೋ ನಗರವರೆಗಿನ ಪ್ರಯಾಣಿಕರ ಸೇವೆಗೆ ಚಾಲನೆ ನೀಡಲಿದ್ದಾರೆ. ಈ 9.05 ಕಿ.ಮೀ. ಉದ್ದದ ವಿಸ್ತರಣೆಯು ಉತ್ತರ ಚೆನ್ನೈಯನ್ನು ವಿಮಾನ ನಿಲ್ದಾಣ ಮತ್ತು ಕೇಂದ್ರೀಯ ರೈಲು ನಿಲ್ದಾಣಕ್ಕೆ ಸಂಪರ್ಕಿಸಲಿದೆ.

ಪ್ರಧಾನಮಂತ್ರಿಯವರು ಚೆನ್ನೈ ಬೀಚ್ ಮತ್ತು ಅಟ್ಟಿಪಟ್ಟು ನಡುವಿನ ನಾಲ್ಕನೇ ರೈಲ್ವೆ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಈ 22.1 ಕಿ.ಮೀ ವಿಭಾಗವನ್ನು 293.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಚೆನ್ನೈ ಮತ್ತು ತಿರುವಳ್ಳುವರ್ ಜಿಲ್ಲೆಗಳ ನಡುವೆ ಹಾದು ಹೋಗಲಿದೆ ಮತ್ತು ಇದು ಚೆನ್ನೈ ಬಂದರಿನ ಸಂಚಾರವನ್ನು ಸುಗಮಗೊಳಿಸಲಿದೆ. ಈ ವಿಭಾಗವು ಚೆನ್ನೈ ಬಂದರು ಮತ್ತು ಎನ್ನೋರೆ ಬಂದರುಗಳನ್ನು ಸಂಪರ್ಕಿಸಲಿದ್ದು, ಪ್ರಮುಖ ಯಾರ್ಡ್ ಗಳ ಮೂಲಕ ಹಾದು ಹೋಗಲಿಗೆ, ಇದು ರೈಲುಗಳ ಸಂಚಾರದ ಕಾರ್ಯಾಚರಣೆಗೆ ನಮ್ಯತೆಯನ್ನು ಒದಗಿಸುತ್ತದೆ.

ಪ್ರಧಾನಮಂತ್ರಿಯವರು ವಿಲ್ಲುಪುರಮ್ – ಕುಡಲೂರ್ ಮೈಲಾಡದೊರೈ – ತಂಜಾವೂರು ಮತ್ತು ಮೈಲಾಡದೊರೈ - ತಿರುವಾರೂರ್ ನಡುವಿನ ಏಕ ಮಾರ್ಗದ ವಿಭಾಗದ ವಿದ್ಯುದ್ದೀಕರಣವನ್ನೂ ಉದ್ಘಾಟಿಸಲಿದ್ದಾರೆ. ಇದು 423 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. 228 ಕಿ.ಮೀ.ಗಳ ಈ ಮಾರ್ಗದ ವಿದ್ಯುದ್ದೀಕರಣವು ಚೆನ್ನೈ ಎಗ್ಮೋರ್ ಮತ್ತು ಕನ್ಯಾಕುಮಾರಿ ನಡುವೆ ಟ್ರಾಕ್ಷನ್ ಬದಲಾವಣೆ ಇಲ್ಲದೆ ಮುಕ್ತವಾಗಿ ಸಾಗಲು ಅನುವುಮಾಡಿಕೊಡುತ್ತದೆ ಮತ್ತು ಇದು ಪ್ರತಿ ನಿತ್ಯ ಆಗುತ್ತಿದ್ದ 14.61 ಲಕ್ಷ ರೂ. ಇಂಧನ ವೆಚ್ಚವನ್ನು ಉಳಿಸುತ್ತದೆ.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು, ಅತ್ಯಾಧುನಿಕ ಅರ್ಜುನ್ ಪ್ರಮುಖ ಯುದ್ಧ ಟ್ಯಾಂಕ್ (ಎಂ.ಕೆ. 1ಎ)ಯನ್ನು ಭಾರತೀಯ ಸೇನೆಗೆ ಹಸ್ತಾಂತರ ಮಾಡಲಿದ್ದಾರೆ. ಈ ಯುದ್ಧ ಟ್ಯಾಂಕ್ ಅನ್ನು ಸಿವಿಆರ್.ಡಿ.ಇ, ಡಿಆರ್.ಡಿಓ. 15 ಶೈಕ್ಷಣಿಕ ಸಂಸ್ಥೆಗಳು, 8 ಪ್ರಯೋಗಾಲಯ ಮತ್ತು ಹಲವು ಎಂ.ಎಸ್.ಎಸ್.ಇ.ಗಳ ಸಹಯೋಗದಲ್ಲಿ ದೇಶೀಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿ, ಉತ್ಪಾದನೆ ಮಾಡಿದೆ.

ಪ್ರಧಾನಮಂತ್ರಿಯವರು ಗ್ರ್ಯಾಂಡ್ ಅನಿಕಟ್ ಕಾಲುವೆ ವ್ಯವಸ್ಥೆಯ ವಿಸ್ತರಣೆ, ನವೀಕರಣ ಮತ್ತು ಆಧುನೀಕರಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನದಿ ಮುಖಜಭೂಮಿಯ ಜಿಲ್ಲೆಗಳಲ್ಲಿ ನೀರಾವರಿಗಾಗಿ ಕಾಲುವೆ ಮುಖ್ಯವಾಗಿದೆ. ಈ ಕಾಲುವೆಯ ಆಧುನೀಕರಣವನ್ನು 2,640 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಕಾಲುವೆಗಳ ನೀರು ಸಾಗಿಸುವ ಸಾಮರ್ಥ್ಯದಲ್ಲಿ ಸುಧಾರಣೆಗೆ ಕಾರಣವಾಗಲಿದೆ.

ಪ್ರಧಾನಮಂತ್ರಿಯವರು ಐಐಟಿ ಮದ್ರಾಸ್ ನ ಅನ್ವೇಷಣೆ ಆವರಣಕ್ಕೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಆವರಣವನ್ನು ಚೆನ್ನೈ ಬಳಿಯ ಥಾಯೂರ್ ನಲ್ಲಿ 2 ಲಕ್ಷ ಚದರ ಮೀಟರ್ ಪ್ರದೇಶದಲ್ಲಿ ಮೋದಲ ಹಂತದಲ್ಲಿ 1000 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

ತಮಿಳುನಾಡಿನ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.

ಕೇರಳದಲ್ಲಿ ಪ್ರಧಾನಮಂತ್ರಿ

ಬಿಪಿಸಿಎಲ್‌.ನ ಪ್ರೊಪಿಲೀನ್ ಡೆರಿವೇಟಿವ್ ಪೆಟ್ರೋಕೆಮಿಕಲ್ ಯೋಜನೆ (ಪಿಡಿಪಿಪಿ) ಯನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಸಂಕೀರ್ಣವು ಅಕ್ರಿಲೇಟ್‌ ಗಳು, ಅಕ್ರಿಲಿಕ್ ಆಸಿಡ್ ಮತ್ತು ಆಕ್ಸೊ-ಆಲ್ಕೋಹಾಲ್ ಅನ್ನು ಉತ್ಪಾದಿಸುತ್ತದೆ, ಇವುಗಳು ಪ್ರಸ್ತುತ ಪ್ರಧಾನವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ ಮತ್ತು ವಿದೇಶಿ ವಿನಿಮಯದಲ್ಲಿ ವಾರ್ಷಿಕ ಸುಮಾರು 3700 ರಿಂದ 4000 ಕೋಟಿ ರೂ. ಉಳಿತಾಯವಾಗುವ ನಿರೀಕ್ಷೆಯಿದೆ. ಸುಮಾರು 6000 ಕೋಟಿ ರೂ.ಗಳ ಬಂಡವಾಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪಿಡಿಪಿಪಿ ಸಮುಚ್ಛಯವನ್ನು ಪೂರಕ ಸಾಮಗ್ರಿ ಪೂರೈಕೆ, ಸೌಲಭ್ಯಗಳು, ಆಫ್-ಸೈಟ್ ಗಳು ಮತ್ತು ಇತರ ಸೌಲಭ್ಯಗಳ ಏಕೀಕರಣವನ್ನು ಸಾಧಿಸಲು ಸಂಸ್ಕರಣಾಗಾರಕ್ಕೆ ಹತ್ತಿರದಲ್ಲೇ ಸ್ಥಾಪಿಸಲಾಗಿದೆ. ಪೂರಕ ವಸ್ತು ಮತ್ತು ಹೊಂದಿಕೆಯಾಗುವಂತಹ ಪೂರೈಕೆ ಸರಪಳಿ ನಿರ್ವಹಣೆಯ ಸಿದ್ಧ ಲಭ್ಯತೆಯ ಪರಿಣಾಮವಾಗಿ ಭಾರಿ ವೆಚ್ಚವನ್ನು ಉಳಿಸುವಲ್ಲಿ ಇದು ಕೆಳದಂಡೆಯ ವಲಯಕ್ಕೆ ಪ್ರಯೋಜನವನ್ನು ನೀಡುತ್ತದೆ. ನಿಯೋಜನೆಯೊಂದಿಗೆ, ಕೊಚ್ಚಿ ಸಂಸ್ಕರಣಾಗಾರವು ಸ್ಥಾಪಿತ ಪೆಟ್ರೋರಾಸಾಯನಿಕಗಳನ್ನು ಉತ್ಪಾದಿಸಿದ ಮೊದಲ ಭಾರತೀಯ ಸಂಸ್ಕರಣಾಗಾರವಾಗಿದೆ.

ಪ್ರಧಾನಮಂತ್ರಿಯವರು ಆರ್.ಓ –ಆರ್.ಓ. ಹಡಗುಗಳನ್ನು ಕೊಚ್ಚಿನ್ ನ ವಿಲ್ಲಿಂಗ್ಡನ್ ದ್ವೀಪದಲ್ಲಿ ದೇಶಕ್ಕೆ ಸಮರ್ಪಿಸಲಿದ್ದಾರೆ. ಭಾರತೀಯ ಅಂತಾರಾಷ್ಟ್ರೀಯ ಜಲ ಮಾರ್ಗ ಪ್ರಾಧಿಕಾರವು ಹೊಸ ಎರಡು ರೋಲ್ ಆನ್ /ರೋಲ್ ಆಫ್ ಹಡಗುಗಳನ್ನು ಬೋಲಗಟ್ಟೆ ಮತ್ತು ವಿಲ್ಲಿಂಗ್ಡನ್ ದ್ವೀಪಗಳ ನಡುವೆ ರಾಷ್ಟ್ರೀಯ ಜಲ ಮಾರ್ಗ -3ರಲ್ಲಿ ನಿಯುಕ್ತಿಗೊಳಿಸಲಿದೆ. ಆರ್.ಓ.-ಆರ್.ಓ. ಹಡಗುಗಳು, ಎಂ.ವಿ. ಆದಿ ಶಂಕರ ಮತ್ತು ಎಂ.ವಿ. ಸಿ.ವಿ. ರಾಮನ್ ಹೆಸರಿನವಾಗಿದ್ದು, ಇವು ತಲಾ ಆರು 20 ಅಡಿಗಳ ಟ್ರಕ್, ಮೂರು 20 ಅಡಿಗಳ ಟ್ರೈಲರ್ ಟ್ರಕ್ ಗಳು, ಮೂರು 40 ಅಡಿಯ ಟ್ರೈಲರ್ ಟ್ರಕ್ ಗಳು ಮತ್ತು 30 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ. ಈ ಸೇವೆಗಳು ವಾಣಿಜ್ಯಕ್ಕೆ ನೆರವಾಗಲಿದ್ದು, ಸಾರಿಗೆ ವೆಚ್ಚವನ್ನು ತಗ್ಗಿಸಲಿದೆ ಮತ್ತು ಪ್ರಯಾಣದ ಸಮಯ ಉಳಿಸಲಿದೆ. ಜೊತೆಗೆ ಕೊಚ್ಚಿಯ ರಸ್ತೆಗಳ ಮೇಲಿನ ಒತ್ತಡವನ್ನೂ ನಿವಾರಿಸಲಿದೆ.

ಪ್ರಧಾನಮಂತ್ರಿಯವರು ಅಂತಾರಾಷ್ಟ್ರೀಯ ಕ್ರ್ಯೂಸ್ ಟರ್ಮಿನಲ್ “ಸಾಗರಿಕಾ”ವನ್ನು ಕೊಚ್ಚಿ ಬಂದರಿನಲ್ಲಿ ಉದ್ಘಾಟಿಸಲಿದ್ದಾರೆ. ವೆಲ್ಲಿಂಗ್ಡನ್ ದ್ವೀಪದ ಎರ್ನಾಕುಲಂನ ಹಡಗಿನ ಕಟ್ಟೆಯಲ್ಲಿರುವ ಇದು ಭಾರತದ ಪ್ರಥಮ ಪೂರ್ಣ ಕಾಲಿಕ ಅಂತಾರಾಷ್ಟ್ರೀಯ ಕ್ರ್ಯೂಸ್ ಟರ್ಮಿನಲ್ ಆಗಿದೆ. ಇದು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದ್ದು, 25.72 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಪ್ರವಾಸೋದ್ಯಮವನ್ನು ಉತ್ತೇಜಿಸಲಿದ್ದು, ಅಭಿವೃದ್ಧಿಗೆ ಚೈತನ್ಯ ನೀಡಲಿದೆ ಮತ್ತು ಉದ್ಯೋಗ ಸೃಷ್ಟಿಗೆ, ವಿದೇಶೀ ವಿನಿಮಯ ಮತ್ತು ಆದಾಯ ಗಳಿಕೆಗೆ ಸಮರ್ಥ ಸಾಧನವಾಗಲಿದೆ.

ಪ್ರಧಾನಮಂತ್ರಿಯವರು ಕೊಚ್ಚಿನ್ ಶಿಪ್ ಯಾರ್ಡ್ ಲಿ., ವಿಜ್ಞಾನ ಸಾಗರದ ಸಾಗರ ಎಂಜಿನಿಯರಿಂಗ್ ತರಬೇತಿ ಸಂಸ್ಥೆಯನ್ನೂ ಉದ್ಘಾಟಿಸಲಿದ್ದಾರೆ. ಇದು ಒಂದು ಪ್ರಧಾನ ಕಡಲ ಕಲಿಕಾ ಕೇಂದ್ರವಾಗಿದ್ದು, ನಿರ್ಮಾಣ ಅಥವಾ ದುರಸ್ತಿ ಹಂತದಲ್ಲಿರುವ ವಿವಿಧ ಹಡಗುಗಳಲ್ಲಿ ತರಬೇತಿ ಪಡೆಯುವವರಿಗೆ ವಿಸ್ತೃತ ತರಬೇತಿ ಸೌಲಭ್ಯಗಳನ್ನು ಹೊಂದಿರುವ ಹಡಗಿನ ಅಂಗಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತದ ಏಕೈಕ ಕಡಲ ಸಂಸ್ಥೆಯಾಗಿದೆ. 27.5 ಕೋಟಿ ರೂ.ಗಳ ಬಂಡವಾಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸಂಸ್ಥೆಯು 114 ಹೊಸ ಪದವೀಧರರ ಸೇರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದು ಭಾರತ ಮತ್ತು ವಿದೇಶಗಳಲ್ಲಿನ ಕಡಲ ಉದ್ಯಮದ ಅಗತ್ಯವನ್ನು ಪೂರೈಸಲು ಸಾಗರ ಎಂಜಿನಿಯರ್‌ ಗಳು ಮತ್ತು ಸಿಬ್ಬಂದಿಗಳ ಪ್ರತಿಭಾ ಸಮೂಹವನ್ನು ರೂಪಿಸಲಿದೆ.

ಪ್ರಧಾನಮಂತ್ರಿಯವರು ಕೊಚ್ಚಿನ್ ಬಂದರಿನಲ್ಲಿ ದಕ್ಷಿಣ ಕಲ್ಲಿದ್ದಲು ಬರ್ತ್ ಪುನರ್ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದನ್ನು ಸಾಗರ ಮಾಲಾ ಅಡಿ 19.19 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲಾಗುತ್ತಿದೆ. ಇದು ಪೂರ್ಣಗೊಂಡ ಬಳಿಕ, ರಾಸಾಯನಿಕಗಳ ನಿರ್ವಹಣೆಗೆ ಸಮರ್ಪಿತ ಬರ್ತಿಂಗ್ ಸೌಲಭ್ಯವು ಕೊಚ್ಚಿನ್ ಬಂದರಿನಲ್ಲಿ ಲಭ್ಯವಾಗಲಿದೆ. ಬರ್ತ್ ನ ಪುನರ್ ನಿರ್ಮಾಣವು ತ್ವರಿತ ಮತ್ತು ಸಮರ್ಥ ಸರಕು ನಿರ್ವಹಣೆಯನ್ನು ಖಾತ್ರಿಪಡಿಸಲಿದ್ದು, ಸಾಗಣೆಯ ವೆಚ್ಚ ತಗ್ಗಿಸಲಿದೆ.

ಕೇರಳದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi