ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಾಸ್ಥಾನದ ಉದಯಪುರಕ್ಕೆ ನಾಳೆ ಭೇಟಿ ನೀಡಲಿದ್ದಾರೆ.
ಅಲ್ಲಿ ಅವರು ಹಲವು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಉದ್ಘಾಟನೆಯನ್ನೂ ಮಾಡಲಿದ್ದಾರೆ. ಈ ಯೋಜನೆಗಳ ಒಟ್ಟು ಅಂದಾಜು 15,000 ಕೋಟಿ ರೂಪಾಯಿಗಳಾಗಿವೆ.
ಉದ್ಘಾಟನೆ ಆಗಲಿರುವ ಯೋಜನೆಗಳ ಪೈಕಿ: ಕೋಟಾದಲ್ಲಿ ಚಂಬಲ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತಂತಿಯಿಂದ ಬಿಗಿಯಲಾದ ಆರು ಪಥದ ಸೇತುವೆ ಮಾರ್ಗ; ರಾಷ್ಟ್ರೀಯ ಹೆದ್ದಾರಿ 8ರ ಉದಯಪುರ ವಿಭಾಗದಲ್ಲಿ ಗೋಮಾತಿ ಚೌರಾಹಾ ಚತುಷ್ಪಥ ಮಾರ್ಗ; ಮತ್ತು ರಾಷ್ಟ್ರೀಯ ಹೆದ್ದಾರಿ-758 ರ ರಾಜ್ಸಾಮಂದ್-ಭಿಲ್ವಾರ ವಿಭಾಗದ ಚತುಷ್ಪಥ ಸೇರಿವೆ. ಶಂಕುಸ್ಥಾಪನೆ ನೆರವೇರಲಿರುವ ಪ್ರಮುಖ ಯೋಜನೆಗಳಲ್ಲಿ ಜೈಪುರ ವರ್ತುಲ ರಸ್ತೆ ಸೇರಿದೆ.
ಪ್ರಧಾನಮಂತ್ರಿಯವರು ಸಭಿಕರನ್ನು ಉದ್ದೇಶಿಸಿ ಭಾಷಣವನ್ನೂ ಮಾಡಲಿದ್ದಾರೆ.
ಬಳಿಕ ಪ್ರಧಾನಮಂತ್ರಿಯವರು ಉದಯಪುರದಲ್ಲಿ ಪ್ರತಾಪ್ ಗೌರವ್ ಕೇಂದ್ರಕ್ಕೂ ಭೇಟಿ ನೀಡಲಿದ್ದಾರೆ. ಈ ಕೇಂದ್ರವು ವಿವಿಧ ಪ್ರದರ್ಶನಗಳ ಮೂಲಕ ಅಂದಿನ ಮೇವಾರ್ ಸಾಮ್ರಾಜ್ಯದ ಜನಪ್ರಿಯ ದೊರೆ ಮಹಾರಾಣಾ ಪ್ರತಾಪ ಅವರ ಶೌರ್ಯ, ಸಾಧನೆ ಮತ್ತು ಜೀವನದ ಮಾಹಿತಿ ಒದಗಿಸಲಿದೆ.
Tomorrow I will be visiting Rajasthan, the land of the brave, where I will inaugurate & lay the foundation of key National Highway projects.
— Narendra Modi (@narendramodi) August 28, 2017
I will address a public meeting in Udaipur. I will also visit the Pratap Gaurav Kendra and pay my respects to the great Maharana Pratap.
— Narendra Modi (@narendramodi) August 28, 2017