ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 3, 2019ರಂದು ಪಂಜಾಬಿಗೆ ಭೇಟಿ ನೀಡಲಿದ್ದಾರೆ.
ಪಂಜಾಬಿನ ಜಲಂಧರ್ ನಲ್ಲಿ ಅವರು 106ನೇ ಆವೃತ್ತಿಯ ಬಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶ ( ಇಂಡಿಯನ್ ಸೈಯನ್ಸ್ ಕಾಂಗ್ರೆಸ್ -ಐ.ಎಸ್.ಸಿ)-2019 ಅನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಬಳಿಕ ಅವರು ಪಂಜಾಬಿನ ಗುರುದಾಸ್ ಪುರ್ ಗೆ ಪ್ರಯಾಣಿಸಲಿದ್ದಾರೆ, ಹಾಗೂ ಅಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ.
ದೇಶದಾದ್ಯಂತ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಕುರಿತ ಆಸಕ್ತಿ ಹೆಚ್ಚಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಂಕಲ್ಪದಂತೆ, ಅಧಿಕಾರ ಸ್ವೀಕರಿಸಿದ ನಂತರ ಇದು ಅವರ 5ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದ ಭಾಷಣವಾಗಿರುತ್ತದೆ. ಈ ಮೊದಲು ಅವರು, 2018ರಲ್ಲಿ ಬಾರತೀಯ ವಿಜ್ಞಾನ ಸಮಾವೇಶದ 105ನೇ ಆವೃತ್ತಿ, 2017ರಲ್ಲಿ 104ನೇ ಆವೃತ್ತಿ, 2016ರಲ್ಲಿ 103ನೇ ಆವೃತ್ತಿ , 2015ರಲ್ಲಿ 102ನೇ ಆವೃತ್ತಿಗಳಲ್ಲಿ ಭಾಷಣ ಮಾಡಿದ್ದರು.