ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 4, 2019ರಂದು ಮಣಿಪುರ ಮತ್ತು ಅಸ್ಸಾಂಗೆ ಭೇಟಿ ನೀಡಲಿದ್ದಾರೆ.
ಮಣಿಪುರದಲ್ಲಿ, ಪ್ರಧಾನಮಂತ್ರಿ ಅವರು ಹಲವಾರು ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಲಿದ್ದಾರೆ. ಮೊರೆಹ್ ನಲ್ಲಿ ಏಕೀಕೃತ ಚೆಕ್ ಪೊಸ್ಟ್ (ಐ.ಸಿ.ಪಿ), ದೊಲೈಥಾಬಿ ಬ್ಯಾರ್ರೇಜ್ ಯೋಜನೆ, ಸವೋಂಬಂಗ್ ನಲ್ಲಿ ಏಫ್.ಸಿ.ಐ. ಫುಡ್ ಸ್ಟೋರೇಜ್ ಗೋಡೌನ್ , ಥಂಗಲ್ ಸುರುಂಗ್ ನಲ್ಲಿ ಇಕೊ ಟೂರಿಸಂ ಮತ್ತು ವಿವಿಧ ಜಲ ಪೂರೈಕೆ ಯೋಜನೆಗಳು ಸೇರಿದಂತೆ ಹಲವಾರು ಯೋಜನೆಗಳ ಉದ್ಘಾಟನೆಯ ಸಂಕೇತವಾಗಿ ಫಲಕವನ್ನು ಪ್ರಧಾನಮಂತ್ರಿ ಅನಾವರಣ ಮಾಡಲಿದ್ದಾರೆ.
400ಕೆ.ವಿ. ಡಬ್ಲು ಸರ್ಕಿಟ್ ಸಿಲಿಚಾರ್- ಇಂಫಾಲ ಲೈನ್ ನ್ನು ಅವರು ದೇಶಾರ್ಪಣೆ ಮಾಡಲಿದ್ದಾರೆ
ಇಂಫಾಲದ ಧನಮಾಂಜುರಿ ವಿಶ್ವವಿದ್ಯಾಲಯ, ಕ್ರೀಡಾ ಸೌಕರ್ಯಗಳು ಮುಂತಾದ ಅಭಿವೃದ್ಧಿಯ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಅಡಿಗಲ್ಲು ಹಾಕಲಿದ್ದಾರೆ. ಪೂರ್ವ ಇಂಫಾಲ ಜಿಲ್ಲೆಯ ಹಪ್ತ ಕಂಗ್ಜೆಯಿಬಂಗ್ ನಲ್ಲಿ ಪ್ರಧಾನಮಂತ್ರಿ ಅವರು ಸಭಿಕರನನ್ನುದ್ಧೇಶಿಸಿ ಭಾಷಣ ಮಾಡಲಿದ್ದಾರೆ.
ಅಸ್ಸಾಂ ನ ಸಿಲಿಚಾರ್ ನ ರಾಮನಗರದಲ್ಲಿ ಪ್ರಧಾನಮಂತ್ರಿ ಅವರು ಸಾರ್ವಜನಿಕ ಸಮಾರಂಭದಲ್ಲಿ ಭಾಷಣ ಮಾಡಲಿದ್ದಾರೆ.