ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭ ಮೇಳಕ್ಕೆ ಭೇಟಿ ನೀಡುವರು. ಕುಂಭದಲ್ಲಿ ಅವರು ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಸಚಿವಾಲಯ ಆಯೋಜಿಸಿದ ಸ್ವಚ್ಚ ಕುಂಭ ಸ್ವಚ್ಚ ಆಭಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಪ್ರಧಾನಮಂತ್ರಿ ಅವರು ಸ್ವಚ್ಚ ಕುಂಭ ಸ್ವಚ್ಚ ಆಭಾರ ಪ್ರಶಸ್ತಿಗಳನ್ನು ಸಫಾಯಿ ಕರ್ಮಚಾರಿಗಳಿಗೆ, ಸ್ವಚ್ಚಾಗ್ರಹಿಗಳಿಗೆ , ಪೊಲೀಸ್ ಸಿಬ್ಬಂದಿಗಳಿಗೆ, ಮತ್ತು ನಾವಿಕರಿಗೆ ವಿತರಿಸುವರು. ಅಲ್ಲಿ ಸ್ವಚ್ಚ ಸೇವಾ ಸಮ್ಮಾನ್ ಪ್ರಯೋಜನಗಳ ಪ್ಯಾಕೇಜಿನ ಡಿಜಿಟಲ್ ಘೋಷಣೆಯೂ ಇರಲಿದೆ.
ಬಳಿಕ ಪ್ರಧಾನಮಂತ್ರಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುವರು.
ಪ್ರಧಾನಮಂತ್ರಿ ಅವರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವರು ಅವರು ಪ್ರಯಾಗ್ ರಾಜ್ ನ ಸಫಾಯಿ ಕರ್ಮಾಚಾರಿಗಳ ಜೊತೆ ಸಂವಾದ ನಡೆಸುವರು.
ಈ ವರ್ಷ ಪ್ರಯಾಗ್ ರಾಜ್ ನಲ್ಲಿ ಆಯೋಜಿಸಲಾದ ಕುಂಭದಲ್ಲಿ ಸ್ವಚ್ಚತೆ ಮತ್ತು ಸ್ವಚ್ಚ ಭಾರತ್ ಉಪಕ್ರಮಗಳಿಗೆ ಅಭೂತಪೂರ್ವ ಆದ್ಯತೆ ನೀಡಲಾಗಿತ್ತು. ಸ್ವಚ್ಚ ಕುಂಭವನ್ನು ಖಾತ್ರಿಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿದವರನ್ನು ಪ್ರಧಾನಮಂತ್ರಿ ಅವರು ಸ್ವಚ್ಚ ಕುಂಭ ಸ್ವಚ್ಚ ಆಭಾರ್ ಪ್ರಶಸ್ತಿಗಳನ್ನು ನೀಡಿ ಗೌರವಿಸುವರು.