ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ 8 ರಂದು ರಾಜಸ್ತಾನದ ಜುಂಜುನುಗೆ ಭೇಟಿ ನೀಡಲಿದ್ದಾರೆ.
ಹೆಣ್ಣು ಮಕ್ಕಳನ್ನು ರಕ್ಷಿಸುವ ಮತ್ತು ಅವರಿಗೆ ಶಿಕ್ಷಣ ಒದಗಿಸುವ ಸರಕಾರದ ಉಪಕ್ರಮಕ್ಕೆ ಶಕ್ತಿ ತುಂಬಲು ಪ್ರಧಾನ ಮಂತ್ರಿ ಅವರು ರಾಷ್ಟ್ರ ವ್ಯಾಪ್ತಿ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮ ( ಬಿ.ಬಿ.ಬಿ.ಪಿ.) ಈಗ 161 ಜಿಲ್ಲೆಗಳಲ್ಲಿ ಇದ್ದದ್ದು ಇನ್ನು ದೇಶಾದ್ಯಂತ 640 ಜಿಲ್ಲೆಗಳಿಗೆ ವಿಸ್ತರಣೆಯಾಗಲಿದೆ.
ಪ್ರಧಾನ ಮಂತ್ರಿಯವರು ಯೋಜನೆಯ ಫಲಾನುಭವಿ ತಾಯಂದಿರು ಮತ್ತು ಹೆಣ್ಣು ಮಕ್ಕಳ ಜತೆ ಸಂವಾದ ನಡೆಸುವರು. ಅವರು ಬೇಟಿ ಬಚಾವೋ ಬೇಟಿ ಪಡಾವೋ ಆಂದೋಲನದಲ್ಲಿ ಉತ್ತಮ ಸಾಧನೆ ಮಾಡಿದ ಜಿಲ್ಲೆಗಳಿಗೆ ಪ್ರಮಾಣಪತ್ರ ವಿತರಿಸುವರು. ಇನ್ನೊಂದು ಗಮನಾರ್ಹ ಕ್ರಮವಾಗಿ , ರಾಷ್ಟ್ರೀಯ ಪೋಷಣೆ ಕಾರ್ಯಕ್ರಮವನ್ನು ಇದರಲ್ಲಿ ಕಾರ್ಯಾರಂಭಗೊಳಿಸಲಾಗುವುದು.
ಪ್ರಧಾನ ಮಂತ್ರಿಯವರು ಎನ್.ಎನ್.ಎಂ. ರಾಷ್ಟ್ರವ್ಯಾಪ್ತಿಯ ಕಾರ್ಯಕ್ರಮಕ್ಕೆ ಜುಂಜುನುವಿನಲ್ಲಿ ಚಾಲನೆ ನೀಡುವರು. ಅವರು ಎನ್.ಎನ್.ಎಂ-ಐ.ಸಿ.ಡಿ.ಎಸ್. ಸಮಾನ ಅಪ್ಲಿಕೇಷನ್ ಸಾಪ್ಟವೇರ್ ಗೂ ಇದೇ ಸಂಧರ್ಭ ಚಾಲನೆ ನೀಡುವರು. ಈ ಆಂದೋಲನ ನ್ಯೂನ ಪೋಷಣೆ ಮತ್ತು ಜನನ ಸಂಧರ್ಭದಲ್ಲಿ ಕಡಿಮೆ ತೂಕದ ಶಿಶುಗಳ ಜನನ , ಮಕ್ಕಳಲ್ಲಿ, ಮಹಿಳೆಯರಲ್ಲಿ ಮತ್ತು ಹದಿಹರೆಯದವರಲ್ಲಿ ಅನೀಮಿಯಾವನ್ನು ಕಡಿಮೆ ಮಾಡಲಿದೆ ಮತ್ತು ಮಕ್ಕಳಲ್ಲಿ ಬೆಳವಣಿಗೆಯನ್ನು ಕುಂಠಿತ ಮಾಡುವ ಸಾಧ್ಯತೆಗಳನ್ನು ತಗ್ಗಿಸಲಿದೆ.