ಪ್ರಧಾನಮಂತ್ರಿ ಶ್ರಿ ನರೇಂದ್ರ ಮೋದಿ ಅವರು ಅಕ್ಟೋಬರ್ 09ರಂದು ಸಾಂಪ್ಲಾ, ರೊಹ್ಟಾಕಿಗೆ ಭೇಟಿ ನೀಡಲಿದ್ದಾರೆ
ಅವರು ದೀನಬಂಧು ಸರ್ ಛೋಟು ರಾಮ್ ಅವರ ಪುತ್ಥಳಿ ಅನಾವರಣಗೊಳಿಸಲಿದ್ದಾರೆ. ಸರ್ ಛೋಟು ರಾಮ್ ಅವರು ಹಿಂದುಳಿದವರ ಮತ್ತು ದೌರ್ಜನ್ಯಕ್ಕೊಳಗಾದವರ ವಿಮೋಚನೆಗಾಗಿ ಹಾಗೂ ರೈತರ ಕಲ್ಯಾಣಕ್ಕಾಗಿ ಅವಿರತ ಶ್ರಮಿಸಿದ ಪ್ರಮುಖ ನಾಯಕರಾಗಿದ್ದಾರೆ. ಅವರು ಮಾಡಿದ ವಿದ್ಯಾಭ್ಯಾಸ ಕ್ಷೇತ್ರದ ಹಾಗೂ ಸಾಮಾಜಿಕ ಕಾಳಜಿಯ ಕೆಲಸಗಳಿಗಾಗಿ ಕೂಡಾ ಅವರು ಬಹಳ ಪ್ರಸಿದ್ಧರಾಗಿದ್ದಾರೆ.
ಸೋನೆಪಟ್ ನಲ್ಲಿ ರೈಲು ಬಂಡಿಗಳ ಪುನರ್ನಿರ್ಮಾಣ ಕಾರ್ಖಾನೆಗೆ (ರೈಲ್ ಕೋಚ್ ರಿಫರ್ಬಿಷಿಂಗ್ ಕಾರ್ಖಾನಾ) ಅಡಿಗಲ್ಲು ಹಾಕುವ ನಿಮಿತ್ತ ಫಲಕವನ್ನು ಅನಾವರಣಗೊಳಿಸಲಿದ್ದಾರೆ. ಈ ಕಾರ್ಖಾನೆ ಪೂರ್ಣಗೊಂಡಾಗ, ಉತ್ತರ ವಲಯದಲ್ಲಿ ರೈಲು ಬಂಡಿಗಳ ಬೃಹತ್ ದುರಸ್ಥಿ ಮತ್ತು ನಿರ್ವಹಣಾ ತಾಣವಾಗಲಿದೆ. ಈ ಕಾರ್ಖಾನೆ ನಿರ್ಮಾಣದಲ್ಲಿ ಮೋಡ್ಯುಲಾರ್ ಮತ್ತು ಪ್ರಿಫ್ಯಾಬ್ರಿಕೇಟೆಡ್ ನಿರ್ಮಾಣ ತಂತ್ರಜ್ಞಾನಗಳು, ಅಧುನಿಕ ಯಂತ್ರಗಳು ಹಾಗೂ ಪರಿಸರ ಸ್ನೇಹಿ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.