ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 30, 2018ರಂದು ಗುಜರಾತಿಗೆ
ಭೇಟಿ ನೀಡಲಿದ್ದಾರೆ.
ಆನಂದ್ ನಲ್ಲಿ ಅಮುಲ್ ನ ಅತ್ಯಾಧುನಿಕ ಚಾಕೊಲೇಟ್ ಘಟಕವೂ ಸೇರಿದಂತೆ ಅಧುನಿಕ ಆಹಾರ
ಸಂಸ್ಕರಣಾ ವ್ಯವಸ್ಥೆಗಳನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ. ಆನಂದ್ ಕೃಷಿ
ವಿಶ್ವವಿದ್ಯಾಲಯದಲ್ಲಿ ಇನ್ಕ್ಯೂಬೇಷನ್ ಸೆಂಟರ್ ಮತ್ತು ಆಹಾರ ಸಂಸ್ಕರಣೆಯ
ಶ್ರೇಷ್ಠತೆಯ ಕೇಂದ್ರಗಳನ್ನು ಹಾಗೂ ಮುಝ್ಕುವ ಗ್ರಾಮದಲ್ಲಿ ಸೌರ ಸಹಕಾರ ಕೇಂದ್ರವನ್ನು
ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ. ಆನಂದ್ ಮತ್ತು ಖತ್ರಾಜ್ ನಲ್ಲಿ ಅಮುಲ್
ಉತ್ಪಾದನಾ ವ್ಯವಸ್ಥೆಗಳ ವಿಸ್ತರಣೆಗೆ ಪ್ರಧಾನಮಂತ್ರಿ ಅವರು ಅಡಿಗಲ್ಲು ಹಾಕಲಿದ್ದಾರೆ.
ನೆರೆದ ಸಭಿಕರನ್ನು ಉದ್ಧೇಶಿಸಿ ಅವರು ಭಾಷಣ ಮಾಡಲಿದ್ದಾರೆ.
ಪ್ರಧಾನಮಂತ್ರಿ ಅವರು ನಂತರ ಅಂಜರಿಗೆ ಪ್ರಯಾಣ ಮಾಡಲಿದ್ದಾರೆ. ಮುಂದ್ರಾ ದ್ರವ
ನೈಸರ್ಗಿಕ ಅನಿಲ ಟರ್ಮಿನಲ್, ಅಂಜರ್ – ಮುಂದ್ರಾ ಕೊಳವೆ ಯೋಜನೆ ಮತ್ತು ಪಲನ್ಪುರ್ –
ಪಾಲಿ – ಬರ್ಮೆರ್ ಕೊಳವೆ ಯೋಜನೆಗಳನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ.
ಸಭಿಕರನ್ನು ಉದ್ಧೇಶಿಸಿ ಅವರು ಭಾಷಣ ಮಾಡಲಿದ್ದಾರೆ.
ಆನಂತರ ಪ್ರಧಾನಮಂತ್ರಿ ಅವರು ರಾಜ್ಕೋಟ್ ಗೆ ಭೇಟಿನೀಡಲಿದ್ದಾರೆ. ಮಹಾತ್ಮಾ ಗಾಂಧಿ
ಮ್ಯೂಸಿಯಂ ಉದ್ಘಾಟಿಸಲಿದ್ದಾರೆ. ಮಹಾತ್ಮ ಗಾಂಧಿಯವರ ಬಾಲ್ಯದ ಅವಿಭಾಜ್ಯ ಅಂಗವಾದ
ರಾಜ್ಕೋಟಿನ ಆಲ್ಫ್ರೆಡ್ ಪ್ರೌಢಶಾಲೆಯಲ್ಲಿ ಮಹಾತ್ಮಾ ಗಾಂಧಿ ಮ್ಯೂಸಿಯಂ
ನಿರ್ಮಿಸಲಾಗಿದೆ. ಗಾಂಧಿವಾದದ ಸಂಸ್ಕೃತಿ, ಮೌಲ್ಯಗಳು ಮತ್ತು ತತ್ವಗಳ ಅರಿವು
ಪ್ರಚಾರಮಾಡಲು ಸಹಾಯಮಾಡುತ್ತದೆ. ಪ್ರಧಾನಮಂತ್ರಿ ಅವರು ಸಾರ್ವಜನಿಕ ವಸತಿ ಯೋಜನೆಯಡಿ
ನಿರ್ಮಿಸಿದ 624 ವಸತಿಗಳನ್ನು ಉದ್ಘಾಟನೆಯ ಸಂಕೇತವಾಗಿ ಫಲಕದ ಅನಾವರಣ ಮಾಡಲಿದ್ದಾರೆ.
ಹಾಗೂ 240 ಫಲಾನುಭವಿಗಳ ಇ-ಗೃಹಪ್ರವೇಶಕ್ಕೂ ಅವರು ಸಾಕ್ಷಿಯಾಗಲಿದ್ದಾರೆ.
ನವದೆಹಲಿಗೆ ತೆರಳುವ ಮುನ್ನ ಪ್ರಧಾನಮಂತ್ರಿ ಅವರು ಮಹಾತ್ಮಾ ಗಾಂಧಿ ಮ್ಯೂಸಿಯಂಗೂ ಭೇಟಿ
ನೀಡಲಿದ್ದಾರೆ.