ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2017ರ ಅಕ್ಟೋಬರ್ 14ರಂದು ಬಿಹಾರಕ್ಕೆ ಭೇಟಿ ನೀಡಲಿದ್ದಾರೆ.
ಪಾಟ್ನಾ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ಭಾಷಣ ಮಾಡಲಿದ್ದಾರೆ.
ಮೊಕಾಮಾದಲ್ಲಿ ಪ್ರಧಾನಮಂತ್ರಿಯವರು ನಮಾಮಿ ಗಂಗೆ ಕಾರ್ಯಕ್ರಮದಡಿಯಲ್ಲಿ ನಾಲ್ಕು ಒಳಚರಂಡಿ ಯೋಜನೆಗಳಿಗೆ ಮತ್ತು ನಾಲ್ಕು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳ ಒಟ್ಟು ವೆಚ್ಚ 3700 ಕೋಟಿ ರೂಪಾಯಿಗಳಾಗಿವೆ. ಅಲ್ಲಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ನಾಲ್ಕು ಒಳಚರಂಡಿ ಯೋಜನೆಗಳಲ್ಲಿ ಬೇವೂರ್ ತ್ಯಾಜ್ಯ ಜಲ ಶುದ್ಧೀಕರಣ ಘಟಕ, ಬೇವೂರಿನಲ್ಲಿ ಒಳಚರಂಡಿ ಜಾಲ ಸೇರಿದಂತೆ ಒಳಚರಂಡಿ ವ್ಯವಸ್ಥೆ, ಕರ್ಮಲಿಚಕ್ ತ್ಯಾಜ್ಯ ಜಲ ಸಂಸ್ಕರಣಾ ಘಟಕ ಮತ್ತು ಎಸ್.ಟಿ.ಪಿ. ಮತ್ತು ಸೈದ್ ಪುರದ ಒಳಚರಂಡಿ ಜಾಲವೂ ಸೇರಿದೆ. ಈ ಯೋಜನೆಗಳು ಒಟ್ಟಾರೆಯಾಗಿ 120 ಎಂ.ಎಲ್.ಡಿ. ಸಾಮರ್ಥ್ಯದ ಹೊಸ ಎಸ್.ಟಿ.ಪಿ. ರೂಪಿಸಲಿದೆ ಮತ್ತು ಹಾಲಿ ಬೇವೂರಿನ 20 ಎಂ.ಎಲ್.ಡಿ.ಯನ್ನು ಮೇಲ್ದರ್ಜೆಗೇರಿಸಲಿದೆ.
ಶಂಕುಸ್ಥಾಪನೆ ನೆರವೇರಲಿರುವ ನಾಲ್ಕು ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಈ ಕೆಳಕಂಡವುಗಳನ್ನು ಒಳಗೊಂಡಿವೆ:
· ಔಂತ – ಸಿಮರಿಯಾ ವಿಭಾಗದ ರಾ.ಹೆ 31ರಲ್ಲಿ ನಾಲ್ಕು ಪಥ ಮತ್ತು ಷಟ್ ಪಥದ ಗಂಗಾ ಸೇತು ನಿರ್ಮಾಣ.
· ರಾ.ಹೆ.. 31ರ ಭಕ್ತಿಯಾಪುರ್ – ಮೋಕಾಮಾ ವಿಭಾಗದಲ್ಲಿ ಚತುಷ್ಪಥ ನಿರ್ಮಾಣ
· ರಾ.ಹೆ.107ರ ಮಹೇಶ್ಕುಂತ್ – ಸಹಸ್ರಾ – ಪುರ್ನಿಯಾ ವಿಭಾಗದಲ್ಲಿ ದ್ವಿಪಥ ನಿರ್ಮಾಣ.
· ರಾ.ಹೆ.82ರ ಬಿಹಾರ್ ಷರೀಫ್ – ಬರ್ಬಿಗಾ – ಮೋಕಾಮಾ ವಿಭಾಗದಲ್ಲಿ ದ್ವಿಪಥ ನಿರ್ಮಾಣ.