ಅಮೇಥಿಗೆ ಮತ್ತು ಆ ವಲಯಕ್ಕೆ ಹಲವು ಅಭಿವೃದ್ದಿ ಯೋಜನೆಗಳ ಅನಾವರಣ
 
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ , 2019 ರ ಮಾರ್ಚ್ 3 ರಂದು ಉತ್ತರಪ್ರದೇಶದ ಅಮೇಥಿಗೆ ಭೇಟಿ ನೀಡಲಿದ್ದಾರೆ.
 
ಅಮೇಥಿಯ ಕೌಹಾರ್ ನಲ್ಲಿ ಪ್ರಧಾನಮಂತ್ರಿ ಅವರು ಇಂಡೋ-ರಶ್ಯಾ ರೈಫಲ್ಸ್ ಪ್ರೈ. ಲಿಮಿಟೆಡ್ ಸಂಸ್ಥೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವರು.
 
ಇಂಡೋ ರಶ್ಯನ್ ರೈಫಲ್ಸ್ ಪ್ರೈ. ಲಿಮಿಟೆಡ್ ಸಂಸ್ಥೆಯು ಭಾರತದ ಯುದ್ದೋಪಕರಣಗಳ ಕಾರ್ಖಾನೆ ಮತ್ತು ರಶ್ಯನ್ ಸಂಸ್ಥೆಯ ಜಂಟಿ ಸಹಯೋಗದ ಉದ್ಯಮವಾಗಿದ್ದು, ಭಾರತ ಮತ್ತು ರಶ್ಯನ್ ಸಹಕಾರದಲ್ಲಿ ಒಂದು ಮೈಲಿಗಲ್ಲಾಗಿದೆ.
 
ಕೊರ್ವಾ ಯುದ್ದೋಪಕರಣಗಳ ಕಾರ್ಖಾನೆಯಲ್ಲಿ ಅತ್ಯಾಧುನಿಕ ಸರಣಿಯ ಕಲಾಶ್ನಿಕೋವ್  ರೈಫಲ್ ಗಳನ್ನು ತಯಾರಿಸಲಾಗುತ್ತದೆ.
 
ಮೇಕ್ ಇನ್ ಇಂಡಿಯಾಕ್ಕೆ ಒಂದು ಹೊಳೆಯುವ ಉದಾಹರಣೆಯಾಗಿರುವ ಈ ಜಂಟಿ ಸಹಯೋಗದ ಉದ್ಯಮ ದೇಶದ ಸಶಸ್ತ್ರ ಪಡೆಗಳನ್ನು ಬೆಂಬಲಿಸುವುದಲ್ಲದೆ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುತ್ತದೆ. ಈ ಕಾರ್ಖಾನೆಯು ಅಮೇಥಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ . ಈ ಜಂಟಿ ಉದ್ಯಮವು ಉತ್ತರಪ್ರದೇಶ ರಕ್ಷಣಾ ಕಾರಿಡಾರ್ ಯೋಜನೆಗೆ ಭಾರೀ ಉತ್ತೇಜನ ಕೊಡಲಿದೆ.
 
ಪ್ರಧಾನಮಂತ್ರಿ ಅವರು ಹಲವು ಅಭಿವೃದ್ದಿ ಯೋಜನೆಗಳನ್ನು ಅನಾವರಣಗೊಳಿಸುವರು. ಇವು ವಿದ್ಯುತ್ ಉತ್ಪಾದನೆ, ಶಿಕ್ಷಣ, ಆರೋಗ್ಯ ಮತ್ತು ಉತ್ಪಾದನಾ ವಲಯಕ್ಕೆ ಸೇರಿದವುಗಳಾಗಿವೆ. ಇವು ಅಮೇಥಿ ವಲಯ ಮತ್ತು ಉತ್ತರಪ್ರದೇಶಕ್ಕೆ ನೇರ ಲಾಭ ತರಲಿವೆ.
 
ಪ್ರಧಾನಮಂತ್ರಿ ಅವರು  ಕೌಹಾರ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವರು.
 
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Indian startups raise $1.65 bn in February, median valuation at $83.2 mn

Media Coverage

Indian startups raise $1.65 bn in February, median valuation at $83.2 mn
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 4 ಮಾರ್ಚ್ 2025
March 04, 2025

Appreciation for PM Modi’s Leadership: Driving Self-Reliance and Resilience