ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಬೆಳಗ್ಗೆ ವಾರಾಣಸಿಯಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮೆಕ್ರಾನ್ ಅವರನ್ನು ಬರಮಾಡಿಕೊಳ್ಳಲಿದ್ದಾರೆ.
ಇಬ್ಬರೂ ನಾಯಕರು, ಮಿರ್ಜಾಪುರಕ್ಕೆ ತೆರಳಲಿದ್ದಾರೆ, ವಾರಾಣಸಿಗೆ ಮರಳುವ ಮುನ್ನ ಅಲ್ಲಿ ಅವರು ಸೌರ ವಿದ್ಯುತ್ ಘಟಕವನ್ನು ಉದ್ಘಾಟಿಸಲಿದ್ದಾರೆ.
ವಾರಾಣಸಿಯಲ್ಲಿ ಇಬ್ಬರೂ ನಾಯಕರು ದೀನ್ ದಯಾಳ್ ಹಸ್ತಕಲಾ ಸಂಕುಲಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಕರಕುಶಲಕರ್ಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಅವರ ಕಲೆಯ ನೇರ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಲಿದ್ದಾರೆ.
ಪ್ರಧಾನಮಂತ್ರಿ ಮೋದಿ ಮತ್ತು ಅಧ್ಯಕ್ಷ ಮೆಕ್ರಾನ್ ಅವರು ಬಳಿಕ ವಾರಾಣಸಿಯ ಪ್ರಸಿದ್ಧ ಅಸ್ಸಿ ಘಾಟ್ ಗೆ ಆಗಮಿಸಲಿದ್ದಾರೆ, ಅಲ್ಲಿ ಅವರು ದೋಣಿ ಏರಿ ಗಂಗಾ ಘಾಟುಗಳುದ್ದಕ್ಕೂ ಪ್ರಯಾಣಿಸಲಿದ್ದು, ಐತಿಹಾಸಿಕ ದಶಾಶ್ವಮೇಧ ಘಾಟ್ ನಲ್ಲಿ ಪರಿಸಮಾಪ್ತಿಗೊಳಿಸಲಿದ್ದಾರೆ.
ಫ್ರೆಂಚ್ ಅಧ್ಯಕ್ಷರ ಗೌರವಾರ್ಥ ಪ್ರಧಾನಿ ಮೋದಿ ಅವರು ಭೋಜನಕೂಟ ಏರ್ಪಡಿಸಿದ್ದಾರೆ.
ಮಧ್ಯಾಹ್ನ ಪ್ರಧಾನಮಂತ್ರಿಯವರು ವಾರಾಣಸಿಯ ಮದುದಿಹ್ ರೈಲು ನಿಲ್ದಾಣದಲ್ಲಿ ವಾರಾಣಸಿ ಮತ್ತು ಪಾಟ್ನಾ ನಡುವಿನ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿರುವ ಅವರು, ವಾರಾಣಸಿಯ ಡಿ.ಎಲ್.ಡಬ್ಲ್ಯು ಮೈದಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.