ಗಾಂಧಿ ಜಯಂತಿಯಂದು ನೈರ್ಮಲ್ಯ ಮತ್ತು ನವೀಕರಿಸಬಹುದಾದ ಇಂಧನ ಸಂಬಂಧಿತ ಕಾರ್ಯಕ್ರಮಗಳು ಪ್ರಧಾನಮಂತ್ರಿ ಅವರ ದಿನಚರಿಯ ಪ್ರಧಾನಭಾಗಗಳಾಗಲಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 02, 2018ರಂದು, ಮಹಾತ್ಮಾ ಅವರ 150ನೇ ಜಯಂತಿಯ ವಾರ್ಷಿಕಾಚರಣೆಯ ಉದ್ಘಾಟನೆಯನ್ನು ಸಂಕೇತಿಸುವ ದಿನ, ರಾಜ್ಘಾಟ್ ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಪುಷ್ಪಾಂಜಲಿ ಸಲ್ಲಿಸಲಿದ್ದಾರೆ. ಪ್ರಧಾನಮಂತ್ರಿ ಅವರು ವಿಜಯ್ ಘಾಟ್ ಗೂ ಭೇಟಿನೀಡಿ ಮಾಜಿ ಪ್ರಧಾನಮಂತ್ರಿ ದಿ. ಲಾಲ್ ಬಹಾದುರ್ ಶಾಸ್ತ್ರಿ ಅವರಿಗೆ ಪುಷ್ಪಾಂಜಲಿ ಸಲ್ಲಿಸಲಿದ್ದಾರೆ.
ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಮಹಾತ್ಮ ಗಾಂಧಿ ಅಂತರರಾಷ್ಟ್ರೀಯ ನೈರ್ಮಲ್ಯ ಸಮಾವೇಶ (ಎಮ್.ಜಿ.ಐ.ಎಸ್.ಸಿ) ಯ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಎಮ್.ಜಿ.ಐ.ಎಸ್.ಸಿ.ಯು ನಾಲ್ಕು ದಿನಗಳ ಜಾಗತಿಕ ಸಮಾವೇಶವಾಗಿದ್ದು, ವಾಶ್ (ನೀರು, ನೈರ್ಮಲ್ಯ ಮತ್ತು ಆರೋಗ್ಯಕರ) ವಿಷಯದಲ್ಲಿ ಜಾಗತಿಕವಾಗಿ ವಿಶ್ವದೆಲ್ಲಡೆಯ ನೈರ್ಮಲ್ಯ ಸಚಿವರುಗಳನ್ನು ಮತ್ತು ಇತರ ನಾಯಕರನ್ನು ಒಟ್ಟು ಸೇರಿಸುತ್ತದೆ.
ಈ ಸಮಾರಂಭದ ಕಿರು ಡಿಜಿಟಲ್ ವಸ್ತುಪ್ರದರ್ಶನಕ್ಕೂ ಪ್ರಧಾನಮಂತ್ರಿ ಭೇಟಿನೀಡಲಿದ್ದಾರೆ. ವಿಶ್ವ ಸಂಸ್ಥೆಗಳ ಮಹಾ ಕಾರ್ಯದರ್ಶಿ ಶ್ರೀ ಅಂಟನಿಯೊ ಗುಟೆರ್ರೆಸ್ ಅವರೂ ಪ್ರಧಾನಮಂತ್ರಿ ಅವರ ಜೊತೆ ಇರುತ್ತಾರೆ. ಮಹಾತ್ಮಾ ಗಾಂಧಿ ಅವರ ಅತ್ಯಂತ ಪ್ರೀತಿಯ “ ವೈಶ್ಣವ್ ಜನ್ “ ಆಧಾರಿತ ಸಮ್ರಿಶ್ರಿತ ಸಿಡಿ ಮತ್ತು ಮಹಾತ್ಮಾ ಗಾಂಧಿ ಅವರ ಸ್ಮರಣಾರ್ಥ ಅಂಚೆ ಚೀಟಿಗಳನ್ನು ವೇದಿಕೆಯ ಗಣ್ಯರು ಉದ್ಘಾಟನೆ ಮಾಡಲಿದ್ದಾರೆ. ಈ ಸಂದ್ರಭದಲ್ಲಿ ಸ್ವಚ್ಛಭಾರತ್ ಪ್ರಶಸ್ತಿಗಳನ್ನೂ ವಿತರಿಸಲಿದ್ದಾರೆ. ಸಭಿಕರನ್ನುದ್ಧೇಶಿಸಿ ಪ್ರಧಾನಮಂತ್ರಿ ಅವರು ಭಾಷಣ ಮಾಡಲಿದ್ದಾರೆ.
ದಿನದ ಕೊನೆಯಲ್ಲಿ ಪ್ರಧಾನಮಂತ್ರಿ ಅವರು ವಿಜ್ಞಾನ ಭವನದಲ್ಲಿ ಅಂತರರಾಷ್ಟ್ರೀಯ ಸೌರಶಕ್ತಿ ಮೈತ್ರಿಯ ಮೊದಲ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅದೇ ಸಮಾರಂಭವು 2ನೇ ಐ.ಒ.ಆರ್.ಎ. ನವೀಕರಿಸಬಹುದಾದ ಇಂಧನಗಳ ಸಚಿವರ ಸಭೆ ಹಾಗೂ 2ನೇ ಜಾಗತಿಕ ಆರ್.ಇ – ಇನ್ವೆಸ್ಟ್ (ನವೀಕರಿಸಬಹುದಾದ ಇಂಧನಗಳ ಹೂಡಿಕೆದಾರರ ಸಭೆ ಮತ್ತು ಪ್ರದರ್ಶನ ) ಎಂಬ ಎರಡು ಕಾರ್ಯಕ್ರಮಗಳ ಉದ್ಘಾಟನೆಗಳಿಗೂ ಪ್ರತೀಕವಾಗಲಿದೆ. ವಿಶ್ವ ಸಂಸ್ಥೆಗಳ ಮಹಾ ಕಾರ್ಯದರ್ಶಿ ಶ್ರೀ ಅಂಟನಿಯೊ ಗುಟೆರ್ರೆಸ್ ಅವರೂ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಭಿಕರನ್ನುದ್ಧೇಶಿಸಿ ಪ್ರಧಾನಮಂತ್ರಿ ಅವರು ಭಾಷಣ ಮಾಡಲಿದ್ದಾರೆ.