ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಅವರು 2018ರ ಸೆಪ್ಟೆಂಬರ್ 20ರಂದು ನವ ದೆಹಲಿಯ ದ್ವಾರಕಾದಲ್ಲಿ ಭಾರತ ಅಂತಾರಾಷ್ಟ್ರೀಯ ಸಮಾವೇಶ ಮತ್ತು ಪ್ರದರ್ಶನ ಕೇಂದ್ರ (ಐಐಸಿಸಿ)ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಪ್ರಧಾನಮಂತ್ರಿಯವರು ಶಂಕುಸ್ಥಾಪನಾ ಸಮಾರಂಭದಲ್ಲಿ ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ದ್ವಾರಕಾದ ಸೆಕ್ಟರ್ 25ರಲ್ಲಿರುವ ಈ ಕೇಂದ್ರ ವಿಶ್ವದರ್ಜೆಯ ಅತ್ಯಾಧುನಿಕ ವಸ್ತುಪ್ರದರ್ಶನ ಮತ್ತು ಸಮಾವೇಶ ಕೇಂದ್ರವಾಗಿದ್ದು, ಹಣಕಾಸು, ಆತಿಥ್ಯ ಮತ್ತು ರೀಟೈಲ್ ಸೇವೆಗಳ ಸೌಲಭ್ಯ ಒಳಗೊಂಡಿದೆ. ಈ ಯೋಜನೆಯ ಅಂದಾಜು ವೆಚ್ಚ 25,700 ಕೋಟಿ ರೂಪಾಯಿಗಳಾಗಿವೆ.
ಈ ಯೋಜನೆಯನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆಯಡಿಯಲ್ಲಿರುವ ಶೇ.100ರಷ್ಟು ಸರ್ಕಾರಿ ಒಡೆತನದ ಭಾರತ ಅಂತಾರಾಷ್ಟ್ರೀಯ ಸಮಾವೇಶ ಮತ್ತು ವಸ್ತುಪ್ರದರ್ಶನ ಕೇಂದ್ರ ನಿಯಮಿತ ಅನುಷ್ಠಾನಗೊಳಿಸುತ್ತಿದೆ.