ಪ್ರಧಾನಿ ಅವರು ‘ನಾಳೆ ಬೆಳಗ್ಗೆ 9.30ಕ್ಕೆ ನಾನು ಆವಿಷ್ಕಾರ ಮತ್ತು ನವೋದ್ಯಮ ಜಗತ್ತಿನ ಯುವ ಜನರೊಂದಿಗೆ ಸಂವಾದಲ್ಲಿ ಭಾಗಿಯಾಗಲು ಉತ್ಸುಕನಾಗಿದ್ದೇನೆ, ನವೋದ್ಯಮಗಳನ್ನು ಸ್ಥಾಪಿಸಿ ಶ್ರೇಷ್ಠತೆ ಸಾಬೀತುಪಡಿಸಿದ ಯುವ ಆವಿಷ್ಕಾರಿಗಳ ಅನಿಸಿಕೆಗಳನ್ನು ನೇರವಾಗಿ ಆಲಿಸುವ ಉತ್ತಮ ಅವಕಾಶವನ್ನು ಈ ಸಂವಾದ ಒದಗಿಸಿಕೊಡಲಿದೆ’ ಎಂದು ಹೇಳಿದ್ದಾರೆ.
ಭಾರತ ನವೋದ್ಯಮ ಮತ್ತು ಅನ್ವೇಷಣಾ ತಾಣವಾಗಿ ರೂಪುಗೊಂಡಿದೆ. ಭಾರತದ ಯುವಜನತೆ ಚೌಕಟ್ಟಿನಿಂದಾಚೆ ಮತ್ತು ದೂರದೃಷ್ಟಿಯ ಚಿಂತನಾ ಲಹರಿಯಿಂದ ಬೇರೆಯವರಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ನಾಳಿನ ಸಂವಾದದಲ್ಲಿ ಸಂಪೋಷಣಾ ಕೇಂದ್ರಗಳು ಮತ್ತು ಚಿಂತನಾ ಪ್ರಯೋಗಾಲಯ(ಟಿಂಕರಿಂಗ್ ಲ್ಯಾಬ್)ದ ಯುವಜನತೆ ಭಾಗವಹಿಸಲಿದ್ದಾರೆ.
ನಾನು ವಿಶೇಷವಾಗಿ ನಮ್ಮ ಯುವ ಸ್ನೇಹಿತರನ್ನು ನಾಳಿನ ಸಂವಾದದಲ್ಲಿ ಭಾಗವಹಿಸುವಂತೆ ಆಗ್ರಹಿಸುತ್ತೇನೆ. ಇದು ಕಲಿಯಲು, ಬೆಳವಣಿಗೆ ಸಾಧಿಸಲು ಮತ್ತು ಸ್ಪೂರ್ತಿ ಪಡೆಯಲು ಸುವರ್ಣಾವಕಾಶವಾಗಿದೆ. ನೀವು ‘Narendra Modi Mobile App’ ಅಥವಾ @DDNewsLive. ಮೂಲಕ ಭಾಗವಹಿಸಬಹುದು. ನಿಮ್ಮ ಯಾವುದೇ ಸಲಹೆಗಳು ಅಥವಾ ಅಭಿಪ್ರಾಯಗಳಿದ್ದರೆ ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಿ.