ದೇಶದೆಲ್ಲೆಡೆಯ ಐಟಿ ಮತ್ತು ಎಲೆಕ್ಟ್ರಾನಿಕ್ ತಯಾರಿಕಾ ವೃತ್ತಿಪರರೊಂದಿಗೆ ಅಕ್ಟೋಬರ್ 24, 2018ರಂದು “ಮೈ ನಹೀ ಹಮ್ ” ಜಾಲತಾಣ ಮತ್ತು ಆ್ಯಪ್ ಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂವಾದ ನಡೆಸಲಿದ್ದಾರೆ.
“ಸೆಲ್ಫ್4ಸೊಸೈಟಿ” ವಿಷಯದಲ್ಲಿ ಕಾರ್ಯವನಿರ್ವಹಿಸುವ ಜಾಲತಾಣ ಸಾಮಾಜಿಕ ಉದ್ಧೇಶಕ್ಕಾಗಿ ಮತ್ತು ಸಮಾಜ ಸೇವೆಗಾಗಿ ಐಟಿ ವೃತ್ತಿಪರರು ಮತ್ತು ಸಂಸ್ಥೆಗಳು ಮಾಡುತ್ತಿರುವ ಪ್ರಯತ್ನಗಳನ್ನು ಒಂದೇ ವೇದಿಕೆಯಡಿ ತರಲಿದೆ. ಇದರಿಂದ ಸಮಾಜದ ದುರ್ಬಲ ವರ್ಗದವರ ಸೇವೆಗಾಗಿ ತಂತ್ರಜ್ಞಾನದ ಪ್ರಯೋಜನಗಳನ್ನು ಬಳಸಿಕೊಳ್ಳಲು ಜಾಲತಾಣ ಬಹುದೊಡ್ಡ ಮಧ್ಯವರ್ತಿಯಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ. ಇದು ಸಾಮಾಜಿಕ ಪ್ರಯೋಜನಕ್ಕಾಗಿ ಕಾರ್ಯನಿರ್ವಹಿಸಲು ಇಚ್ಛಿಸುವ ಆಸಕ್ತರು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ನಿರೀಕ್ಷೆ ಇದೆ.
ಈ ಸಂದರ್ಭದಲ್ಲಿ ಕೈಗಾರಿಕಾ ಕ್ಷೇತ್ರದ ಪ್ರಮುಖ ನಾಯಕರನ್ನು ಪ್ರಧಾನಮಂತ್ರಿ ಅವರು ಭೇಟಿ ಮಾಡಲಿದ್ದಾರೆ. ಐಟಿ ವೃತ್ತಿಪರರುಗಳು ಮತ್ತು ಉದ್ಯೋಗಿಗಳು ಹಾಗೂ ಎಲೆಕ್ಟ್ರಾನಿಕ್ ಉತ್ಪಾದನಾ ಸಂಸ್ಥೆಗಳನ್ನು ಒಳಗೊಂಡ ಸಭಿಕರನ್ನುದ್ಧೇಶಿಸಿ ಪ್ರಧಾನಮಂತ್ರಿ ಅವರು ಭಾಷಣ ಮಾಡಲಿದ್ದಾರೆ. ಟೌನ್ ಹಾಲ್ ಶೈಲಿಯ ಮಾದರಿಯಲ್ಲಿ ಸಭಿಕರೊಂದಿಗೆ ಅವರು ಮಾತುಕತೆ ನಡೆಸಲಿದ್ದಾರೆ. ವೀಡಿಯೊ ಸಂವಾದದ ಮೂಲಕ ಭಾರತದೆಲ್ಲೆಡೆಯ 100 ಸ್ಥಳಗಳಿಂದ ಐಟಿ ಮತ್ತು ಎಲೆಕ್ಟ್ರಾನಿಕ್ ತಯಾರಿಕಾ ವೃತ್ತಿಪರರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.