ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ರ ಫೆಬ್ರವರಿ 27 ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಭಾರತೀಯ ಅಟಿಕೆ ಮೇಳ ಉದ್ಘಾಟಿಸಲಿದ್ದಾರೆ.

ಅಟಿಕೆಗಳು ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಮಹತ್ವದ ಪಾತ್ರ ವಹಿಸಲಿದ್ದು, ಮನಸ್ಸಿನ ಚಟುವಟಿಕೆಗಳನ್ನು ಸುಧಾರಿಸುತ್ತದೆ ಮತ್ತು ಮಕ್ಕಳಲ್ಲಿ ಅರಿವಿನ ಕೌಶಲವನ್ನು ವೃದ್ಧಿಸುತ್ತವೆ. 2020ರ ಆಗಸ್ಟ್ ನಲ್ಲಿ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಅಟಿಕೆಗಳು ಚಟುವಟಿಕೆಗಳು ಮತ್ತು ನಿರೀಕ್ಷೆಗಳ ಸಾಕಾರದ ಹೋರಾಟವನ್ನು ವೃದ್ಧಿಸುತ್ತದೆ. ಮಗುವಿನ ಸರ್ವಾಂಗೀಣ ಬೆಳವಣೆಗೆಯಲ್ಲಿ ಅಟಿಕೆಗಳ ಮಹತ್ವವನ್ನು ಮನಗಂಡಿರುವ ಪ್ರಧಾನಮಂತ್ರಿ ಅವರು, ಭಾರತದಲ್ಲಿ ಅಟಿಕೆಗಳ ಉತ್ಪಾದನೆಯನ್ನು ಹೆಚ್ಚಿಸಲು ಪುಷ್ಟಿ ನೀಡಿದ್ಧಾರೆ. ಪ್ರಧಾನಮಂತ್ರಿ ಅವರ ಈ ದೃಷ್ಟಿಕೋನದ ಅನ್ವಯ 2021 ರ ಭಾರತೀಯ ಅಟಿಕೆ ಮೇಳ ಆಯೋಜಿಸಲಾಗಿದೆ.

ಮೇಳದ ಕುರಿತು

2021 ರ ಫೆಬ್ರವರಿ 27 ರಿಂದ ಮಾರ್ಚ್ 2 ರವರೆಗೆ ಈ ಮೇಳ ನಡೆಯಲಿದೆ. ಅಟಿಕೆಗಳ ಖರೀದಿದಾರರು, ಮಾರಾಟಗಾರರು, ವಿದ್ಯಾರ್ಥಿಗಳು, ಶಿಕ್ಷಕರು, ವಿನ್ಯಾಸಗಾರರು ಸೇರಿದಂತೆ ಎಲ್ಲಾ ಪಾಲುದಾರರನ್ನು ಒಂದೆಡೆ ಸೇರಿಸುವುದು ಈ ಮೇಳದ ಉದ್ದೇಶವಾಗಿದೆ. ದೇಶದಲ್ಲಿ ಉದ್ಯಮದ ಒಟ್ಟಾರೆ ಅಭಿವೃದ್ಧಿಗೆ ಸುಸ್ಥಿರ ಸಂಪರ್ಕಗಳನ್ನು ದೊರಕಿಸಿಕೊಡಲು ಮತ್ತು ಸಂವಾದವನ್ನು ಪ್ರೋತ್ಸಾಹಿಸಲು ಈ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ವೇದಿಕೆಯ ಮೂಲಕ ಈ ವಲಯದಲ್ಲಿ ಹೂಡಿಕೆಗಳನ್ನು ಆಕರ್ಷಿಸುವ ಮತ್ತು ರಫ್ತು ಉತ್ತೇಜಿಸುವ ಮೂಲಕ ಅಟಿಕೆಗಳನ್ನು ತಯಾರಿಸುವ, ಸಂಗ್ರಹಣೆ ವಲಯದಲ್ಲಿ ಭಾರತವನ್ನು ಮುಂದಿನ ಜಾಗತಿಕ ಕೇಂದ್ರವನ್ನಾಗಿ ಮಾಡುವ ಕುರಿತ ಚರ್ಚೆಗಾಗಿ ಸರ್ಕಾರ ಮತ್ತು ಕೈಗಾರಿಕೆಗಳನ್ನು ಒಂದೆಡೆ ತರುತ್ತಿದೆ.

30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 1000 ಕ್ಕೂ ಹೆಚ್ಚು ಪ್ರದರ್ಶಕರು ತಮ್ಮ ಉತ್ಪನ್ನಗಳನ್ನು ಇ ಕಾಮರ್ಸ್ ನ ವಲಯದ ಮೂಲಕ ಪ್ರದರ್ಶಿಸಲಿದ್ದಾರೆ. ಇದು ಭಾರತೀಯ ಸಾಂಪ್ರದಾಯಿಕ ಅಟಿಕೆಗಳು, ಎಲೆಕ್ಟ್ರಾನಿಕ್ ಅಟಿಕೆಗಳು, ಬೆಲೆ ಬಾಳುವ, ಒಗಟು, ಆಟಗಳನ್ನೊಳಗೊಂಡ ಆಧುನಿಕ ಅಟಿಕೆಗಳನ್ನು ಪ್ರದರ್ಶಿಸಲಾಗುತ್ತಿದೆ. ಅಟಿಕೆಗಳ ವಿನ್ಯಾಸ, ಉತ್ಪಾದನೆಯಲ್ಲಿ ನಿರೂಪಿತವಾಗಿರುವ ಸಾಮರ್ಥ್ಯ, ಭಾರತೀಯ ಮತ್ತು ಅಂತಾರಾಷ್ಟ್ರೀಯ ಪರಿಣತರೊಂದಿಗೆ ಹಲವಾರು ವೆಬಿನಾರ್ ಗಳು, ತಜ್ಞರ ಜತೆ ಚರ್ಚಾಗೋಷ್ಠಿಗಳನ್ನು ಸಹ ಆಯೋಜಿಸಲಾಗಿದೆ. ಇದು ಚಟುವಟಿಕೆಯ ಸಮೃದ್ಧ ವೇದಿಕೆಯಾಗಿದ್ದು, ಅಟಿಕೆ ತಯಾರಿಕೆ, ವಸ್ತು ಸಂಗ್ರಹಾಲಯ, ಕಾರ್ಖಾನೆಗಳಿಗೆ ಭೇಟಿ, ಕರಕುಶಲ ಪ್ರದರ್ಶನ ಸೇರಿದಂತೆ ಹಲವಾರು ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'India Delivers': UN Climate Chief Simon Stiell Hails India As A 'Solar Superpower'

Media Coverage

'India Delivers': UN Climate Chief Simon Stiell Hails India As A 'Solar Superpower'
NM on the go

Nm on the go

Always be the first to hear from the PM. Get the App Now!
...
PM Modi condoles loss of lives due to stampede at New Delhi Railway Station
February 16, 2025

The Prime Minister, Shri Narendra Modi has condoled the loss of lives due to stampede at New Delhi Railway Station. Shri Modi also wished a speedy recovery for the injured.

In a X post, the Prime Minister said;

“Distressed by the stampede at New Delhi Railway Station. My thoughts are with all those who have lost their loved ones. I pray that the injured have a speedy recovery. The authorities are assisting all those who have been affected by this stampede.”