ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ನವೆಂಬರ್ 18ರಂದು ಸಂಜೆ 4 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಥಮ ಔಷಧೀಯ ಜಾಗತಿಕ ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ.
ಭಾರತದಲ್ಲಿನ ಔಷಧೀಯ ಉದ್ಯಮದಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಆದ್ಯತೆಗಳನ್ನು ಚರ್ಚಿಸಲು ಮತ್ತು ಕಾರ್ಯತಂತ್ರ ರೂಪಿಸಲು ಸರ್ಕಾರ, ಉದ್ಯಮ, ಶೈಕ್ಷಣಿಕ, ಹೂಡಿಕೆದಾರರು ಮತ್ತು ಸಂಶೋಧಕರ, ಪ್ರಮುಖ ಭಾರತೀಯ ಮತ್ತು ಅಂತಾರಾಷ್ಟ್ರೀಯ ಬಾಧ್ಯಸ್ಥರನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿರುವ ಇದು ಒಂದು ವಿಶಿಷ್ಟ ಉಪಕ್ರಮವಾಗಿದೆ. ಇದು ಭಾರತೀಯ ಔಷಧ ಉದ್ಯಮದಲ್ಲಿನ ಬೃಹತ್ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿರುವ ಅವಕಾಶಗಳನ್ನು ಎತ್ತಿ ತೋರಿಸುತ್ತದೆ.
ಎರಡು ದಿನಗಳ ಶೃಂಗಸಭೆಯಲ್ಲಿ 12 ಅಧಿವೇಶನಗಳಿದ್ದು, 40 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಭಾಷಣಕಾರರು ನಿಯಂತ್ರಣ ಪರಿಸರ, ನಾವಿನ್ಯತೆಯಲ್ಲಿ ಹೂಡಿಕೆ, ಕೈಗಾರಿಕೆ-ಶೈಕ್ಷಣಿಕ ಸಹಯೋಗ ಮತ್ತು ನಾವಿನ್ಯತೆಯ ಮೂಲಸೌಕರ್ಯ ಸೇರಿದಂತೆ ವಿವಿಧ ಶ್ರೇಣಿಯ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.
ಇದು ದೇಶೀಯ ಮತ್ತು ಜಾಗತಿಕ ಔಷಧ ಉದ್ಯಮಗಳ ಪ್ರಮುಖ ಸದಸ್ಯರು, ಮ್ಯಾಸಚೂಸೆಟ್ಸ್ ತಂತ್ರಜ್ಞಾನ ಸಂಸ್ಥೆ, ಜಾನ್ ಹಾಪ್ ಕಿನ್ಸ್ ಸಂಸ್ಥೆ, ಐಐಎಂ ಅಹಮದಾಬಾದ್ ಮತ್ತು ಇತರ ಪ್ರಖ್ಯಾತ ಸಂಸ್ಥೆಗಳ ಅಧಿಕಾರಿಗಳು, ಹೂಡಿಕೆದಾರರು ಮತ್ತು ಸಂಶೋಧಕರ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ.
ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವಿಯ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.