ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ದೆಹಲಿಯ 15 ಜನಪಥ್ ನಲ್ಲಿ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಸಾಮಾಜಿಕ – ಆರ್ಥಿಕ ಪರಿವರ್ತನೆ ಕುರಿತ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರ(ಡಿಎಐಸಿಎಸ್ಇಟಿ)ಕ್ಕೂ ಅವರು ಚಾಲನೆ ನೀಡಲಿದ್ದಾರೆ.
“ನಾಳೆ ಬೆಳಗ್ಗೆ 11 ಗಂಟೆಗೆ, ನಾನು ದೆಹಲಿಯ 15 ಜನಪಥ್ ನಲ್ಲಿ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನು ಉದ್ಘಾಟಿಸಲಿದ್ದೇನೆ. ಈ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸುವ ಅವಕಾಶ ನನಗೆ ಸಿಕ್ಕಿತ್ತು. ಹೀಗಾಗಿ ಈ ಸಂದರ್ಭ ನನಗೆ ಹೆಚ್ಚು ವಿಶೇಷವಾದುದಾಗಿದೆ. ನಮ್ಮ ರಾಷ್ಟ್ರ ರಾಜಧಾನಿಯ ಹೃದಯ ಭಾಗದಲ್ಲಿರುವ ಕೇಂದ್ರ ಡಾ. ಅಂಬೇಡ್ಕರ್ ಅವರಿಗೆ ಸೂಕ್ತ ಗೌರವಾರ್ಪಣೆಯಾಗಿದೆ.
ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವು ಬೌದ್ಧ ಹಾಗೂ ಇಂದಿನ ದಿನದ ವಾಸ್ತುಶಿಲ್ಪದ ಸಮ್ಮಿಲನವಾಗಿದೆ. ಇದರಲ್ಲಿ ವಿಚಾರಗೋಷ್ಠಿ ಹಾಗೂ ಸಮ್ಮೇಳನ ಸಭಾಂಗಣವಿದೆ. ಮೂರು ಸಭಾಂಗಣ ಹಾಗೂ ಶ್ರೀಮಂತ ಡಿಜಿಟಲ್ ಭಂಡಾರದ ವಿಸ್ತೃತ ಗ್ರಂಥಾಲಯವಿದೆ.
ನಾಳೆ ಸಾಮಾಜಿಕ-ಆರ್ಥಿಕ ಪರಿವರ್ತನೆ ಕುರಿತ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರ (ಡಿಎಐಸಿಎಸ್ಇಟಿ)ಕ್ಕೂ ಚಾಲನೆ ನೀಡಲಾಗುತ್ತಿದೆ. ಈ ಸಂಸ್ಥೆಯು ಪ್ರಮುಖ ವಿಷಯಗಳ ಬಗ್ಗೆ ಮತ್ತಷ್ಟು ಚರ್ಚೆಗೆ ದಾರಿ ತೋರಲಿದೆ ಮತ್ತು ಯುವಕರಲ್ಲಿ ಮೂಲ ಚಿಂತನೆಯ ಸಂಶೋಧನೆ ಉತ್ತೇಜಿಸುತ್ತದೆ.” ಎಂದು ಪ್ರಧಾನಿ ತಿಳಿಸಿದ್ದಾರೆ.
At 11 AM tomorrow, I will inaugurate the Dr. Ambedkar International Centre at 15 Janpath, Delhi. This occasion is even more special as I had the opportunity to lay the foundation stone for this centre. In the heart of our national capital, it is a fitting tribute to Dr. Ambedkar. pic.twitter.com/WvXHaVqT3f
— Narendra Modi (@narendramodi) December 6, 2017
The Dr. Ambedkar International Centre is a fusion of Buddhist and present day architecture. It includes seminar as well as conference halls. There are three auditoriums and an extensive library with a rich digital repository. pic.twitter.com/LjZeowlkXV
— Narendra Modi (@narendramodi) December 6, 2017
Tomorrow the Dr. Ambedkar International Centre For Socio-Economic Transformation (DAICSET) will be launched. This institution will show the way and further discussions on vital issues as well as encourage research, original thinking among the youth.
— Narendra Modi (@narendramodi) December 6, 2017