ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವ ದೆಹಲಿಯ ತಿಲಕ್ ಮಾರ್ಗ್ ನಲ್ಲಿ 2018ರ ಜುಲೈ 12ರಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎ.ಎಸ್.ಐ.) ಇಲಾಖೆಯ ನೂತನ ಕೇಂದ್ರ ಕಚೇರಿ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.
ಈ ನೂತನ ಕೇಂದ್ರ ಕಚೇರಿಯ ಕಟ್ಟಡವು ಇಂಧನ ದಕ್ಷತೆಯ ವಿದ್ಯುತ್ ಮತ್ತು ಮಳೆ ನೀರು ಕೊಯ್ಲು ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಜೊತೆಗೆ 1.5 ಲಕ್ಷ ಪುಸ್ತಕ ಹಾಗೂ ಪತ್ರಿಕೆಗಳನ್ನು ಒಳಗೊಂಡ ಕೇಂದ್ರೀಯ ಪುರಾತತ್ವ ಗ್ರಂಥಾಲಯವನ್ನೂ ಒಳಗೊಂಡಿದೆ.