ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯ ಅಂಗವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಏಪ್ರಿಲ್ 13ರಂದು ದೆಹಲಿಯ ಅಲಿಪುರ ರಸ್ತೆಯ 26ರಲ್ಲಿ ಡಾ. ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ.
ಇದೇ ಜಾಗದಲ್ಲಿ ಡಾ. ಅಂಬೇಡ್ಕರ್ ಅವರು 1956ರ ಡಿಸೆಂಬರ್ 6ರಂದು ಮಹಾ ಪರಿನಿರ್ವಾಣ ಹೊಂದಿದ್ದರು.
ಡಾ. ಅಂಬೇಡ್ಕರ್ ಮಹಾ ಪರಿನಿರ್ವಾಣ ಸ್ಥಳವಾದ ಅಲಿಪುರ ರಸ್ತೆಯ ನಂ. 26ನ್ನು ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಪ್ರಧಾನಮಂತ್ರಿಗಳಾಗಿದ್ದಾಗ 2003ರ ಡಿಸೆಂಬರ್ ನಲ್ಲಿ ರಾಷ್ಟ್ರಕ್ಕೆ ಸಮರ್ಪಿಸಿದ್ದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸ್ಮಾರಕಕ್ಕೆ 2016ರ ಮಾರ್ಚ್ 21ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.
ಭಾರತದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಸ್ಮಾರಕಕ್ಕೆ ಪುಸ್ತಕದ ರೂಪ ನೀಡಲಾಗಿದೆ.
ಸ್ಮಾರಕದಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಸ್ಥಿರ ಮಾಧ್ಯಮ, ಕ್ರಿಯಾತ್ಮಕ ಮಾಧ್ಯಮ, ವಾಕ್-ದೃಶ್ಯ ಮತ್ತು ಬಹು ಮಾಧ್ಯಮ ತಂತ್ರಜ್ಞಾನಗಳನ್ನು ವ್ಯಾಪಕವಾಗಿ ಬಳಸುವುದರ ಮೂಲಕ ಡಾ. ಅಂಬೇಡ್ಕರ್ ಅವರ ಜೀವನ ಮತ್ತು ದೇಶಕ್ಕೆ ಅವರು ನೀಡಿದ ಕೊಡುಗೆಯ ಬಗ್ಗೆ ಒಂದು ತಲ್ಲೀನತೆಯ ಅನುಭವವನ್ನು ಸೃಷ್ಟಿಸಲು ಉದ್ದೇಶಿಸಲಾಗಿದೆ.
ಧ್ಯಾನ ಕೊಠಡಿಯನ್ನು ಕೂಡ ಇಲ್ಲಿ ಸೃಷ್ಟಿಸಲಾಗಿದೆ. ತೋರಣ ದ್ವಾರಗಳು, ಬೋಧಿ ವೃಕ್ಷ, ಸಂಗೀತ ಕಾರಂಜಿ ಮತ್ತು ಬೆಳಕು ಈ ಸ್ಮಾರಕದ ಇತರ ಅಂಶಗಳಾಗಿವೆ.