ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಅತಿ ಉದ್ದದ ರಸ್ತೆ ಸುರಂಗ ಮಾರ್ಗ-9 ಕಿಲೋ ಮೀಟರ್ ಉದ್ದ ಇರುವ ‘ಚೆನಾನಿ – ನಶ್ರೀ ಸುರಂಗ’ವನ್ನು 2017ರ ಏಪ್ರಿಲ್ 2ರಂದು ದೇಶಕ್ಕೆ ಸಮರ್ಪಣೆ ಮಾಡಲಿದ್ದಾರೆ.
ರಾಷ್ಟ್ರೀಯ ಹೆದ್ದಾರಿ -44ರಲ್ಲಿರುವ ಈ ಸುರಂಗ ಮಾರ್ಗವು ಜಮ್ಮು ಮತ್ತು ಶ್ರೀನಗರವನ್ನು ಸಂಪರ್ಕಿಸಲಿದ್ದು, ಈ ಎರಡು ನಗರಗಳ ನಡುವಿನ ಪ್ರಯಾಣದ ಅವಧಿಯನ್ನು 2 ಗಂಟೆಗಳವರೆಗೆ ಉಳಿಸಲಿದೆ. ಇದು ಎತ್ತರ ಶ್ರೇಣಿಯಲ್ಲಿ ಸಾಗಬೇಕಿದ್ದ ಮಾರ್ಗದ ದೂರವನ್ನು 31 ಕಿಲೋ ಮೀಟರ್ ಕಡಿಮೆ ಮಾಡಿದೆ. ಇದರಿಂದ ಪ್ರತಿ ದಿನ 27 ಲಕ್ಷ ರೂಪಾಯಿ ಮೊಲ್ಯದ ಇಂಧನದ ಉಳಿತಾಯವಾಗಲಿದೆ ಎಂದು ಅಂದಾಜು ಮಾಡಲಾಗಿದೆ.
ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶ ಮತ್ತು ಮರಗಳಿಗೆ ಕೊಡಲಿ ಇಡುವುದನ್ನು ತಪ್ಪಿಸಿರುವ ಸುರಂಗವು, ಜಮ್ಮು ಮತ್ತು ಉಧಾಮಂಪುರ್ ನಿಂದ ರಾಮ್ ಬನ್, ಬನಿಹಾಲ್ ಮತ್ತು ಶ್ರೀನಗರ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಸುರಕ್ಷಿತ, ಸರ್ವಋತು ಮಾರ್ಗವನ್ನು ಒದಗಿಸಿದೆ.
ಈ ಸುರಂಗ ಮಾರ್ಗವು ವಿಶ್ವದರ್ಜೆಯ ಸುರಕ್ಷತಾ ಸಾಧನಗಳನ್ನೂ ಒಳಗೊಂಡಿದೆ ಮತ್ತು ಜಮ್ಮು ಕಾಶ್ಮೀರ ರಾಜ್ಯದ ಆರ್ಥಿಕ ಚಟುವಟಿಕೆ ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ.
ಸುರಂಗದ ಪ್ರಮುಖ ಅಂಶಗಳು
• ಇದು ಏಕ-ಕೊಳವೆಯ ಎರಡು ದಿಕ್ಕಿನ ಸುರಂಗವಾಗಿದ್ದು, 9.35 ಮೀಟರ್ ಗಳ ಸವಾರಿ ಬಂಡಿ ದಾರಿಯಾಗಿದೆ ಮತ್ತು 5 ಮೀಟರ್ ಗಳ ಲಂಬವಾಗಿದೆ.
ಜೊತೆಗೆ ಮುಖ್ಯ ಸುರಂಗವನ್ನೇ ಸಂಪರ್ಕಿಸುವ 300 ಮೀಟರುಗಳ "ತಿರುವು ಹಾದಿಗಳನ್ನು" ಒಳಗೊಂಡ ಪಾರು ಸುರಂಗಗಳನ್ನೂ ಇದು ಒಳಗೊಂಡಿದೆ.
ಸಮಗ್ರ ಸಂಚಾರ ನಿಯಂತ್ರಣ ವ್ಯವಸ್ಥೆ;ನಿಗಾ, ಗಾಳಿ ಬೆಳಕಿನ ವ್ಯವಸ್ಥೆ ಮತ್ತು ಪ್ರಸಾರ ವ್ಯವಸ್ಥೆ;ಅಗ್ನಿಶಾಮಕ ವ್ಯವಸ್ಥೆ; ಮತ್ತು ಪ್ರತಿ 150 ಮೀಟರ್ ಅಂತರದಲ್ಲಿ ಎಸ್.ಓ.ಎಸ್. ಕರೆ – ಪೆಟ್ಟಿಗೆಗಳು ಯಂಥ ವಿಶೇಷ ಅಂಶಗಳನ್ನೂ ಇದು ಒಳಗೊಂಡಿದೆ.
ಈ ಯೋಜನೆಯನ್ನು 2500 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ.