ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 21 ರಂದು ಅಂದರೆ ನಾಳೆ ರಾಷ್ಟ್ರದ ರಾಜಧಾನಿ ದೆಹಲಿಯ ವಿಜ್ಞಾನ ಭವನದಲ್ಲಿ ಜಿಲ್ಲೆಗಳು/ಜಾರಿ ಘಟಕಗಳು ಮತ್ತು ಇತರ ಕೇಂದ್ರ /ರಾಜ್ಯ ಸರ್ಕಾರದ ಸಂಸ್ಥೆಗಳ ಗುರುತಿಸಲಾದ ಕಾರ್ಯಕ್ರಮಗಳು ಮತ್ತು ನಾವಿನ್ಯತೆಯನ್ನು ಸಮರ್ಥವಾಗಿ ಅನುಷ್ಠಾನ ಮಾಡಿದ ಸಾರ್ವಜನಿಕ ಆಡಳಿತಕ್ಕೆ ಉತ್ಕೃಷ್ಟತಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಇದೇ ಸಮಾರಂಭದಲ್ಲಿ ಅವರು ಸಾರ್ವಜನಿಕ ಸೇವಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಸಾರ್ವಜನಿಕ ಆಡಳಿತದಲ್ಲಿ ನಾಗರಿಕರ ಕಲ್ಯಾಣಕ್ಕಾಗಿ ಜಿಲ್ಲೆಗಳು ಮತ್ತು ಕೇಂದ್ರ ಹಾಗೂರಾಜ್ಯ ಸರ್ಕಾರಗಳ ಸಂಘಟನೆಗಳು ಮಾಡಿದ ಉತ್ಕೃಷ್ಟತೆ ಕಾರ್ಯವನ್ನು ಗುರುತಿಸಲು, ಪರಿಗಣಿಸಲು ಮತ್ತು ಪುರಸ್ಕರಿಸಲು ಪ್ರಧಾನಮಂತ್ರಿಯವರ ಉತ್ಕೃಷ್ಟತಾ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ನಾಲ್ಕು ಆದ್ಯತೆಯ ಕಾರ್ಯಕ್ರಮಗಳನ್ನು ಪ್ರಶಸ್ತಿಗೆ ಗುರುತಿಸಲಾಗಿದೆ. i) ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆ, ii)ಡಿಜಿಟಲ್ ಪಾವತಿ ಉತ್ತೇಜನ, iii) ಪ್ರಧಾನಮಂತ್ರಿ ವಸತಿ ಯೋಜನೆ – ನಗರ ಮತ್ತು ಗ್ರಾಮೀಣ ಹಾಗೂ iv)ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ. ಇದರ ಜೊತೆಗೆ ನಾವಿನ್ಯತೆಗಾಗಿ ಜಿಲ್ಲೆಗಳು ಮತ್ತು ಕೇಂದ್ರ, ರಾಜ್ಯ ಸಂಘಟನೆಗಳಿಗೆ ಪ್ರಶಸ್ತಿಯೂ ಇದೆ. ನಾಲ್ಕು ಆಯ್ದ ಆದ್ಯತೆಯ ಕಾರ್ಯಕ್ರಮಗಳಿಗೆ 11 ಪ್ರಶಸ್ತಿಗಳನ್ನು ಈ ವರ್ಷ ನೀಡಲಾಗುತ್ತಿದೆ. ಇದರಲ್ಲಿ ಎರಡು ಪ್ರಶಸ್ತಿಗಳನ್ನು ಕೇಂದ್ರ/ರಾಜ್ಯ ಸರ್ಕಾರಗಳ/ಜಿಲ್ಲೆಯಗಳ ನಾವಿನ್ಯತೆಗೆ ನೀಡಲಾಗುತ್ತಿದೆ. ಈ ಪೈಕಿ ಒಂದು ಪ್ರಶಸ್ತಿಯನ್ನು ಆಶಯ ಜಿಲ್ಲೆಗೆ ನೀಡಲಾಗುತ್ತಿದೆ.
ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. “ಹೊಸ ಮಾರ್ಗಗಳು’’ ಗುರುತಿಸಲಾದ ಆದ್ಯತೆಯ ಕಾರ್ಯಕ್ರಮ ಮತ್ತು ನಾವಿನ್ಯತೆಯ ಜಾರಿ ಕುರಿತ ಯಶೋಗಾಥೆಯಾಗಿದ್ದರೆ, “ಆಕಾಂಕ್ಷೆಯ ಜಿಲ್ಲೆಗಳು: ಸಾಮರ್ಥ್ಯದ ಅನಾವರಣ’ಆಕಾಂಕ್ಷೆಯ ಜಿಲ್ಲೆಗಳ ಪರಿವರ್ತನೆಯ ಹೊರಹೊಮ್ಮುವ ಕಾರ್ಯತಂತ್ರ ಕುರಿತದ್ದಾಗಿದೆ.
PM will confer Awards for Excellence in Public Administration for effective implementation of identified Priority Programs & Innovation to districts/implementing units & other Central/State organisations at a programme in Delhi this evening. He will also address civil servants.
— PMO India (@PMOIndia) April 21, 2018
PM Awards for Excellence in Public Administration have been instituted with a view to acknowledge, recognize and reward the exemplary work for citizen’s welfare by Districts & Organisations of the Central and State Governments.
— PMO India (@PMOIndia) April 21, 2018
PM will release 2 books on this occasion. ‘New Pathways’ is a compilation of Success stories on implementation of identified Priority Programmes & Innovations while ‘Aspirational Districts: Unlocking Potentials’ is an account of strategies for transforming Aspirational Districts.
— PMO India (@PMOIndia) April 21, 2018