ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ‘ಶ್ರೀ ರಾಮ ಜನ್ಮಭೂಮಿ ಮಂದಿರ’ ಶಿಲಾನ್ಯಾಸ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಕಾರ್ಯಕ್ರಮಕ್ಕೆ ಮುನ್ನ, ಪ್ರಧಾನಮಂತ್ರಿಯವರು ಹನುಮಾನ್ ಗಢಿಯಲ್ಲಿ ಪೂಜಾ ಮತ್ತು ದರ್ಶನದಲ್ಲಿ ಭಾಗಿಯಾಗಲಿದ್ದಾರೆ. ನಂತರ ಅಲ್ಲಿಂದ ಶ್ರೀರಾಮ ಜನ್ಮಭೂಮಿಗೆ ತೆರಳಿ, ವಿರಾಜಮಾನನಾದ ಭಗವಾನ್ ಶ್ರೀರಾಮ ಲಲ್ಲಾ ಪೂಜಾ ಮತ್ತು ದರ್ಶನದಲ್ಲಿ ಭಾಗಿಯಾಗಲಿದ್ದಾರೆ. ನಂತರ ಅವರು ಪಾರಿಜಾತದ ಸಸಿಯನ್ನು ನೆಡಲಿದ್ದಾರೆ ಮತ್ತು ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಪ್ರಧಾನಮಂತ್ರಿಯವರು ಶಿಲಾನ್ಯಾಸದ ಅಂಗವಾಗಿ ಫಲಕ ಅನಾವರಣ ಮಾಡಲಿದ್ದಾರೆ ಮತ್ತು ‘ಶ್ರೀರಾಮ ಜನ್ಮಭೂಮಿ ಮಂದಿರ’ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಲಿದ್ದಾರೆ.