ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ, 26 , 2019 ರಂದು ನವದೆಹಲಿಯ ಕೈಲಾಸ ಪೂರ್ವದ ಇಸ್ಕಾನ್ –ಗ್ಲೋರಿ ಆಫ್ ಇಂಡಿಯಾ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯುವ ಗೀತ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಅವರು ಇಸ್ಕಾನ್ ಭಕ್ತರು ರೂಪಿಸಿದ ಭಗವದ್ಗೀತಾವನ್ನು ಅನಾವರಣ ಮಾಡುವರು. 2.8 ಮೀಟರ್ ಗೂ ಹೆಚ್ಚಿನ ಅಳತೆಯ 800 ಕಿ.ಗ್ರಾಂ ಗೂ ಅಧಿಕ ಭಾರದ ಭಗವದ್ಗೀತಾ ವಿಶ್ವದಲ್ಲಿಯೇ ವಿಶೇಷವಾದುದು. ಇದು ಭಗವದ್ಗೀತೆಯ ಮೂಲ ಶ್ಲೋಕಗಳ ಜೊತೆ ಅದರ ಸಾರವನ್ನೂ , ವಿವರಣೆಯನ್ನೂ ಒಳಗೊಂಡಿರುತ್ತದೆ. ಪ್ರಧಾನಮಂತ್ರಿ ಅವರು ಈ ಭಗವದ್ಗೀತೆಯ ಪುಟವನ್ನು ತೆರೆಯುವ ಮೂಲಕ ಅದರ ಅಧಿಕೃತ ಉದ್ಘಾಟನೆಯನ್ನು ಮಾಡಲಿದ್ದಾರೆ.
ಪ್ರಧಾನಮಂತ್ರಿ ಅವರು ಬಳಿಕ ಸಭಿಕರನ್ನುದ್ದೇಶಿಸಿ ಮಾತನಾಡುವರು.