ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಾಸ್ತಾನದ, ಬರ್ಮೆರ್ ಜಿಲ್ಲೆಯ ರಾಜಾಸ್ತಾನ್ ಶುದ್ಧೀಕರಣಾಗಾರದ ಕಾರ್ಯಾಚರಣೆಯ ಅಂಗವಾಗಿ 2018ರ ಜನವರಿ 16ರಂದು ನಡೆಯಲಿರುವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಅವರು ಅಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ರಾಜಾಸ್ತಾನದಲ್ಲಿ ಗಣನೀಯ ಪ್ರಮಾಣದ ತೈಲ ಮತ್ತು ಅನಿಲ ಸಂಪತ್ತಿದೆ. ರಾಜಾಸ್ತಾನ ಶುದ್ಧೀಕರಣಾಗಾರ ರಾಜ್ಯದ ಪ್ರಥಮ ಘಟಕವಾಗಿದೆ. ಇದು 9 ಎಂ.ಎಂ.ಟಿ.ಪಿ.ಎ. ಶುದ್ಧೀಕರಣಾಗಾರ ಮತ್ತು ಪೆಟ್ರೋ ಕೆಮಿಕಲ್ ಸಮುಚ್ಛಯ ಒಳಗೊಂಡಿದೆ. ಸಂಸ್ಕರಣಾಗಾರದಿಂದ ಉತ್ಪನ್ನದ ಉತ್ಪಾದನೆಯು ಮುಂದುವರಿದ ಬಿಎಸ್-VI ಹೊರಸೂಸುವಿಕೆ ನಿಯಮಗಳಿಗೆ ಅನುಗುಣವಾಗಿರುತ್ತವೆ. ಈ ಯೋಜನೆಯ 43 ಸಾವಿರ ಕೋಟಿ ರೂಪಾಯಿಗೂ ಹೆಚ್ಚಾಗಿದೆ. ಇದು ಎಚ್.ಪಿ.ಸಿ.ಎಲ್. ಮತ್ತು ರಾಜಾಸ್ತಾನ ಸರ್ಕಾರದ ಜಂಟಿ ಸಹಯೋಗದ ಯೋಜನೆಯಾಗಿದೆ.
ರಾಜಾಸ್ತಾನದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಹಾಗೂ ಕೇಂದ್ರದ ಹಲವು ಸಚಿವರು ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.