2018ರ ಸೆಪ್ಟೆಂಬರ್ 14ರಂದು ಇಂದೋರ್ ನಲ್ಲಿ ದಾವೂದಿ ಬೋಹ್ರಾ ಸಮುದಾಯ ಆಯೋಜಿಸಿರುವ ಇಮಾಮ್ ಹುಸೇನ್ (ಎಸ್ಎ) ಹುತಾತ್ಮರ ಸ್ಮರಣೆ – ಅಶಾರ ಮುಬಾರಕದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ.
ಅಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮ ದಾವೂದಿ ಬೋಹ್ರಾ ಸಮುದಾಯದ ಆಧ್ಯಾತ್ಮಿಕ ಮುಖ್ಯಸ್ಥ ಪರಮಪೂಜ್ಯ ಡಾ. ಸ್ಯೆದ್ನಾ ಮುಫದ್ದಲ್ ಸೈಫುದ್ದೀನ್ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌವ್ಹಾಣ್ ಅವರ ಭಾಷಣಗಳನ್ನೂ ಒಳಗೊಂಡಿದೆ.