ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2016ರ ಸೆಪ್ಟೆಂಬರ್ 7ರಿಂದ 2016ರ ಸೆಪ್ಟೆಂಬರ್ 8ರವರೆಗೆ ಲಾವೋಸ್ ನ ರಾಜಧಾನಿ ನಗರಿ ವಿಯೆಂಟಿಯಾನ್ ನಲ್ಲಿ 14 ಆಷಿಯಾನ್- ಭಾರತ ಶೃಂಗಸಭೆ ಮತ್ತು 11ನೇ ಪೂರ್ವ ಏಷ್ಯಾ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಫೇಸ್ ಬುಕ್ ಖಾತೆಯಲ್ಲಿನ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
“ನಾನು, 14ನೇ ಆಸಿಯಾನ್-ಭಾರತ ಶೃಂಗಸಭೆ ಮತ್ತು 11ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಲಾವೋ ಪಿ.ಡಿ.ಆರ್., ವಿಯೆಂಟಿಯಾನ್ ಗೆ 2016ರ ಸೆಪ್ಟೆಂಬರ್ 7-8ರಂದು ಭೇಟಿ ನೀಡುತ್ತಿದ್ದೇನೆ. ಈ ಶೃಂಗಸಭೆಗಳಲ್ಲಿ ನಾನು ಪಾಲ್ಗೊಳ್ಳುತ್ತಿರುವುದು ಇದು ಮೂರನೇ ಬಾರಿ.
ಆಸಿಯಾನ್ ನಮ್ಮ ಪೂರ್ವದತ್ತ ಕ್ರಮ ನೀತಿಯ ಪ್ರಮುಖ ಪಾಲುದಾರನಾಗಿದೆ. ಆಸಿಯಾನ್ ನೊಂದಿಗಿನ ನಮ್ಮ ಕಾರ್ಯತಂತ್ರಾತ್ಮಕ ಪಾಲುದಾರಿಕೆ ನಮ್ಮ ಈಶಾನ್ಯ ವಲಯದ ಆರ್ಥಿಕ ಅಭಿವೃದ್ಧಿಗೆ ಮುಖ್ಯವಾಗಿದೆ. ಅಷ್ಟೇ ಅಲ್ಲದೆ ಆಸಿಯಾನ್ ನೊಂದಿಗಿನ ನಮ್ಮ ವ್ಯೂಹಾತ್ಮಕ ಪಾಲುದಾರಿಕೆಯು ನಮ್ಮ ಭದ್ರತೆಯ ಹಿತವನ್ನು ಕಾಪಾಡಲು ಮತ್ತು ಉತ್ತೇಜಿಸಲು ಹಾಗೂ ವಲಯದಲ್ಲಿ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಭದ್ರತಾ ಸವಾಲುಗಳನ್ನು ಎದುರಿಸಲು ಮಹತ್ವದ್ದಾಗಿದೆ. ಪೂರ್ವ ಏಷ್ಯಾ ಶೃಂಗಸಭೆಯು ಏಷ್ಯಾ ಪೆಸಿಫಿಕ್ ವಲಯದ ಅವಕಾಶಗಳು ಮತ್ತು ಸವಾಲುಗಳ ಬಗ್ಗೆ ಚರ್ಚಿಸಲು ಪ್ರಧಾನ ವೇದಿಕೆಯಾಗಿದೆ.
ಆಗ್ನೇಯ ಏಷ್ಯಾದ ರಾಷ್ಟ್ರಗಳೊಂದಿಗಿನ ನಮ್ಮ ಬಾಂಧವ್ಯ ನಿಜಕ್ಕೂ ಐತಿಹಾಸಿಕವಾಗಿದೆ.
ನಮ್ಮ ಕಾರ್ಯಕ್ರಮಗಳು ಮತ್ತು ನಿಲುವುಗಳನ್ನು ಒಂದು ಪದದಲ್ಲಿ ಹೇಳಬಹುದು – ಸಂಪರ್ಕ. ನಮ್ಮ ಜನರೊಂದಿಗಿನ ಹೆಚ್ಚಿನ ನಂಟು ಕಾಣಲು, ನಮ್ಮ ಸಾಂಸ್ಥಿಕ ಸಂಪರ್ಕವನ್ನು ಬಲಪಡಿಸು ಮತ್ತು ನಮ್ಮ ಎಲ್ಲ ಜನರ ಅನುಕೂಲಕ್ಕಾಗಿ ಪರಸ್ಪರ ಪ್ರಯೋಜನಕ್ಕಾಗಿ ಆಧುನಿಕ ಸಂಪರ್ಕಿತ ವಿಶ್ವದ ಅವಕಾಶವನ್ನು ಪಡೆಯಲು ನಾವು ನಮ್ಮ ಭೌದ್ಧಿಕ ಮತ್ತು ಡಿಜಿಟಲ್ ಸಂಪರ್ಕವನ್ನು ಹೆಚ್ಚಿಸಲು ಬಯಸುತ್ತೇವೆ.
ಈ ಭೇಟಿಯ ಕಾಲದಲ್ಲಿ, ಇದರಲ್ಲಿ ಪಾಲ್ಗೊಳ್ಳುವ ಇತರ ರಾಷ್ಟ್ರಗಳ ನಾಯಕರೊಂದಿಗೆ ಪರಸ್ಪರ ಹಿತದ ದ್ವಿಪಕ್ಷೀಯ ಮಾತುಕತೆ ನಡೆಸುವ ಅವಕಾಶವೂ ನನಗೆ ದೊರಕಲಿದೆ.” ಎಂದು ಪ್ರಧಾನಿ ಹೇಳಿದ್ದಾರೆ.
Will attend the ASEAN-India Summit & East Asia Summit in Vientiane, Lao PDR on 7th & 8th September. https://t.co/TmeToe9Mpp
— Narendra Modi (@narendramodi) September 6, 2016
Close ties with ASEAN is key to our Act East Policy. We seek more economic & people-to-people ties with ASEAN for benefit of our citizens.
— Narendra Modi (@narendramodi) September 6, 2016