ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ (ಎಲ್.ಬಿ.ಎಸ್.ಎನ್.ಎ.ಎ.) ನಲ್ಲಿ ಮಾರ್ಚ್ 17 ರಂದು ಮಧ್ಯಾಹ್ನ 12.00ಗಂಟೆಗೆ ನಡೆಯುವ 96 ನೇ ಕಾಮನ್ ಫೌಂಡೇಶನ್ ಕೋರ್ಸ್‌ ನ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೊ ಸಮಾವೇಶ ಮೂಲಕ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ನೂತನ ಕ್ರೀಡಾ ಸಂಕೀರ್ಣವನ್ನು ಉದ್ಘಾಟಿಸಲಿದ್ದಾರೆ ಮತ್ತು ನವೀಕರಿಸಿದ ಹ್ಯಾಪಿ ವ್ಯಾಲಿ ಕಾಂಪ್ಲೆಕ್ಸ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ (ಎಲ್.ಬಿ.ಎಸ್.ಎನ್.ಎ.ಎ.) ಇದರ  96 ನೇ ಫೌಂಡೇಶನ್ ಕೋರ್ಸ್ ನಲ್ಲಿ ನೂತನವಾಗಿ ಮಿಷನ್ ಕರ್ಮಯೋಗಿಯ (ಕರ್ಮಯೋಗಿಯ ಸಂಕಲ್ಪ ಯೋಜನೆಗಳ) ತತ್ವಗಳ ಆಧಾರದ ಮೇಲೆ ಹೊಸ ಶಿಕ್ಷಣ ಮತ್ತು ಪಠ್ಯ ವಿನ್ಯಾಸದೊಂದಿಗೆ ಸಂಪೂರ್ಣ ಕೋರ್ಸ್ ಅನ್ನು ರೂಪಿಸಲಾಗಿದೆ. ಇದು ಈ ನೂತನ ಶಿಕ್ಷಣ ವ್ಯವಸ್ಥೆಯ ನಿಟ್ಟಿನಲ್ಲಿ ಮೊದಲ ಸಾಮಾನ್ಯ ಫೌಂಡೇಶನ್ ಕೋರ್ಸ್ ಆಗಿದೆ. ಈ ಅಧಿಕಾರಿ ತರಬೇತಿದಾರರ(ಆಫೀಸರ್ ಟ್ರೈನಿಗಳ) ತಂಡದಲ್ಲಿ 16 ಸೇವೆಗಳಿಂದ ಮತ್ತು 3 ರಾಯಲ್ ಭೂತಾನ್ ಸೇವೆ (ಆಡಳಿತ, ಪೊಲೀಸ್ ಮತ್ತು ಅರಣ್ಯ)ಗಳಿಂದ  ಆಯ್ದ ಒಟ್ಟು 488 ಅಧಿಕಾರಿ ತರಬೇತಿದಾರಿದ್ದಾರೆ.

ಯುವ ಹುಮ್ಮಸ್ಸಿನ ತಂಡಗಳ ಸಾಹಸಮಯ ಮತ್ತು ನವೀನ ಮನೋಭಾವವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು, ಮಿಷನ್ ಕರ್ಮಯೋಗಿಯ ತತ್ವಗಳಿಂದ ಮಾರ್ಗದರ್ಶಿಸಲ್ಪಟ್ಟ ಹೊಸ ಶಿಕ್ಷಣ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿ ನೂತನ ಪಠ್ಯ ಕ್ರಮಗಳನ್ನು ರೂಪಿಸಲಾಗಿದೆ. "ಸಬ್ಕಾ ಪ್ರಯಾಸ್" ಮನೋ ಚಿಂತನೆಯ ಉತ್ಸಾಹದಲ್ಲಿ ಪದ್ಮ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ಏರ್ಪಡಿಸುವುದು ಮತ್ತು ಗ್ರಾಮ ಭೇಟಿಯಂತಹ ಉಪಕ್ರಮಗಳ ಮೂಲಕ ಗ್ರಾಮೀಣ ಭಾರತದ ವ್ಯವಸ್ಥೆಗಳಲ್ಲಿ ಅಧಿಕಾರಿಗಳ ತರಬೇತಿಯನ್ನು ತಲ್ಲೀನಗೊಳಿಸುವ ವಾಸ್ತವಿಕ ಅನುಭವಕ್ಕಾಗಿ ನೂತನ ಪಠ್ಯ ವ್ಯವಸ್ಥೆ ರೂಪಿಸಲಾಗಿದೆ. ವಿದ್ಯಾರ್ಥಿ/ನಾಗರಿಕರನ್ನು ಸಾರ್ವಜನಿಕ ಸೇವಕರನ್ನಾಗಿ ಪರಿವರ್ತಿಸಲು ಈ ರೀತಿಯ ನೂತನ ಶೈಕ್ಷಣಿಕ ವ್ಯವಸ್ಥೆಗಳಿಗೆ ತರಬೇತಿ ವ್ಯವಸ್ಥೆಯಲ್ಲಿ ಒತ್ತು ನೀಡಲಾಗಿದೆ. ಈ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರು ಎದುರಿಸುತ್ತಿರುವ ವಾಸ್ತವಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಅಧಿಕಾರಿ/ವಿದ್ಯಾರ್ಥಿ ತರಬೇತಿದಾರರು ದೂರದ/ಗಡಿ ಪ್ರದೇಶಗಳಲ್ಲಿನ ಹಳ್ಳಿಗಳಿಗೆ ತಮ್ಮ ತರಬೇತಿ ಅವಧಿಯಲ್ಲಿ ಭೇಟಿ ನೀಡಬೇಕಾಗಿದೆ. ನಿರಂತರ ಶ್ರೇಣೀಕೃತ ಕಲಿಕೆ ಮತ್ತು ಸ್ವಯಂ-ಮಾರ್ಗದರ್ಶಿ ಕಲಿಕೆಯ ತತ್ವಕ್ಕೆ ಅನುಗುಣವಾಗಿ ಮಾಡ್ಯುಲರ್ ವಿಧಾನಗಳ ಮೂಲಕ ಅಧಿಕಾರಿಗಳ ತರಬೇತಿಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಈ ನೂತನ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಆರೋಗ್ಯ ಪರೀಕ್ಷೆಗಳ ಜೊತೆಗೆ,  'ಪರೀಕ್ಷೆಯ ಹೊರೆಯ (ಒತ್ತಡವಿರುವ) ವಿದ್ಯಾರ್ಥಿ'ಯನ್ನು 'ಆರೋಗ್ಯವಂತ ಯುವ ಅಧಿಕಾರಿ(ನಾಗರಿಕ ಸೇವಕ)' ಆಗಿ ಪರಿವರ್ತಿಸುವುದಾಗಿದೆ. ಆರೋಗ್ಯಕರ ವಾತಾವರಣ ಬೆಂಬಲಿಸಿ ಉತ್ತೇಜಿಸುವ ನೂತನ ಆರೋಗ್ಯಕರ ಫಿಟ್‌ನೆಸ್ ಪರೀಕ್ಷೆಗಳನ್ನು ಸಹ ತಂಡಗಳ ಸದಸ್ಯರಿಗೆ ನಡೆಸಲಾಗಿದೆ. ಸ್ವರಕ್ಷಣಾ ಯುದ್ದ ಕಲೆyAd ಕ್ರಾವ್ ಮಗಾ ಮತ್ತು ಇತರ ವಿವಿಧ ಸಾಹಸಮಯ ಕ್ರೀಡೆಗಳಲ್ಲಿ ಮೊದಲ ಹಂತದ ತರಬೇತಿಯನ್ನು ಎಲ್ಲಾ 488 ಆಧಿಕಾರಿ ತರಬೇತುದಾರರಿಗೆ (ಆಫೀಸರ್ ಟ್ರೈನಿಗಳಿಗೆ) ನೀಡಲಾಗಿದೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
How India is looking to deepen local value addition in electronics manufacturing

Media Coverage

How India is looking to deepen local value addition in electronics manufacturing
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 22 ಎಪ್ರಿಲ್ 2025
April 22, 2025

The Nation Celebrates PM Modi’s Vision for a Self-Reliant, Future-Ready India