ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿಸೆಂಬರ್ 31 ಹಾಗೂ ಜನವರಿ 1ರಂದು ಎರಡು ಮಹತ್ವದ ವಿಡಿಯೋ ಸಂವಾದದ ಮೂಲಕ ಭಾಷಣ ಮಾಡಲಿದ್ದಾರೆ.
ಭಾರತದ ಸಮಾಜ ಸುಧಾರಕ ಮತ್ತು ಶ್ರೇಷ್ಠ ಸಂತ ಶ್ರೀ ನಾರಾಯಣ ಗುರು ಅವರ ಆವಾಸಸ್ಥಾನ ಕೇರಳದ ವರ್ಕಲಾ, ಶಿವಗಿರಿಮಠ್ ನಲ್ಲಿ ನಡೆಯಲಿರುವ 85ನೇ ಶಿವಗಿರಿ ಯಾತ್ರಾ ಮಹೋತ್ಸವ ಉದ್ದೇಶಿಸಿ ಡಿಸೆಂಬರ್ 31ರಂದು, ಪ್ರಧಾನಮಂತ್ರಿಯವರು ಉದ್ಘಾಟನಾ ಭಾಷಣ ಮಾಡಲಿದ್ದಾರೆ.
2018ರ ಜನವರಿ 1ರಂದು ಪ್ರಧಾನಮಂತ್ರಿಯವರು ವಿಡಿಯೋ ಸಂವಾದದ ಮೂಲಕ ಪ್ರೊ. ಎಸ್.ಎನ್. ಭೋಸ್ ಅವರ 125ನೇ ಜಯಂತಿಯ ಅಂಗವಾಗಿ ಕೋಲ್ಕತ್ತಾದಲ್ಲಿ ನಡೆಯಲಿರುವ ಪೂರ್ವಭಾವಿ ಸಮಾರಂಭ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಪ್ರೊ. ಸತ್ಯೇಂದ್ರ ನಾಥ್ ಭೋಸ್ ಅವರು ಭಾರತದ ಭೌತವಿಜ್ಞಾನಿಯಾಗಿದ್ದು, ಅವರು ಭೋಸ್-ಐನ್ ಸ್ಟೀನ್ ಸಂಖ್ಯಾಶಾಸ್ತ್ರಕ್ಕೆ ಬುನಾದಿ ಒದಗಿಸಿದ ಕ್ವಾಂಟಮ್ ಮೆಕ್ಯಾನಿಕ್ಸ್ ನಲ್ಲಿ ಮಾಡಿದ ಕಾರ್ಯಕ್ಕಾಗಿ ಖ್ಯಾತರಾಗಿದ್ದಾರೆ. ಬೋಸ್-ಐನ್ ಸ್ಟೀನ್ ಸಂಖ್ಯಾಶಾಸ್ತ್ರಕ್ಕೆ ಅನುಗುಣವಾಗಿರುವ ಕಣಗಳ ವರ್ಗವನ್ನು ಪ್ರೊಫೆಸರ್ ಬೋಸ್ ನಿಧನಾ ನಂತರ ಬೋಸನ್ಸ್ ಎಂದು ಹೆಸರಿಸಲಾಗಿದೆ.