ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 17ರಂದು ಮಧ್ಯಾಹ್ನ 12.30ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಾಸ್ಕಾಮ್ ತಂತ್ರಜ್ಞಾನ ಮತ್ತು ನಾಯಕತ್ವ ವೇದಿಕೆ (ಎನ್.ಟಿ.ಎಲ್.ಎಫ್.) ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಎನ್.ಟಿ.ಎಲ್.ಎಫ್. ಬಗ್ಗೆ
ಎನ್.ಟಿ.ಎಲ್.ಎಫ್.ನ 29ನೇ ಆವೃತ್ತಿಯನ್ನು 2021ರ ಫೆಬ್ರವರಿ 17ರಿಂದ 19ರವರೆಗೆ ಆಯೋಜಿಸಲಾಗಿದೆ. ಇದು ತಂತ್ರಾಂಶ ಮತ್ತು ಸೇವಾ ಕಂಪನಿಗಳ ರಾಷ್ಟ್ರೀಯ ಸಂಸ್ಥೆ –(ನಾಸ್ಕಾಮ್)ನ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ. ಈ ವರ್ಷದ ಕಾರ್ಯಕ್ರಮದ ಧ್ಯೇಯವಾಕ್ಯ 'ಉತ್ತಮ ಸಾಮಾನ್ಯಕ್ಕಾಗಿ ಭವಿಷ್ಯ ರೂಪಿಸುವತ್ತ' ಎಂಬುದಾಗಿದೆ. ಈ ಕಾರ್ಯಕ್ರಮದಲ್ಲಿ 30 ರಾಷ್ಟ್ರಗಳ 1600 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಮತ್ತು ಮೂರು ದಿನಗಳ ಮಾತುಕತೆ ವೇಳೆ 30ಕ್ಕೂ ಹೆಚ್ಚು ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತದೆ.