ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ರ ಡಿಸೆಂಬರ್ 12 ರಂದು ಮಧ್ಯಾಹ್ನ 12 ಗಂಟೆಗೆ ವಿಜ್ಞಾನ ಭವನದಲ್ಲಿ “ಠೇವಣಿದಾರರು ಮೊದಲು : ಕಾಲಮಿತಿಯಲ್ಲಿ 5 ಲಕ್ಷ ರೂಪಾಯಿವರೆಗೆ ವಿಮಾ ಬಾಂಡ್ ಠೇವಣಿ ಪಾವತಿ ಕುರಿತ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ.

ವಿಮಾ ಠೇವಣಿಯು ಉಳಿತಾಯ, ಸ್ಥಿರ, ಚಾಲ್ತಿ ಒಳಗೊಂಡು ಎಲ್ಲಾ ಠೇವಣಿಗಳಿಗೆ ಇದು ಅನ್ವಯಿಸುತ್ತದೆ. ಭಾರತದಲ್ಲಿನ ಎಲ್ಲಾ ವಾಣಿಜ್ಯ ಬ್ಯಾಂಕ್ ಗಳು, ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿನ ರಾಜ್ಯ, ಕೇಂದ್ರೀಯ ಮತ್ತು ಪ್ರಾಥಮಿಕ ಸಹಕಾರ ಬ್ಯಾಂಕ್ ಗಳಲ್ಲಿ ಇದು ಜಾರಿಗೆ ಬಂದಿದೆ. ಬ್ಯಾಂಕ್ ಠೇವಣಿ ವಿಮಾ ಸೌಲಭ್ಯವು 1 ರಿಂದ 5 ಲಕ್ಷ ರೂಪಾಯಿಗೆ ಏರಿಕೆಯಾಗಿದ್ದು, ಇದೊಂದು ಗಮನಾರ್ಹ ಸುಧಾರಣಾ ಕ್ರಮವಾಗಿದೆ.    

ಪ್ರತಿ ಬ್ಯಾಂಕ್ ನ ಪ್ರತಿಯೊಬ್ಬ ಠೇವಣಿದಾರರಿಗೆ 5 ಲಕ್ಷ ರೂಪಾಯಿವರೆಗೆ ಠೇವಣಿಗೆ  ವಿಮಾ ರಕ್ಷಣೆ ದೊರೆಯಲಿದೆ. ಕಳೆದ ಹಣಕಾಸು ವರ್ಷದ ಕೊನೆಯ ವೇಳೆಗೆ ಸಂಪೂರ್ಣ ರಕ್ಷಣೆ ಪಡೆದ ಖಾತೆಗಳ ಸಂಖ್ಯೆ 98.1% ರಷ್ಟಿದೆ. ಇದು ಅಂತಾರಾಷ್ಟ್ರೀಯ ಮಾನದಂಡವಾದ 80% ಕ್ಕಿಂತಲೂ ಅಧಿಕವಾಗಿದೆ.  

ಆರ್.ಬಿ.ಐ ನಿಯಂತ್ರಣದಲ್ಲಿರುವ 16 ನಗರ ಸಹಕಾರ ಬ್ಯಾಂಕ್ ಗಳ ಠೇವಣಿದಾರರಿಂದ ಪಡೆದ ಕ್ಲೈಮ್ ಗಳಿಗೆ ವಿಮೆ ಹಣ ಮತ್ತು ಸಾಲ ಖಾತರಿ ನಿಗಮ ಇತ್ತೀಚೆಗೆ ಮಧ್ಯಂತರ ಪಾವತಿಗಳ ಮೊದಲ ಕಂತು ಬಿಡುಗಡೆ ಮಾಡಿದೆ. ಅವರ ಕ್ಲೈಮುಗಳಿಗೆ ಅನುಗುಣವಾಗಿ 1 ಲಕ್ಷಕ್ಕೂ ಹೆಚ್ಚು ಠೇವಣಿದಾರರ ಪರ್ಯಾಯ ಬ್ಯಾಂಕ್ ಖಾತೆಗಳಿಗೆ 1,300 ಕೋಟಿ ರೂಪಾಯಿ ಮೊತ್ತವನ್ನು ಪಾವತಿಸಲಾಗಿದೆ.  

ಈ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವರು, ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವರು ಮತ್ತು ಆರ್.ಬಿ.ಐ ಗರ್ವನರ್ ಸಹ ಉಪಸ್ಥಿತರಿರಲಿದ್ದಾರೆ.

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
A comprehensive effort to contain sickle cell disease

Media Coverage

A comprehensive effort to contain sickle cell disease
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 11 ಆಗಸ್ಟ್ 2025
August 11, 2025

Appreciation by Citizens Celebrating PM Modi’s Vision for New India Powering Progress, Prosperity, and Pride