ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2018 ರ ಎಪ್ರಿಲ್ 9 ರಂದು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆಯುವ ಸಿ.ಪಿ.ಎಸ್.ಇ. ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೇಂದ್ರೀಯ ಸಾರ್ವಜನಿಕ ರಂಗದ ಉದ್ಯಮಗಳ ಹಿರಿಯ ಅಧಿಕಾರಿಗಳು ಮತ್ತು ಮಂತ್ರಾಲಯದ ಹಿರಿಯ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸುವರು. ಈ ಸಮಾವೇಶ ಸಿ.ಪಿ.ಎಸ್.ಇ. ಗಳ ಉತ್ತಮಾಂಶಗಳ ಪ್ರದರ್ಶಿಕೆಯನ್ನು ಒಳಗೊಂಡಿರುತ್ತದೆ.
ಮಧ್ಯಾಹ್ನ ಸಾಂಸ್ಥಿಕ ಆಡಳಿತ , ಮಾನವ ಸಂಪನ್ಮೂಲ ನಿರ್ವಹಣೆ, ಹಣಕಾಸು ಪುನರ್ ನಿರ್ವಹಣೆ ಮತ್ತು ಅನ್ವೇಷಣೆ ಇತ್ಯಾದಿ ವಿಷಯಗಳ ಬಗ್ಗೆ ಪ್ರಧಾನ ಮಂತ್ರಿಯವರಿಗೆ ಶೀರ್ಷಿಕೆ ಆಧಾರಿತ ಪ್ರದರ್ಶಿಕೆಗಳನ್ನು ಸಾದರಪಡಿಸಲಾಗುತ್ತದೆ. ಬಳಿಕ ಪ್ರಧಾನ ಮಂತ್ರಿಗಳು ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡುವರು.