ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಆಯೋಜಿತವಾಗಿರುವ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ)ದ ವಾರ್ಷಿಕ ಮಹಾಸಭೆ – 2021 ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಾಳೆ ಸಂಜೆ 4.30ಕ್ಕೆ ವೀಡಿಯೊ ಕಾನ್ಫರೆನ್ಸ್ ಮೂಲಕ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಲಿದ್ದಾರೆ. “ಭಾರತ@75: ಆತ್ಮನಿರ್ಭರ್ ಭಾರತ ಕಟ್ಟಲು ಸರ್ಕಾರ ಮತ್ತು ಉದ್ಯಮ ರಂಗ ಜತೆಗೂಡಿ ಕೆಲಸ ಮಾಡಲಿವೆ” ಎಂಬ ಘೋಷವಾಕ್ಯದಡಿ ಈ ಸಾಲಿನ ವಾರ್ಷಿಕ ಮಹಾಸಭೆ ಜರುಗಲಿದೆ.
ಸಿಐಐ ವಾರ್ಷಿಕ ಮಹಾಸಭೆ 2021 ಕುರಿತು
ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ವಾರ್ಷಿಕ ಮಹಾಸಭೆ ಆಗಸ್ಟ್ 11 ಮತ್ತು 12ರಂದು 2 ದಿನಗಳ ಕಾಲ ನಡೆಯಲಿದೆ. ಸಿಂಗಾಪುರದ ಉಪಪ್ರಧಾನ ಮಂತ್ರಿ ಮತ್ತು ಆರ್ಥಿಕ ನೀತಿಗಳ ಸಮನ್ವಯ ಸಚಿವ ಶ್ರೀಯತ ಹೆಂಗ್ ಸ್ವೀ ಕೀಟ್ ಅವರು ವಿಶೇಷ ಅಂತಾರಾಷ್ಟ್ರೀಯ ಅತಿಥಿ ಭಾಷಣಕಾರರಾಗಿ ಮಹಾಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಮಹಾಸಭೆಯಲ್ಲಿ ಹಲವು ಸಚಿವರು, ಉನ್ನತಾಧಿಕಾರಿಗಳು, ಭಾರತದ ಶೈಕ್ಷಣಿಕ ಮತ್ತು ಕೈಗಾರಿಕಾ ರಂಗದ ಹಲವು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.