ನವದೆಹಲಿಯ ಲಾಲ್ ಕಿಲಾ ಮೈದಾನದ 15 ಆಗಸ್ಟ್ ಪಾರ್ಕ್ ನಲ್ಲಿ ಜರುಗಿದ ದಸರಾ ಆಚರಣೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಗವಹಿಸಿದರು.
ಲವ-ಕುಶ ರಾಮಲೀಲಾ ಸಮಿತಿ ಆಯೋಜಿಸಿದ ರಾಮಲೀಲಾವನ್ನು ಪ್ರಧಾನಮಂತ್ರಿ ವೀಕ್ಷಿಸಿದರು. ಕಾರ್ಯಕ್ರಮದ ಅಂಗವಾಗಿ ದುಷ್ಟರ ವಿರುದ್ದ ಶಿಷ್ಟರ ಗೆಲುವಿನ ಸಂಕೇತವಾಗಿ ಬೃಹದಾಕಾರದ ರಾವಣ,ಕುಂಭಕರ್ಣ ಮತ್ತು ಮೇಘನಾಧರ ಆಕೃತಿಗಳ ದಹನಕ್ಕೆ ಅವರು ಸಾಕ್ಷಿಯಾದರು.
ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.