ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಲ್ದೀವ್ಸ್ ನಲ್ಲಿ ನಿನ್ನೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಶ್ರೀ ಇಬ್ರಾಹಿಮ್ ಮೊಹಮ್ಮದ್ ಸೋಲಿಹ್ ಅವರನ್ನು ಅಭಿನಂದಿಸಿದರು.
ಶ್ರೀ ಸೋಲಿಹ್ ಅವರ ನೇತೃತ್ವದಲ್ಲಿ ಮಾಲ್ದೀವ್ಸ್ ನಲ್ಲಿ ಪ್ರಜಾಪ್ರಭುತ್ವ, ಶಾಂತಿ ಮತ್ತು ಸಮೃದ್ಧತೆ ಸಬಲವಾಗಲಿ ಎಂಬ ಶುಭಹಾರೈಕೆಯನ್ನು ಪ್ರಧಾನಮಂತ್ರಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದರು.
ಶುಭಾಶಯ ಮತ್ತು ಅಭಿನಂದನೆಗಳಿಗಾಗಿ ಶ್ರೀ ಸೋಲಿಹ್ ಅವರು ಪ್ರಧಾನಮಂತ್ರಿ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ಎರಡೂ ದೇಶಗಳ ನಡುವಿನ ಸಾಮಿಪ್ಯದ ಆತ್ಮೀಯ ಮತ್ತು ಉತ್ತಮ ನೆರೆಕರೆಯ ಸಂಬಂಧ ಇನ್ನೂ ಬಲಿಷ್ಠಗೊಂಡು ಅತ್ಯಂತ ಸನಿಹದಿಂದ ಕಾರ್ಯ ನಿರ್ವಹಿಸಲು ಇಬ್ಬರೂ ನಾಯಕರು ಪರಸ್ಪರ ಒಪ್ಪಿಕೊಂಡಿದ್ದಾರೆ.